ಟಿ-20 ಕ್ರಿಕೆಟ್: ವಿಶ್ವ ದಾಖಲೆ ಆಗ್ರಸ್ಥಾನಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೆಣಸಾಟ

ಟಿ-20 ಕ್ರಿಕೆಟ್: ವಿಶ್ವ ದಾಖಲೆ ಆಗ್ರಸ್ಥಾನಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೆಣಸಾಟ

ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ 3ನೇ ಟಿ-20 ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಸೆಣಸಾಟದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವಿನ ಟಿ-20 ಪ್ರಾಬಲ್ಯದ ಕದನ ಮುಂದುವರಿಯಲಿದೆ.

ಇಬ್ಬರು ಭಾರತೀಯ ಬ್ಯಾಟಿಂಗ್ ಶ್ರೇಷ್ಠರು ಟಿ-20 ಕ್ರಿಕೆಟ್‌ನಲ್ಲಿ ಪ್ರಮುಖ ರನ್-ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಲು ಮುಖಾಮುಖಿ ಸೆಣಸಲಿದ್ದಾರೆ. ವಿರಾಟ್‍ ಕೊಹ್ಲಿ ಕಳೆದ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ರೋಹಿತ್‌ರನ್ನು ಕೆಳಗಿಳಿಸಿ ತಾವು ಮೊದಲ ಸ್ಥಾನ ಪಡೆದುಕೊಂಡಿದ್ದರು.

ಆದರೆ ಭಾನುವಾರ ನಡೆಯುವ ಪಂದ್ಯದಲ್ಲಿ ರೋಹಿತ್‍ ಶರ್ಮಾ ಅಗ್ರ ಸ್ಥಾನವನ್ನು ಮರಳಿ ಪಡೆಯಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಕೊಹ್ಲಿಯ ಸಾಧನೆಯಿಂದ ಕೇವಲ ಎಂಟು ರನ್‌ಗಳ ದೂರದಲ್ಲಿದ್ದು, ಅಗ್ರ ಸ್ಥಾನವನ್ನು ಪಡೆಯಬಹುದು. ಟಿ-20  ಕ್ರಿಕೆಟ್‌ನಲ್ಲಿ ಕೊಹ್ಲಿ 2,441 ರನ್ ಗಳಿಸಿದರೆ, ಶರ್ಮಾ 2,434 ರನ್ ಗಳಿಸಿದ್ದಾರೆ.

ರೋಹಿತ್‍ ಶರ್ಮಾ ಅವರು ಕೊಹ್ಲಿಗೆ ಮುಂಚಿತವಾಗಿ ಬ್ಯಾಟಿಂಗ್ ಮಾಡಲಿದ್ದು, ಒಂದೆರಡು ಬೌಂಡರಿಗಳೊಂದಿಗೆ ತಮ್ಮ ನಾಯಕನನ್ನು ಸುಲಭವಾಗಿ ಮೀರಿಸಬಹುದು.

ಮೊಹಾಲಿಯಲ್ಲಿ ನಡೆದ 2ನೇ ಟಿ-20 ಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ಗೆಲುವಿನ ಓಟವನ್ನು ಮುಂದುವರಿಸಿದೆ. ನಾಯಕ ವಿರಾಟ್ ಕೊಹ್ಲಿ ಔಟಾಗದೇ 72 ರನ್ ಗಳಿಸಿ ಮಿಂಚಿದ್ದರು. ಶಿಖರ್ ಧವನ್ 31 ಎಸೆತಗಳಲ್ಲಿ 40 ರನ್ ಗಳಿಸಿದ್ದರು.