ಮಳೆಯಿಂದಾಗಿ ಪಾಕಿಸ್ತಾನ-ಶ್ರೀಲಂಕಾ ಪಂದ್ಯ ರದ್ದು

ಮಳೆಯಿಂದಾಗಿ ಪಾಕಿಸ್ತಾನ-ಶ್ರೀಲಂಕಾ ಪಂದ್ಯ ರದ್ದು

ಬ್ರಿಸ್ಟೆಲ್‍ :ವಿಶ್ವಕಪ್‍ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಎರಡೂ ತಂಡ ತಲಾ ಒಂದು ಅಂಕ ಪಡೆದುಕೊಂಡಿದೆ.

ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಪಂದ್ಯ ಮಳೆ ಆರಂಭವಾಗಿದ್ದರಿಂದ ಕೆಲಕಾಲದ ಮುಂದೂಡಲು ತೀರ್ಮಾನವಾಗಿತ್ತು. ಆದರೆ ಮಳೆ ಕೆಲವು ಗಂಟೆಯ ಬಳಿಕ ನಿಂತರೂ ಅಂಪೈರ್‍ಗಳು ಪಿಚ್‍ ಪರೀಕ್ಷಿಸಿದ ಬಳಿಕ ಪಂದ್ಯವನ್ನೇ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಮೈದಾನದಲ್ಲಿ ತೇವಾಂಶ ಅಧಿಕವಿದ್ದ ಕಾರಣ ಪಂದ್ಯ ನಡೆಸದಿರಲು ಅಂಪೈರ್‍ ತೀರ್ಮಾನಿಸಿದ್ದಾರೆ,

ಇಂಗ್ಲೆಂಡ್‍ ವಿರುದ್ಧ 1 ಗೆಲುವು, ವೆಸ್ಟ್‍ ಇಂಡೀಸ್‍ ವಿರುದ್ಧ  ಸೋಲು ಕಂಡಿದ್ದ ಪಾಕಿಸ್ತಾನ ಇಂದಿನ ಒಂದು ಅಂಕದೊಂದಿಗೆ ಮೂರು ಅಂಕ ಗಳಿಸಿಕೊಂಡಂತಾಗಿದೆ. ಶ್ರೀಲಂಕಾ ತಂಡವೂ ನ್ಯೂಜಿಲ್ಯಾಂಡ್‍ ವಿರುದ್ಧ ಸೋಲು ಹಾಗೂ ಅಫ್ಘಾನ್‍ ವಿರುದ್ಧ 1 ಪಂದ್ಯದಲ್ಲಿ ಗೆಲುವು ಕಂಡಿತ್ತು. ಇಂದಿನ ಅಂಕದಿಂದ ಶ್ರೀಲಂಕಾ ಒಟ್ಟು ಮೂರು ಅಂಕ ಸಂಪಾದಿಸಿಕೊಂಡಿದೆ.