ನಿರ್ಭಯಾ ಪ್ರಕರಣ : ಅಪರಾಧಿಗಳಿಬ್ಬರ ಪರಿಹಾರಾತ್ಮಕ ಅರ್ಜಿ ವಜಾ

ನಿರ್ಭಯಾ ಪ್ರಕರಣ : ಅಪರಾಧಿಗಳಿಬ್ಬರ ಪರಿಹಾರಾತ್ಮಕ ಅರ್ಜಿ ವಜಾ

ದೆಹಲಿ : ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಿನಯ್‌ ಕುಮಾರ್ ಶರ್ಮಾ ಮತ್ತು ಮುಖೇಶ್ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿತು.

ಅಪರಾಧಿಗಳಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಐದು ಸದಸ್ಯರ ಪೀಠ ಬಳಿಕ ಬಳಿಕ ಅರ್ಜಿಯನ್ನು ವಜಾಗೊಳಿಸಿತು.

ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಜನವರಿ 22 ರ ಬೆಳಗ್ಗೆ 7 ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಅದರಂತೆ ತೀರ್ಪು ನೀಡಿದ ಎರಡು ದಿನಗಳಲ್ಲೇ ಅಪರಾಧಿಗಳಿಬ್ಬರು ಸುಪ್ರೀಂಕೋರ್ಟ್ ಗೆ ಪರಿಹಾರಾತ್ಮಕ ಅರ್ಜಿಯನ್ನು ಸಲ್ಲಿಸಿದ್ದರು.