48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ

48ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ಅಭಿಮಾನಿಗಳ

ದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ, ಕ್ರಿಕೆಟ್ ಅಭಿಮಾನಿಗಳ ಪ್ರೀತಿಯ ದಾದಾ ಸೌರವ್ ಗಂಗೂಲಿ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಾದಾರ ಹುಟ್ಟುಹಬ್ಬಕ್ಕೆ ಎಲ್ಲೆಡೆಯಿಂದ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ವಿದೇಶದಲ್ಲಿ ಪಂದ್ಯಗಳನ್ನು ಗೆಲ್ಲುವ ವಿಶ್ವಾಸವನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿದ ವ್ಯಕ್ತಿ ಎಂದು ಯಾವಾಗಲೂ ನೆನಪಿಸಿಕೊಳ್ಳಬಹುದು. ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ತಂಡವು ಸಾಗುತ್ತಿರುವಾಗ ಸಂದರ್ಭದಲ್ಲಿ ಗಂಗೂಲಿಯನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು.

113 ಟೆಸ್ಟ್ ಹಾಗೂ 311 ಏಕದಿನ ಪಂದ್ಯಗಳನ್ನು ಆಡಿರುವ ಗಂಗೂಲಿ 42.18 ಸರಾಸರಿಯಲ್ಲಿ 7,212 ಟೆಸ್ಟ್ ರನ್ ಗಳಿಸಿದ್ದಾರೆ ಇದರಲ್ಲಿ 16 ಶತಕ ಒಳಗೊಂಡಿದೆ. 1996ರಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ಗಂಗೂಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 35 ಅರ್ಧಶತಕ ಮತ್ತು 32 ವಿಕೆಟ್‌ಗಳನ್ನು ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ ದಾದಾ 22 ಶತಕ ಮತ್ತು 72 ಅರ್ಧಶತಕಗಳೊಂದಿಗೆ 40.73 ಸರಾಸರಿಯಲ್ಲಿ 11,363 ರನ್ ಗಳಿಸಿದ್ದಾರೆ. 100 ಏಕದಿನ ವಿಕೆಟ್‌ಗಳನ್ನೂ ಹೊಂದಿದ್ದಾರೆ. 2008 ರಿಂದ 2012 ವರೆಗೆ ಐಪಿಎಲ್ ಆಡಿರುವ ಗಂಗೂಲಿ ಒಟ್ಟು 59 ಪಂದ್ಯದಲ್ಲಿ 25.4 ಸರಾಸರಿಯೊಂದಿಗೆ 1349 ರನ್ ಗಳಿಸಿದ್ದಾರೆ. ಇದರಲ್ಲಿ 7 ಅರ್ಧ ಶತಕವೂ ಕೂಡಿದೆ.