ಮತದಾರರ ಪಟ್ಟಿಯಲ್ಲಿ ದೋಷ: 9 ದಿನದಲ್ಲಿ 21,674 ಅರ್ಜಿಗಳು ಸಲ್ಲಿಕೆ

ಮತದಾರರ ಪಟ್ಟಿಯಲ್ಲಿ ದೋಷ: 9 ದಿನದಲ್ಲಿ 21,674 ಅರ್ಜಿಗಳು ಸಲ್ಲಿಕೆ

ಬೆಂಗಳೂರು: ಕಳೆದ 9 ದಿನಗಳ ಅವಧಿಯಲ್ಲಿ  ಚುನಾವಣೆ ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಮನವಿ ಮಾಡಿರುವ ಸುಮಾರು 21,674 ಅರ್ಜಿಗಳು ಬಂದಿವೆ.

ಈ ಕುರಿತು ರಾಜ್ಯ ಮುಖ್ಯ ಜಂಟಿ  ಚುನಾವಣಾಧಿಕಾರಿ ಶಂಭು ಭಟ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದಿಂದ 2315, ಬೆಂಗಳೂರು ಗ್ರಾಮಾಂತರದಿಂದ 238, ಬೆಂಗಳೂರು ಉತ್ತರ-178, ಬೆಂಗಳೂರು ದಕ್ಷಿಣ-984, ಬೆಂಗಳೂರು ಕೇಂದ್ರದಿಂದ 1060 ಅರ್ಜಿಗಳು ಬಂದಿವೆ.

ಮತದಾರರ ಪಟ್ಟಿಯಲ್ಲಿ ಹೆಸರು, ಜನ್ಮ ದಿನ, ವಿಳಾಸ, ಲಿಂಗ ಹೀಗೆ ತಪ್ಪುಗಳಾಗಿದ್ದು, ಅದನ್ನು ಸರಿಪಡಿಸುವಂತೆ ಕೋರಿದ ಅರ್ಜಿಗಳಾಗಿವೆ. ಮುಂಬರುವ ಉಪಚುನಾವಣೆಗೂ ಮತದಾರರ ಪಟ್ಟಿಯಲ್ಲಿರುವ ತಪ್ಪುಗಳ ತಿದ್ದುಪಡಿಗೂ ಸಂಬಂಧವಿಲ್ಲ.  ಆದಷ್ಟು ಶೀಘ್ರ ಈ ದೋಷಗಳನ್ನು ಸರಿಪಡಿಸಬೇಕಿದೆ ಎಂದಿದ್ದಾರೆ.