ವಿವಾದಾತ್ಮಕ “ರಾಮ್ ಕೀ ಜನ್ಮ ಭೂಮಿ” ಚಿತ್ರ ಬಿಡುಗಡೆಗೆ ಸಮ್ಮತಿ ಸೂಚಿಸಿದ ಸುಪ್ರೀಂ

ಮಾರ್ಚ್ 29 ರಂದು ತೆರೆಗೆ ಬರಲು ಸಿದ್ದವಿದ್ದ ‘ರಾಮ್ ಕೀ ಜನ್ಮ ಭೂಮಿ’ ಚಿತ್ರಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಳ್ಳಿ ಹಾಕಿದೆ.

ವಿವಾದಾತ್ಮಕ “ರಾಮ್ ಕೀ ಜನ್ಮ ಭೂಮಿ” ಚಿತ್ರ ಬಿಡುಗಡೆಗೆ ಸಮ್ಮತಿ ಸೂಚಿಸಿದ ಸುಪ್ರೀಂ

 

ಮಾರ್ಚ್ 29 ರಂದು ತೆರೆಗೆ ಬರಲು ಸಿದ್ದವಿದ್ದ ‘ರಾಮ್ ಕೀ ಜನ್ಮ ಭೂಮಿ’ ಚಿತ್ರಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಳ್ಳಿ ಹಾಕಿದೆ.

ಈ ಚಿತ್ರವು ಬಿಡುಗಡೆಯಾದರೆ, “ಅಯೋಧ್ಯೆ ಭೂ ವಿವಾದ”ದ ಮಧ್ಯಸ್ಥಿಕೆ ಮಾತುಕತೆಗೆ ತೊಂದರೆ ಉಂಟಾಗುವ ಸಂಭವವಿರುವುದರಿಂದ, ತಡೆನೀಡಬೇಕೆಂದು ಸಲ್ಲಿಸಿದ ಅರ್ಜಿ ಕುರಿತು  ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಈ ಚಿತ್ರಕ್ಕೂ,ಅಯೋಧ್ಯೆಯ  ಭೂ ವಿವಾದದ ಮಧ್ಯಸ್ಥಿಕೆ ಮಾತುಕತೆಗೂ ಯಾವ ರೀತಿಯ ಸಂಬಂಧವೂ ಇಲ್ಲ ಎಂದು, ಈ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ.

ಇದಕ್ಕೂ ಮುನ್ನ ಕಳೆದ ಬುಧವಾರ ಇದೇ ರೀತಿಯ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಸಂವಿಧಾನವು ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ,ಅದನ್ನು ಉಳಿಸಬೇಕಾದರೆ ಪ್ರತಿಯೊಬ್ಬರಿಗೂ ಸಹಿಷ್ಣುತೆಯಿಂದ ಇರಬೇಕು, ಎಂದು ಹೇಳಿತ್ತು.

ಈ ಚಿತ್ರಕ್ಕೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂ ಕೊರ್ಟ್ ನಲ್ಲಿ ಅರ್ಜಿ ಸಲ್ಲಿದ್ದವರು, ಪ್ರಿನ್ಸ್ ಯಾಕುಬ್ ಹಬೀಬುದ್ದಿನ್ ಟುಸಿ, ಈತ ತನ್ನನ್ನು ತಾನು ಮೊಗಲ್ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ ಅವರ ವಂಶಸ್ಥನೆಂದು ಹೇಳಿಕೊಂಡಿದ್ದಾನೆ.

ಏನಿದು ರಾಮ್ ಕೀ ಜನ್ಮಭೂಮಿ ಚಿತ್ರದ ವಿವಾದ

“ರಾಮ್ ಕೀ ಜನ್ಮ ಭೂಮಿ” ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ. ಈ ಚಿತ್ರವು ರಾಮಮಂದಿರ ಮತ್ತು ಮುಸ್ಲಿಂ ರ ಹಲಾಲ್ ಆಚರಣೆಗೆ  ಸಂಬಂಧಿಸಿದ ಸಿನಿಮಾವಾಗಿದ್ದು, ಉತ್ತರ ಪ್ರದೇಶದ “ಶಿಯಾ ವಕ್ಫ್ ಬೋರ್ಡ್ ನ ಅಧ್ಯಕ್ಷರಾದ ವಾಸಿಮ್ ರಿಜ್ವಿ” ಈ ಚಿತ್ರದ ಬರಹಗಾರ ಮತ್ತು ನಿರ್ಮಾಪಕರಾಗಿದ್ದು, ಸನೋಜ್ ಮಿಶ್ರಾ ನಿರ್ದೇಶನ ಮಾಡಿದ್ದಾರೆ, ಈ ಚಿತ್ರದ ಭೂಮಿಕೆಯಲ್ಲಿ ಮನೋಜ್ ಜೋಷಿ ಮತ್ತು ಗೋವಿಂದ್ ನಾಮದೇವ್ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರದ ಟ್ರೈಲರ್ ಕಳೆದ ವರ್ಷ ನವೆಂಬರ್ 19ರಂದು ಬಿಡುಗಡೆಗೊಂಡು ದೊಡ್ಡ ಮಟ್ಟದ ವಿವಾದವನ್ನೇ ಎಬ್ಬಿಸಿತ್ತು, ಟ್ರೈಲರ್ ಬಿಡುಗಡೆ ನಂತರ ಚಿತ್ರದ ನಿರ್ಮಾಪಕ ರಿಜ್ವಿ ಗೆ ಚಿತ್ರವನ್ನು ಬಿಡುಗಡೆಗೊಳಿಸದಂತೆ 1993 ರ ಮುಂಬೈ ಸ್ಪೋಟದ ರೂವಾರಿ ಟೈಗರ್ ಮೆಮೋನ್ ಸಹೋದರ ಅಬ್ದುಲ್ ಮೆಮೋನ್ ನಿಂದ ಬೆದರಿಕೆಯ ಕರೆಗಳು ಬಂದಿದ್ದರೂ ಚಿತ್ರದ ಯೋಜನೆಯನ್ನು ಕೈ ಬಿಡುವುದಿಲ್ಲ ಎಂದು ರಿಜ್ವಿ ಹೇಳಿದ್ದರು.

 ಈ ಚಿತ್ರದ ವಿವಾದವನ್ನು ಮೊದಲಿಗೆ ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿ, ಚಿತ್ರದ ಬಿಡುಗಡೆಗೆ ಸಂಬಂಧಿಸಿದ ‘ಮಾನ್ಯತಾ ಪತ್ರ’ವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ನಿಂದ ದೊರೆಯುವವರೆಗೂ ಚಿತ್ರ ಬಿಡುಗಡೆ ಮಾಡದಂತೆ ನಿರ್ಮಾಪಕ ರಿಜ್ವಿ ಗೆ ಸೂಚನೆ ನೀಡಿತ್ತು,ಹಾಗೂ ಯುಟ್ಯೂಬ್ ನಿಂದ ಚಿತ್ರದ ಟ್ರೈಲರ ನ್ನು ಕೈ ಬಿಡುವಂತೆ ಆದೇಶ ಮಾಡಿತ್ತು.

ಈ ಚಿತ್ರವು  90 ರ ದಶಕದ ಆರಂಭದಲ್ಲಿನಡೆದ ರಾಮಮಂದಿರ ರಥ ಯಾತ್ರೆ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸುತ್ತ ಹೆಣೆದ ಚಿತ್ರವಾಗಿದೆ. ‘ರಾಮಮಂದಿರ ವಿವಾದ ಮತ್ತು ಮಾನಸಿಕ ಹಿಂಸೆಯು ಆಧುನಿಕ ಸಮಾಜದಲ್ಲಿ ಇನ್ನು ಹಲಾಲದಂತಹ ಆಚರಣೆ ಮುಂದುವರೆಯಲು ಯಾಕೆ ಕಾರಣವಾಗಿದೆ ಎಂದು ಸಿನಿಮಾ ಪ್ರಶ್ನಿಸುತ್ತದೆ’  ಎಂದು ನಿರ್ಮಾಪಕ ರಿಜ್ವಿ ಹೇಳಿಕೆ ನೀಡಿದ್ದಾರೆ.

ಸದ್ಯ ಚಿತ್ರದ ಬಿಡುಗಡೆಗೆ ಇದ್ದ ಎಲ್ಲಾ ಸಮಸ್ಯೆಗಳು ಮುಕ್ತವಾಗಿದ್ದು ಮಾರ್ಚ್ 29 ರಂದು ದೇಶದಾಂದ್ಯತ ತೆರೆಗೆ ಅಪ್ಪಳಿಸಲಿದೆ.