ತ್ರಿಪುರಾ, ಉತ್ತರ ಪ್ರದೇಶ, ಕೇರಳದಲ್ಲಿ ಉಪ ಚುನಾವಣೆ ಆರಂಭ

ತ್ರಿಪುರಾ, ಉತ್ತರ ಪ್ರದೇಶ, ಕೇರಳದಲ್ಲಿ ಉಪ ಚುನಾವಣೆ ಆರಂಭ

ತ್ರಿಪುರಾ: ಭದ್ರಘಾಟ್, ದಾಂಟೆವಾಡ,ಹಂಪಿಪುರ, ತ್ರಿಪುರಾ, ಛತ್ತೀಸ್ ಘರ್ ಮತ್ತು ಉತ್ತರ ಪ್ರದೇಶದಲ್ಲಿ ಇಂದು (ಸೋಮವಾರ) ಬೆಳಗ್ಗೆಯಿಂದಲೇ ಉಪ ಚುನಾವಣೆಯನ್ನು ನಡೆಸಲಾಗುತ್ತಿದೆ.

ಭದ್ರಘಾಟ್ ನಲ್ಲಿ ಸುಮಾರು 57,000 ಮತದಾರರನ್ನು ಹೊಂದಿದ್ದು, ಮತದಾನ ಬೆಳಗ್ಗ 7 ಗಂಟೆ ಶುರುವಾಗಿದೆ. ವಿಧಾನಸಭಾ ಕ್ಷೇತ್ರವಾದ ತ್ರಿಪುರಾದಲ್ಲಿ ಬಿಜೆಪಿ, ಕಾಂಗ್ರೆಸ್, ಮತ್ತು ಸಿಪಿಐ ಪಕ್ಷಗಳು ಪ್ರಬಲವಾಗಿದ್ದು ಸ್ಪರ್ಧೆಯನ್ನು ಎದುರಿಸುತ್ತಿವೆ.

ಕಳೆದ ತಿಂಗಳು ಚುನಾವಣಾ ಆಯೋಗವು ಛತ್ತೀಸ್ ಘರ್, ಕೇರಳ, ತ್ರಿಪುರಾ ಮತ್ತು ಉತ್ತರ ಪ್ರದೇಶ ಈ ನಾಲ್ಕ ರಾಜ್ಯಗಳಲ್ಲಿ ಉಪ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಲಾಗಿತ್ತು.  ಕೇರಳದ ಪಾಲಾದಲ್ಲು ಸಹ ಉಪ ಚುನಾವಣೆ ನಡೆಸಲಾಗುತ್ತದೆ ಹಾಗೂ ಈ ಬಾರಿಯು ಸಹ ಉಪ ಚುನಾವಣೆಗೆ ಇವಿಎಂ ಮತ್ತು ವಿವಿ ಪ್ಯಾಟ್ ನ್ನೆ ಬಳಸಲಾಗುತ್ತದೆ.

ಸೆಪ್ಟೆಂಬರ್ 27 ರಂದು ಮತ ಏಣಿಕೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.