2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ: ಭಾರತಕ್ಕೆ ಭರ್ಜರಿ ಜಯ

2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ: ಭಾರತಕ್ಕೆ ಭರ್ಜರಿ ಜಯ

ಪೋರ್ಟ್‌ ಆಫ್‌ ಸ್ಪೇನ್:‌ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 59 ರನ್ ಗಳ ಭರ್ಜರಿ ಜಯಗಳಿಸಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಆದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯದಂತೆ ವೆಸ್ಟ್ ಇಂಡೀಸ್ ವಿರುದ್ಧ  59 ರನ್ ಗಳ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ ಟೀಂ ಇಂಡಿಯಾ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿದೆ. ಭಾರತದ ಪರವಾಗಿ ವಿರಾಟ್ ಕೊಹ್ಲಿ 120, ರೋಹಿತ್ ಶರ್ಮ 18,ರಿಷಬ್ ಪಂತ್ 20, ಶ್ರೇಯಸ್ ಅಯ್ಯರ್ 71 ರನ್ ಗಳಿಸಿದ್ದಾರೆ.

ಮಳೆಯ ಕಾರಣ ಪಂದ್ಯ ನಿಲುಗಡೆಗೊಂಡು ಬಳಿಕ ಆರಂಭವಾಗಿದ್ದು, ವೆಸ್ಟ್ ಇಂಡೀಸ್ 42 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 210 ರನ್ ಗಳಿಸಿ ಸೋಲು ಕಂಡಿದೆ. ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 4, ಮೊಹಮ್ಮದ್ ಶಮಿ 2, ಕುಲದೀಪ್ ಯಾದವ್ 2 ವಿಕೆಟ್ ಪಡೆದಿದ್ದಾರೆ. ಭಾರತ ಸರಣಿಯಲ್ಲಿ 1 -0 ಮುನ್ನಡೆ ಕಂಡಿದೆ.

ನಾಯಕ ವಿರಾಟ್ತಾಳ್ಮೆಯಿಂದ ಇನ್ನಿಂಗ್ಸ್ಕಟ್ಟಿ ತಮ್ಮ ಏಕದಿನ ಬಾಳ್ವೆಯ 42ನೇ ಶತಕ ಬಾರಿಸಿದರು.