Flavour of coffee. ( Cup-4 ) ಯುವ ಮನಸುಗಳ ಕನವರಿಕೆ

Flavour of coffee. ( Cup-4 ) ಯುವ ಮನಸುಗಳ ಕನವರಿಕೆ

ನೀರು, ನೀನು ಮತ್ತು ಪ್ರೀತಿಯ ಮತ್ತು.

“ಈ ದಟ್ಟ ಕಾಡಲಿ ನಾವಿಬ್ಬರೇ, ನಮ್ಮನ್ನು ಕೇಳುವವರು ಯಾರೂ ಇಲ್ಲ. ಆದರೂ ನಾವು ನಮ್ಮ ಸ್ವಂತಿಕೆ ಕಳೆದುಕೊಳ್ಳಬಾರದಲ್ಲ “ ಹಂಗಂದರೇನು  ಅವನಿಗೆ ಅರ್ಥವಾಗಲಿಲ್ಲ.‌ ಅವಳು ಜೋರಾಗಿ ಅಳಲಾರಂಭಿಸಿದಾಗ ಅವನು ಕಕ್ಕಾ ಬಿಕ್ಕಿ. ಅವಳ ಕುರಿತು ಆಲೋಚಿಸುವಾಗ ಮೈ ಪುಳಕವಾಗುತ್ತಿತ್ತು‌ ಆದರೆ ಅದರಾಚೆಗೆ ಏನೂ ಅರ್ಥವಾಗುತ್ತಿರಲಿಲ್ಲ.‌ಬೊಗಸೆಗಣ್ಣ ಚಲುವೆ ಮಾತಾಡುತ್ತ ಇದ್ದರೆ ಅವನಿಗೆ ಕೇಳುತ್ತಲೇ ಇರಬೇಕೆನಿಸುತ್ತಿತ್ತು. ಅಷ್ಟೇ.‌
ಲಂಗ ದಾವಣಿಯ ರಂಗಿಗಿಂತ ಅವಳ ನಗು, ಮಾತು,ಸಾಮಿಪ್ಯ ನೂರು ಪಟ್ಟು ರಂಗಾಗಿರುತ್ತಿತ್ತು.                               

ಪಾಪ ಪುಣ್ಯ ಇತ್ಯಾದಿ ಸಂಗತಿಗಳನ್ನು ಅಜ್ಜಿ ಹುಡುಗಿಯರ ವಿಷಯವಾಗಿ ಯಾಕೆ ಹೇಳುತ್ತಿದ್ದಳೆಂದು ಅರ್ಥವಾಗದ ಕಾಲವದು.‘ಹಂಗೆಲ್ಲ ಯಾರೂ ಇಲ್ದಾಗ ಒಬ್ಬನೇ ಹುಡುಗಿಯರ ಜೊತೆ ಹೋಗಬ್ಯಾಡ ಮಗಾ’ ಅಂದಿದ್ದರೂ ಅವಳು ಕರೆದ ಕೂಡಲೇ ಓಡೋಡಿ ಬಂದಿದ್ದ. ಇಲ್ಲಿ ಇವಳು ಒಂಟಿಯಾಗಿ ಇರುವಾಗ ಏನೇನೋ ಹೇಳ್ತಾ ಇದ್ದಾಳಲ್ಲ ಎಂಬ ಅನುಮಾನ ಕಾಡಿದರೂ ಅವಳ ಮೇಲೆ ಅಪಾರ ಪ್ರೀತಿ,ನಂಬಿಕೆ ಇತ್ತು. 

“ಮುಂದಿನ ತಿಂಗಳು ನನ್ನ ಮದುವೆ ಇದೆ” ಅಂದಳು. ಅವನು ಏನೂ ಹೇಳದೇ ಸುಮ್ಮನಾದ.“ಅಯ್ಯೋ ನಿನಗೇನು ಅನಿಸ್ತಾ ಇಲ್ಲವಾ ?” ಮತ್ತದೇ ಮೌನ. ‘ಹೌದಾ!? ಸರಿ ಒಳ್ಳೆಯದಾಗಲಿ’ ಅನಬೇಕೆನಿಸಿತಾದರೂ ಹೇಳಲಾಗದೇ ಸುಮ್ಮನಾದ.ತಾನಿಷ್ಟು ತಿಳಿಗೇಡಿ ಇರಬಾರದಿತ್ತು, ಏನಾದರು ಹೇಳಲೇಬೇಕೆಂದು ಅಂದುಕೊಂಡ.

‘ ನೀನು ತುಂಬಾ ಜಾಣೆ, ಸಿಟಿಯಿಂದ ಬಂದವಳು, ನಂಗೆ ಏನು ಮಾತಾಡಬೇಕೆಂದು ಗೊತ್ತಾಗ್ತಾ ಇಲ್ಲ ಆದರೆ ನೀ ಹೇಳಿದ ಹಾಗೆ ಖಂಡಿತವಾಗಿ ಕೇಳ್ತೇನೆ’
‘ಇಷ್ಟೊಂದು ದಟ್ಟವಾದ ಅಡವಿಯಲ್ಲಿ ನಾವು ಬಂದದ್ದು ನನಗೆ ಯಾಕೋ ಭಯವಾಗ್ತಿದೆ. ಬೇಗ ಹೊರಡೋಣ ನಡೆ’ 

“ಹೋಗೋಣ ಆದರೆ ಹೋಗೋವರೆಗೆ ನೀನು ನಾ ಹೇಳಿದಂತೆ ಕೇಳತಿ ತಾನೆ?” ‘ಹೂಂ’ ತಲೆಯಾಡಿಸಿದ. ಅವಳು ಎದ್ದು ಅವನ ಕೈ ಹಿಡಿದು ದೊಡ್ಡ ಆಲದ ಮರದ ಕೆಳಗೆ ಕರೆದುಕೊಂಡು ಹೋದಳು.                            

“ ಇವತ್ತು ನಾನು ಹೇಳುವ ಸತ್ಯವನ್ನು ಕೇಳಿಸಿಕೋ, ಮುಂದಿನ ತಿಂಗಳು ನನ್ನ ಮದುವೆ ಇರುವದೇನೋ ನಿಜ ಆದರೂ ನಾ ನಿನ್ನನ್ನು ಪ್ರೀತಿಸ್ತಾ ಇದ್ದೇನೆ ಎಂಬುದ ಮರೆಯಬೇಡ, ಕಳೆದ ಸಲ IಐU ಎಂದು ಕೂಗಿ, ಕೂಗಿ ಹೇಳಿದ್ದೆ, ನಿನಗದು ಅರ್ಥವಾಗಿರಬಹುದು ಅಂದುಕೊಂಡಿದ್ದೇನೆ. ಈಗ ನನಗೆ ನಿನ್ನ ಬಿಟ್ಟು ಇರಲಾಗುವುದಿಲ್ಲ ಅನಿಸಿದೆ” ಎಂದು ಮಾತು ಮುಗಿಸುವ ಮೊದಲೇ ಜೋರಾಗಿ ಅಳಲಾರಂಭಿಸಿದಳು. 
ಅವನಿಗೆ ದಿಕ್ಕೇ ತೋಚದಾಯಿತು.

‘ಹೌದು ನಾನು ನಿನ್ನನ್ನು ಪ್ರೀತಿಸುತ್ತೇನೆ ನಿಜ, ಆದರೆ ನಾನೇನು ಮಾಡಲು ಸಾಧ್ಯ, ನಾನಿನ್ನು ಕಾಲೇಜಿಗೆ ಹೋಗಬೇಕು, ಕೆಲಸ ಹಿಡಿಯಬೇಕು,ಹಣ ಸಂಪಾದಿಸಬೇಕು ಅಲ್ಲಿಯವರೆಗೆ ನೀನು ಏನ್ ಮಾಡ್ತೀ, ಮದುವೆ ಎಂಬುದು ಹುಚ್ಚರಾಟ ಅಲ್ಲ.’

‘ನೀನಿನ್ನು ಮದುವೆ ಆಗುವಷ್ಟು ದೊಡ್ಡವನಾಗಿಲ್ಲ ‘ಎಂಬ ಅಜ್ಜಿಯ ಮಾತು ಮೆಲುಕು ಹಾಕಿ ಏನೂ ಹೇಳದೇ ಸುಮ್ಮನಾದ. ಹೇಳಬೇಕೆಂದುಕೊಂಡದ್ದು ಮನದಲ್ಲಿ ಕರಗಿ ಹೋಯಿತು.

ಅಕ್ಕ ತಮಾಷೆಯಿಂದ ಬಿಡಿಸಿ ಹೇಳಿದ IಊU ಅರ್ಥ ಗೊತ್ತಾಗಿತ್ತು, ಗೊತ್ತಾಗಿದೆ ಎಂದು ಹೇಳಬೇಕೆಂಬ ಖುಷಿಯಿಂದ ಬಂದಿದ್ದ.‌ ಆದರೆ ಅವಳು ಜೋರಾಗಿ ಅಳುವುದು ಕಂಡು ಮಂಕಾಗಿ ಹೋದ. ಅಕಸ್ಮಾತ್ ಅವಳನ್ನು ಅಪ್ಪಿಕೊಂಡರೆ ಏನಾಗಬಹುದೆಂದು ಊಹೆ ಮಾಡಿ ಪುಳಕಗೊಂಡ ಆದರೆ ಆ ಧೈರ್ಯ ಮಾಡಲಿಲ್ಲ. ಅವಳು ಗಂಭೀರವಾಗಿ ಏನನ್ನೋ ಆಲೋಚನೆ ಮಾಡುತ್ತಿದ್ದಳು.                      ‌

“ಇಂದು ನೀ ನಾ ಹೇಳಿದಂತೆ ಕೇಳಲೇಬೇಕು”ಎಂದು ಹೇಳುತ್ತ ನೀರಿನ ಬಾಟಲಿ ತೆಗೆದಳು. ನೀರು ಕುಡಿ ಎಂದಳು ಅವನು ಗಟಗಟನೆ ಕುಡಿದು ಬಿಟ್ಟ. ಅಯ್ಯೋ ಹುಚ್ಚ ಎಂದು ಕಣ್ಣೀರು ಒರೆಸಿಕೊಳ್ಳತ್ತ ನಗಲಾರಂಭಿಸಿದಳು.  ಅವಳ ನಗುವಿನ ಕಾರಣ ಅರ್ಥವಾಗಲಿಲ್ಲ. 
“ನೀ ನೀರು ಕುಡಿದು ನುಂಗದೇ ಹಾಗೆ ಬಾಯಲ್ಲಿ ಇಟ್ಟುಕೊಂಡು ನನಗೆ ಕುಡಿಸಬೇಕು” ಅದು ಹೇಗೆಂದು ಅವನಿಗೆ ಅರ್ಥವಾಗದೇ ಇದೇನಿದು ಹೊಸ ಹುಚ್ಚಾಟ ಎನಿಸಿತು.

ನಾಲ್ಕು ಹನಿ ನೀರು ಕುಡಿದು ಅವನ ಕುತ್ತಿಗೆಗೆ ಕೈ ಹಾಕಿ ಅವನ ಬಾಯಲಿ ನೀರ ಗುಟುಕಿಸಿದಳು. ಅದು ಮೊದಲ ಚುಂಬನವೋ, ನೀರು ಕುಡಿಸುವ ಉತ್ಕಟ ಭಾವವೋ ಅವನಿಗೊಂದು ಅರ್ಥವಾಗಲಿಲ್ಲ. 

“ಈಗ ನೀನು ನೀರು ಕುಡಿದು ನನ್ನ ಬಾಯೊಳು ಹಾಕು” ಎಂದು ಆದೇಶಿಸಿದಳು. ಅವಳ ಚುಂಬನದಿಂದ ಕಂಪನದಿ ನಡುಗುತಿದ್ದ ಅವನಿಗೆ ಇದು ಯಾಕೋ ತುಂಬಾ ವಿಚಿತ್ರ ಅನಿಸಿತು. ಮೊದಲ ಚುಂಬನಾನುಭವದ ಕಂಪನ ನಿಂತಿರುವ ಮೊದಲೇ ಮರು ಚುಂಬನ ಅದು ನೀರು ಗುಟುಕರಿಸುವ ಹೊಸ ಪರಿಗೆ ಬೆವರಿ ಬೆದರಿ ಹೋದ.                            

“ನೋಡು ನನ್ನ ಮದುವೆಯಾಗೋ ಗಂಡ ಕೊಡುವ ಮೊದಲೇ ನೀ ಮುತ್ತು ಕೊಟ್ಟು ನನ್ನ ಮನ ತೃಪ್ತಿ ಪಡಿಸಿದ್ದೀಯಾ, ಈಗ ನಾ ಹೇಳಿದಂತೆ ನೀ ಕೇಳಲೇಬೇಕು” ಅಂದಳು.

‘ನಾನೆಲ್ಲಿ ಕೊಟ್ಟಿದ್ದೇನೆ, ನೀನೇ ಆ ಕೆಲಸ ಮಾಡಿ ನನ್ನ ಹೆದರಿಸಬೇಡ. ನನಗ್ಯಾಕೋ ಭಯವಾಗ್ತಿದೆ, ನಡೆ ಇಲ್ಲಿಂದ ಹೋಗಿ ಬಿಡೋಣ. ನಿನ್ನ ಜೊತೆ ಹೀಗೆಲ್ಲ ಮಾಡೋದು ದೊಡ್ಡ ಪಾಪ.‘

“ಪಾಪ, ಪುಣ್ಯದ ಕತೆ ನನಗೆ ಹೇಳಬೇಡ, ಹೇಳಿದಂತೆ ಕೇಳೋ, ಇಲ್ಲದಿದ್ದರೆ ನಿನ್ನ ಅಜ್ಜಿ ಮತ್ತು ಅಕ್ಕನ ಮುಂದೆ ಇಲ್ಲಿ ನಡೆದದ್ದೆಲ್ಲ ಹೇಳಿ ಬಿಡುವೆ.”ಅವನು ತಲೆ ತಗ್ಗಿಸಿ ಕುಳಿತುಕೊಂಡ. ಅವನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು. ಅಯ್ಯೋ ಅನಿಸಿತು.

“You are too innocent, I can't forget your flavor of sweet kiss" ಮಾತು ಮುಗಿಯುವ ಮೊದಲು ಅವನನ್ನು ಬಾಚಿ ತಬ್ಬಿಕೊಂಡು ಮುತ್ತಿನ ಮಳೆ ಸುರಿಸಿದಳು. ಅವನಿಗೆ ಆದ ಆನಂದ, ಸಂಭ್ರಮ…ಅವನು ಉನ್ಮತ್ತನಾಗಿ ಅನುಭವಿಸಿ, ತಲೆ ತಗ್ಗಿಸಿ ಕುಳಿತುಕೊಂಡ.ಅವಳೇ ಮಾತು ಮುಂದುವರೆಸಿದಳು.

“ನಂಗೊತ್ತು ನಾನು ಮದುವೆಯಾಗಿ ಹೋಗೋ ಹುಡುಗಿ, ಮುಂದೆ ಯಾವತ್ತೂ ಭೇಟಿ ಅಸಾಧ್ಯ, ನೀನು ನನ್ನ ಭೇಟಿಯಾಗಬೇಡ, ಆ ಪ್ರಯತ್ನ ಮಾಡ ಬೇಡ. ಇದೇ ಕೊನೆ‌.”

“ಇಲ್ಲಿ ನಡೆದ ಸಂಗತಿಗಳನ್ನು ನೀನು ಯಾರಿಗೂ ಹೇಳುವುದಿಲ್ಲ ಎಂಬ ವಿಶ್ವಾಸವೂ ಇದೆ. ನಿನ್ನ ಮುಗ್ಧತೆ,ಸಂಯಮ,ಕಾಳಜಿ ನನ್ನನ್ನು ಕಟ್ಟಿ ಹಾಕಿದೆ. ವಾಸ್ತವ ಮರೆತು ನಿನ್ನ ನಿರೀಕ್ಷೆ ಮೀರಿ ಹುಚ್ಚುಚ್ಚಾಗಿ ವರ್ತ

“A boy is a boy but girl is a lady" ಎಂಬ ಮಾತಿನಂತೆ ನಾನು ಭಾವನೆಗಳ ಅನುಭವಿಸುವುದರಲ್ಲಿ ನಿನಗಿಂತ ದೊಡ್ಡವಳೆನಿಸುವುದು ಸಹಜ. ಆದರೆ ನೀನು ತುಂಬಾ ಮುಗ್ಧ ಮುಂದೆ ದೊಡ್ಡವನಾದ ಮೇಲೆ ಎಲ್ಲ ಅರ್ಥಮಾಡಿಕೊಂಡು ಕೊರಗಬೇಡ.”

“ನಾನೊಂದು ಮಿಂಚು ಅಷ್ಟೇ, ಹೊಳೆದು ಮಾಯವಾಗುವೆ ಅದೂ ನನ್ನ ಸ್ವಾರ್ಥಕ್ಕಾಗಿ, ಅದಕ್ಕಾಗಿ ನನ್ನ ಕ್ಷಮಿಸು.ನಿನ್ನ ಮುಗ್ಧತೆಯ ಜೊತೆ ಚಲ್ಲಾಟವಾಡಿ ಕೆರಳಿಸಿಬಿಟ್ಟೆ.”ಮಾತು ಮುಗಿಸಿ ಮತ್ತೊಮ್ಮೆ ಜೋರಾಗಿ ಬಿಗಿದಪ್ಪಿ ಅಳಲಾರಂಭಿಸಿದಳು.

ಹೀಗೆ ಅಪ್ಪಿಕೊಂಡಿರಲಿ ಅನಿಸಿತು. ಒಂದು ರೀತಿಯ ಖುಷಿ,ಉನ್ಮಾದ, ಗೊಂದಲ,ಕುತೂಹಲ, ಚಡಪಡಿಕೆ,ತಲ್ಲಣ,ಪುಳಕ ಹೀಗೆ ಏನೇನೋ... ಮನಸು ಹರಿದಾಡಿ ವಿಚಲಿತನಾದ. ಆದರೂ ಸಹಿಸಿಕೊಂಡ. ಪಾಪ-ಪುಣ್ಯ ಎಂಬ ಗೊಂದಲ ಬೇರೆ. 

ಇಷ್ಟೊಂದು ಎಳೆಯ ಪ್ರಾಯದಲ್ಲಿ ಪ್ರೇಮ ಭಾವ ಅಂಕುರಿಸಲು ಕಾರಣಳಾದವಳು ಸದಾ ಜೊತೆಗಿದ್ದರೆ ಎಷ್ಟು ಛಂದ ಅನಿಸಿ ಅವಳನ್ನೊಮ್ಮೆ ದಿಟ್ಟಿಸಿ ನೋಡಿದಾಗ ಅವಳಿಗೂ ಗಾಭರಿಯಾಯಿತು. ಎನೋ ನಡೆಯುತ್ತೇನೋ ಎಂಬ…ಅವನಿಗೂ ಅಳು ಬಂತಾದರೂ ಅಳಲಿಲ್ಲ, ಯಾಕೆ ಅಳಬೇಕು,ಅಳಬಾರದು…ಇಡೀ ಬದುಕಿನುದ್ದಕ್ಕೂ ಈ ಬೆಚ್ಚನೆಯ ನೆನಪಲಿ ಬದುಕುವುದು ಶಿಕ್ಷೆ ಆಗಬಹುದು ಎಂಬುದು ಅವನಿಗೆ ಗೊತ್ತಿರಲಿಲ್ಲ.
ಬರೀ ಈ ಕ್ಷಣದ ಮಧುರ ಭಾವ ಅಂದುಕೊಂಡಿದ್ದ. 

ಒಮ್ಮೆ ಸುತ್ತಲೂ ನೋಡಿದ. ಹಿತಕರ ಗಾಳಿ,ಪಕ್ಷಿಗಳ ಕಲರವ, ಬಾನೆತ್ತರದ ಮರ, ಅಲ್ಲಿ ರಿಂಗಣವಾಡುವ ನಿನಾದ, ದೂರದಲಿ ಸುಂದರವಾಗಿ ಕಾಣುವ ಬೆಟ್ಟ.ಇಲ್ಲಿ ತೋಳ ಬಂಧನದಲಿ... ಹೊರಗೆ ಕಾಣುವ ಎಲ್ಲವೂ ಇವಳಲ್ಲಿದೆ ಎನಿಸಿತು.ಪ್ರಕೃತಿಗಿಂತಲೂ ಸುಂದರ,ರಮ್ಯ, ಅಗೋಚರ, ಅಪ್ರಮಾಣ, ವರ್ಣನಾತೀತ. ಮತ್ತೆ ಮತ್ತೆ ಮತ್ತೆ ಮತ್ತದೇ ಮತ್ತು...ಹೊತ್ತು ಮುಳುಗುವ ಮುನ್ನ ಹೋಗಬೇಕಲ್ಲ, ಹೋಗಲೇಬೇಕು.ನೆನೆದಾಗ ಮನ   ತನ್ನ ಅಸಹಾಯಕತೆಗಾಗಿ ಚಡಪಡಿಸಿತು. ಮುಂದೆ… ಮುಂದೆ… ಬರೀ ಶೂನ್ಯ...