ವಿಶ್ವಕಪ್-2019: ಹಫೀಜ್ ಭರ್ಜರಿ ಬ್ಯಾಟಿಂಗ್- ಇಂಗ್ಲೆಂಡ್ ಗೆ 349 ರನ್ ಗುರಿ ನೀಡಿದ ಪಾಕಿಸ್ತಾನ

ವಿಶ್ವಕಪ್-2019: ಹಫೀಜ್ ಭರ್ಜರಿ ಬ್ಯಾಟಿಂಗ್- ಇಂಗ್ಲೆಂಡ್ ಗೆ 349 ರನ್ ಗುರಿ ನೀಡಿದ ಪಾಕಿಸ್ತಾನ

ನಾಟಿಂಗ್ ಹ್ಯಾಮ್: ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡವು ಮೊಹಮದ್ ಹಫೀಜ್ (84 ರನ್) ರ ಭರ್ಜರಿ ಆಟದೊಂದಿಗೆ 50 ಓವರ್ ಗಳಲ್ಲಿ 350 ರನ್ ಗಳಿಸಿದೆ.

ಪಾಕಿಸ್ತಾನದ ತಂಡವು ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದು, ಆರಂಭಿಕ ಆಟಗಾರರಾದ ಇಮಾನ್ ಉಲ್ ಹಕ್ (44) ಮತ್ತು ಫಕರ್ ಜಮನ್ (33) ತಮ್ಮ ಜೊತೆಯಾಟದಲ್ಲಿ ತಂಡಕ್ಕೆ 82 ರನ್ ಗಳನ್ನು ನೀಡಿದರು, ನಂತರ ಬಂದ ಬಾಬರ್ ಅಜಮ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 63 ರನ್ ಗಳಿಸಿದರು, 4 ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮದ್ ಹಫೀಜ್ 2 ಸಿಕ್ಸರ್ 8 ಬೌಂಡರಿಗಳೊಂದಿಗೆ 62 ಬಾಲ್ ಗಳಿಗೆ 84 ರನ್ ಗಳ ಮೊತ್ತವನ್ನು ಕಲೆಹಾಕಿ ತಂಡವು 300 ರ ಗಡಿ ದಾಟಲು ಸಹಕಾರಿಯಾದರು.

ನಂತರ ಬಂದ ನಾಯಕ ಸರ್ಪರಾಜ್ ಅಹ್ಮದ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧ ಶತಕ(55) ದಾಖಲಿಸಿದ್ದಾರೆ.

ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾವು 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 348 ರನ್ ಗಳಿಸಿ ಇಂಗ್ಲೆಂಡ್ ತಂಡದ ಗೆಲುವಿಗೆ 349 ರನ್ ಗಳ ಗುರಿ ನೀಡಿದೆ.

ಇಂಗ್ಲೆಂಡ್ ಪರವಾಗಿ ಮೋಹಿನ್ ಅಲಿ, ಮಾರ್ಕ ಹುಡ್ ತಲಾ 3 ವಿಕೆಟ್ ಪಡೆದರೆ , ಮತ್ತು ಕ್ರೈಸ್ ಒಕ್ಸ್ 2 ವಿಕೆಡ್ ಪಡೆದಿದ್ದಾರೆ.