ಹೊಸ ಧಾರಾವಾಹಿ ಮೂಲಕ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ

ಹೊಸ ಧಾರಾವಾಹಿ ಮೂಲಕ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ

ಇತ್ತೀಚೆಗಷ್ಟೇ ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರಬಂದಿದ್ದ ನಟ ವಿಜಯ್ ಸೂರ್ಯ ಮತ್ತೊಂದು ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಲಿದ್ದಾರೆ.

5 ವರ್ಷಗಳಿಂದ ಅತ್ಯಂತ ಜನಪ್ರಿಯತೆ ಪಡೆದಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಪಾತ್ರಧಾರಿಯಾಗಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ರು. ಕಿರುತೆರೆಯ ಮೋಸ್ಟ್ ಪಾಪ್ಯುಲರ್ ಹೀರೋ ಅಂತಲೂ ಖ್ಯಾತಿ ಹೊಂದಿದ್ದರು..

ವಿಜಯ್ ಸೂರ್ಯ ಅಗ್ನಿಸಾಕ್ಷಿಯಿಂದ ಹೊರಬರ್ತಿದ್ದಂತೆ ಸಾಕಷ್ಟು ಅಭಿಮಾನಿಗಳಿಗೆ ಬೇಸರವಾಗಿತ್ತು. ಸಿದ್ದು ಫ್ಯಾನ್ಸ್ ಇನ್ಮುಂದೆ ಹೊಸ ಧಾರಾವಾಹಿ ಪ್ರೇಮಲೋಕ ಮೂಲಕ ವಿಜಯ್ ಸೂರ್ಯರನ್ನು ಕಣ್ತುಂಬಿಕೊಳ್ಳಬಹುದು. ಹಿಂದಿಯಲ್ಲಿ ಪ್ರಸಾರವಾಗುತ್ತಿರೋ ‘ಕಸೌತಿ ಜಿಂದಗಿ ಕೀ’ ಧಾರಾವಾಹಿಯ ರಿಮೇಕ್ ಕನ್ನಡದ ಪ್ರೇಮಲೋಕ ಧಾರಾವಾಹಿ. ಈ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. .