ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಶತಮಾನದ ಸ್ಮರಣೆ

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಶತಮಾನದ ಸ್ಮರಣೆ

ಬೆಂಗಳೂರು: ಇತಿಹಾಸದ ಕರಾಳ ನೆನಪು ಜಲಿಯನ್ ವಾಲಾಬಾಗ್ ಶತಮಾನದ ಸ್ಮರಣೆ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿನೆ ಮಾಡಲಾಗಿತ್ತು.

ಬಸವನಗುಡಿ ನ್ಯಾಷನಲ್ ಕಾಲೇಜ್‍ನಲ್ಲಿ ಆಯೋಜಿಸಿದ್ದ ಜಲಿಯನ್ ವಾಲಾಬಾಗ್ ಶತಮಾನದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸಹ ಕಾರ್ಯದರ್ಶಿ ಕೆ.ಎಸ್ ವಿಮಲಾ ಅವರು, ಭಾರತದ ಸ್ವಾತಂತ್ರ್ಯ ಚಳುವಳಿಗೆ ಸ್ಪಷ್ಟ ಕಲ್ಪನೆ ನೀಡಿದ ಭಗತ್ ಸಿಂಗ್‍ನಂತಹ ಮಹಾನ್ ರಾಷ್ಟ್ರಭಕ್ತನ ಉದಯಕ್ಕೆ ಕಾರಣವಾಗಿತ್ತು, ಇತಿಹಾಸದ ಕರಾಳ ನೆನಪು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಇಂದಿನ ಯುವಜನತೆ ತಿಳಿದುಕೊಳ್ಳುವುದು ಪ್ರಸ್ತುತ ದಿನಮಾನದಲ್ಲಿ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಷನ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ.ಎ.ಎಚ್.ರಾಮರಾವ್ ಹಾಗೂ ಕೃಷ್ಣಮೂರ್ತಿ ಭಾಗವಹಿಸಿ, ಇಂದಿನ ಯುವಜನತೆ ಹೆಚ್ಚು ಸಮಯವನ್ನು ಮೊಬೈಲ್‍ನಲ್ಲಿ ಕಳೆಯುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಆದ್ದರಿಂದ ಇತಿಹಾಸದ ಅದೆಷ್ಟೋ ಕರಾಳ ಕಥೆಗಳನ್ನು ಇಂತಹ ಕಾರ್ಯಕ್ರಮಗಳಿಂದ ನೆನಪು ಮಾಡಿಕೊಳ್ಳುವುದು ಅಗತ್ಯವಿದೆ ಎಂದರು.

ಇನ್ನು, ಕಾರ್ಯಕ್ರಮದಲ್ಲಿ ಜಲಿಯನ್ ವಾಲಾಬಾಗ್‍ನ ಘೋರ ದುರಂತ ಕುರಿತಾದ ನವೀನ್ ಸಾಣೇಹಳ್ಳಿ ನಿರ್ದೇಶನದ “ನತದೃಷ್ಟ ಗೋಡೆ”  ಎಂಬ ಕಿರು ನಾಟಕವನ್ನು ಪ್ರದರ್ಶನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ  ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.