ಆರ್ಥಿಕ ಮುಗ್ಗಟ್ಟಿನಿಂದ ಒಳ ಉಡುಪು ವ್ಯಾಪಾರ ಕುಸಿತ..!

ಆರ್ಥಿಕ ಮುಗ್ಗಟ್ಟಿನಿಂದ ಒಳ ಉಡುಪು ವ್ಯಾಪಾರ ಕುಸಿತ..!

 ಎಲ್ಲಾ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಆರ್ಥಿಕ ಮುಗ್ಗಟ್ಟು, ಒಳ ಉಡುಪುಗಳ ಕ್ಷೇತ್ರಕ್ಕೂ ಕಾಲಿರಿಸಿದ್ದು, ಶೇ. 20 ರಿಂದ 25 ರಷ್ಟು ವ್ಯಾಪಾರ ಕುಸಿದಿದೆ.

 ಒಳ ಉಡುಪುಗಳ ಮಾರುಕಟ್ಟೆಯಲ್ಲಿ ಶೇ.60 ರಷ್ಟು ಆವರಿಸಿರುವ ಒಂದು ಲಕ್ಷಕ್ಕೂ ಹೆಚ್ಚು ಮಳಿಗೆಗಳು ಭಾರತದಲ್ದಿದ್ದು, ಅನೇಕ ಬ್ರಾಂಡ್‍ನ  ಒಳ ಉಡುಪು ಮಾರಾಟವಾಗುತ್ತಿವೆ.  2014 ರಲ್ಲಿ 19,950 ಕೋಟಿ ವಹಿವಾಟು ಆಗಿದ್ದರ ಆಧಾರದಲ್ಲಿ 2024 ಕ್ಕೆ ಇದು ಶೇ. 13 ರಷ್ಟು ಹೆಚ್ಚಳ ಕಂಡು 68,270 ಕೋಟು ರೂಗಳ ವಹಿವಾಟು ಆಗುತ್ತೆ ಎಂಬ ನಿರೀಕ್ಷೆಗಳಿದ್ದವು.

 ಆದರೆ ಜಿಎಸ್‍ಟಿ, ಜನರ ಕೈಯಲ್ಲಿ  ಕಾಸಿಲ್ಲದ್ದರಿಂದ ಒಳ ಉಡುಪುಗಳನ್ನೇ ಖರೀದಿಸುತ್ತಿಲ್ಲ. ಹೀಗಾಗಿ ಪ್ರತಿ ದೀಪಾವಳಿ ಸಮಯದಲ್ಲಿ ಶೇ. 20 ರಷ್ಟು ವ್ಯಾಪಾರ ಹೆಚ್ಚಳವಾಗುತ್ತಿದ್ದು, ಈ ಸಲ ಶೇ. 10 ರಷ್ಟಕ್ಕೇ ಸೀಮಿತವಾಗಿಬಿಟ್ಟಿದೆ.  ಇದೇ ಸ್ಥಿತಿ ಮುಂದುವರಿದರೆ ಬ್ರಾಂಡೆಡ್ ಒಳ ಉಡುಪುಗಳ ಕಾರ್ಖಾನೆಗಳು ಕದ ಮುಚ್ಚಿಕೊಳ್ಳುವ ಅನಿವಾರ್ಯತೆಯಲ್ಲಿ ಸಿಲುಕಿವೆ.

 ಏನಾದರೂ ಮಾಡಿ ನಮಗೆ ನೆರವಾಗಿ ಎಂದು ಕಾರ್ಖಾನೆ ಮಾಲೀಕರು, ಮಾರಾಟಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಈಗಾಗಲೇ ಪಾರ್ಲೆ ಜಿ ಯಂಥ ಬಿಸ್ಕೆಟ್ ಕಂಪನಿಯೇ ಸಂಕಷ್ಟಕ್ಕೆ ಸಿಲುಕಿದೆ. ಇಂಥವುಗಳ ನಡುವೆಯೇ ಕೇಂದ್ರ ಸರ್ಕಾರ ಆರ್‍ಸಿಇಪಿ ಗೆ ಸಹಿಹಾಕಲು ತುದಿಗಾಲಲ್ಲಿ ನಿಂತಿದೆ. ಇದೇನಾದರೂ ಆದಲ್ಲಿ ಉಡುಪುಗಳು, ಜವಳಿಗಳು ವಿದೇಶದಿಂದಲೇ ಬರುವುದರಿಂದ, ಒಳ ಉಡುಪುಗಳ ಉದ್ಯಮಕ್ಕೂ ಪೆಟ್ಟು ಬೀಳುತ್ತೆ. ಅಲ್ಲಿನ ಹಾಲಿನ ಉತ್ಪನ್ನಗಳಿಂದಾಗಿ ಬಿಸ್ಕತ್ತು, ಚಾಕೊಲೆಟ್ ಉದ್ಯಮಕ್ಕೂ ಹೊಡೆತ ಬೀಳುವುದು ಖಚಿತ.