ಅನ್ಯ ಭಾಷಾ ಸಿನಿಮಾಗಳಿಗೆ ಕರುನಾಡಿನ ಥಿಯೇಟರ್ ಗಳ ಒಲವು:   ನಟಿ ಪ್ರಿಯಾಮಣಿ ಆಕ್ರೋಶ

ಬೆಂಗಳೂರು: ಕನ್ನಡ ಭಾಷೆಯ ಚಲನಚಿತ್ರಗಳನ್ನು ತೆಗೆದು ತೆಲುಗು ಚಲನಚಿತ್ರವೊಂದಕ್ಕೆ ಅನುಕೂಲ ಮಾಡಿಕೊಡುವ ಸಿನಿಮಾ ಥಿಯೇಟರ್ ಗಳ ಮಾಲೀಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ಭಾಷೆಯ ಚಲನಚಿತ್ರವನ್ನು ತೆಗೆದು ಅನ್ಯ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸುವ ಮನೋವೃತ್ತಿ ಸರಿಯಲ್ಲ.ಕನ್ನಡವನ್ನು ಕಡೆಗಣಿಸಿ ಅನ್ಯ ಭಾಷಾದೆಡೆಗೆ ಇರುವ ಒಲವನ್ನು ತೋರುತ್ತದೆ  ಎಂದು ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿನಿಮಾ ನಟಿ ಪ್ರಿಯಾಮಣಿ ಈ ಕುರಿತು, ತಾವು ತಮ್ಮ ಆಭಿಪ್ರಾಯಗಳನ್ನು ವಿಡಿಯೋ ಮಾಡುವ ಮೂಲಕ  ಕನ್ನಡತನವನ್ನು ಮೆರೆದಿದ್ದಾರೆ. ತೆಲುಗು ಭಾಷೆಯ ಚಲನಚಿತ್ರ ‘ಸಾಹೂ’ ಇಂದು ತೆರೆ ಕಂಡಿದೆ. ಈ ಹಿನ್ನೆಲೆಯಲ್ಲಿ ಎರಡು ಸಿನಿಮಾ ಥಿಯೇಟರ್ ಗಳು ಕನ್ನಡ ಭಾಷೆಯ ‘ಉಡುಂಬಾ’ ಹಾಗೂ ‘ನನ್ನ ಪ್ರಕಾರ’ ಚಲನಚಿತ್ರಗಳನ್ನುತೆಗೆದು ‘ಸಾಹೂ’ ಚಲನಚಿತ್ರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮನೋವೃತ್ತಿ ಸರಿಯಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೂ ಅವಕಾಶ ನೀಡಬೇಕು. ಅನ್ಯ ಭಾಷಾ ಸಿನಿಮಾಗಳು ಬಂದರೆ ಕನ್ನಡ ಸಿನಿಮಾಗಳನ್ನು ತೆಗೆದು ಹಾಕುವುದೆಂದರೆ ಏನರ್ಥ. ಕನ್ನಡ ಸಿನಿಮಾ ನೋಡಲಿಕ್ಕೂ ಪ್ರೇಕ್ಷಕರಿದ್ದಾರೆ. ದಯವಿಟ್ಟು ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಗಳನ್ನೂ ಪ್ರದರ್ಶಿಸಿ ಎಂದು ಮನವಿ ಮಾಡಿದ್ದಾರೆ.