ಇಂದು ಕಲ್ಬುರ್ಗಿಗೆ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಇಂದು ಕಲ್ಬುರ್ಗಿಗೆ ಮಧ್ಯ ಪ್ರದೇಶ ಮಾಜಿ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ಕಲ್ಬುರ್ಗಿ ಜಿಲ್ಲೆಯಲ್ಲಿ ಚುನಾವಣಾ ಪ್ರವಾಸ ಕೈಗೊಂಡಿದ್ದಾರೆ.

ಬಿ ಜೆ ಪಿ ಅಭ್ಯರ್ಥಿಯಾದ ಉಮೇಶ್ ಜಾಧವ್ ಪರ ಮತಯಾಚಿಸುವ ಸಲುವಾಗಿ ಕಲ್ಬುರ್ಗಿಗೆ ಬರುತ್ತಿರುವ ಚೌಹಾಣ್ ಇಂದು ಬೆಳಿಗ್ಗೆ 11 ಗಂಟೆಗೆ ಚಿಂಚೋಳಿ ಪಟ್ಟಣದಲ್ಲಿ ಏರ್ಪಡಿಸಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ನಂತರ ಸಂಜೆ 04.30 ಕ್ಕೆ ನಗರದ ಗಣೇಶ ಮಂದಿರದಿಂದ ಸೂಪರ್ ಮಾರ್ಕೆಟ್ ವರೆಗೆ ನಡೆಯುವ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .

ಹಾಗೆ ಇತ್ತೀಚೆಗೆ ಬಿ ಜೆ ಪಿ ಸೇರ್ಪಡೆಗೊಂಡಿರುವ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ ಎಸ್ ರತ್ನಪ್ರಭ, ಇಂದು ಕಲ್ಬುರ್ಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸೇಡಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಕೈಗೊಳ್ಳಲಿದ್ದಾರೆ.

ಈ ಕ್ಷೇತ್ರದಿಂದ ಬಿ ಜೆ ಪಿ ಎದುರಾಳಿಯಾಗಿ ಕೇಂದ್ರ ವಿರೋಧ ಪಕ್ಷದ ನಾಯಕ, ಕಾಂಗ್ರೆಸ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಕಣದಲ್ಲಿದ್ದಾರೆ.