ಕೇಜ್ರಿವಾಲ್ ನಪುಂಸಕ ಎಂಬ ವಿವಾದಾತ್ಮಕ ಹೇಳಿಕೆ ಹಿಂಪಡೆದ ಶಶಿ ತರೂರ್‌

ಕೇಜ್ರಿವಾಲ್  ನಪುಂಸಕ ಎಂಬ ವಿವಾದಾತ್ಮಕ ಹೇಳಿಕೆ ಹಿಂಪಡೆದ ಶಶಿ ತರೂರ್‌

ದೆಹಲಿ : ಸಿಎಎ ಪ್ರತಿಭಟನೆಗೆ ಬೆಂಬಲ ನೀಡದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ವಿರುದ್ಧ ನಪುಂಸಕ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಶಿತರೂರ್ ಇಂದು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

ಕೇಜ್ರಿವಾಲ್ ನಿಜವಾಗಿಯೂ ಜವಾಬ್ದಾರಿಯಿಲ್ಲದೆ ಅಧಿಕಾರವನ್ನು ಪಡೆಯಲು ಬಯಸುತ್ತಾರೆ. ಇದು ನಪುಂಸಕನಿಗೆ ಯುಗಯುಗದ ಅಧಿಕಾರವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ ಎಂದು ಶಶಿ ತರೂರ್‌ ಟೀಕಿಸಿದ್ದರು. ದೇಶದ ರಾಜಧಾನಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂಬಂಧ ಜಾಮಿಯಾ ಮಿಲಿಯಾ ಇಸ್ಲಾಮಿಯಾ , ಜೆಎನ್ ಯು, ಆಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ  ಹಿಂಸಾಚಾರದ ಕುರಿತು  ದೆಹಲಿ ಮುಖ್ಯಮಂತ್ರಿ ಮೌನವಹಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ಹೇಳಿಕೆ ವಿರುದ್ದ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನಲೆ  ಶಶಿ ತರೂರ್ ಟ್ವೀಟ್ ಮೂಲಕ ಸ್ಪಷ್ಟಿಕರಣ ನೀಡಿದ್ದಾರೆ.

'ನಾನು ಕ್ಷಮೆಯಾಚಿಸುತ್ತನೆ. ಇದು ಬ್ರಿಟಿಷ್ ರಾಜಕೀಯದ ಹಳೆಯ ಸಾಲು. ಇದನ್ನು ಇತ್ತೀಚೆಗೆ ಟಾಮ್ ಸ್ಟಾಪ್ಪಾರ್ಡ್ ರವರು ಸಹ ಈ ಪದವನ್ನು ಬಳಸಿದ್ದಾರೆ. ಆದರೆ ಇಂದು ಇದರ ಬಳಕೆ ಸೂಕ್ತವಲ್ಲ ಎಂದು ನಾನು ಒಪ್ಪುತ್ತೇನೆ. ಆ ಹೇಳಿಕೆಯನ್ನು ನಾನು ಹಿಂಪಡೆದುಕೊಳ್ಳುತ್ತೇನೆ ಎಂದು ತರೂರ್ ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದಾರೆ.

ಕೇಜ್ರಿವಾಲ್ ಎರಡು ಕಡೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನನ್ನ ಭಾವನೆ. ಸಿಎಎ ಮತ್ತು ಎನ್‌ಆರ್‌ಸಿಯನ್ನು ಅಪೇಕ್ಷಿಸುವ ಹೇಳಿಕೆಯನ್ನು ನೀಡಿದ್ದಾರೆ. ಸರ್ಕಾರ ಇದನ್ನು ಹಿಂತೆಗೆದುಕೊಳ್ಳಬೇಕು. ಆದರೆ ಅವರು ಇದರ ಬಗ್ಗೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಒಬ್ಬ ಮುಖ್ಯಮಂತ್ರಿ ತನ್ನ ರಾಜ್ಯದಲ್ಲಿನ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಅವರು ಒಂದಿಷ್ಟು ಸಹಾನುಭೂತಿಯನ್ನು ಸಹ ತೋರಿಸಲಿಲ್ಲ ಎಂದು ಹೇಳಿದ್ದರು.

ಬೇರೆ ಯಾವುದಾದರೂ ರಾಜ್ಯದಲ್ಲಿ ವಿದ್ಯಾರ್ಥಿಗಳನ್ನು ಈ ರೀತಿ ಹಿಂಸಾಚಾರಕ್ಕೆ ಒಳಪಡಿಸಿದ್ದರೆ, ಕನಿಷ್ಟ ಪಕ್ಷ ಅವರನ್ನು ಆಸ್ಪತ್ರೆಯಲ್ಲಿ ಅಥವಾ ಮನೆ ಇಲ್ಲವೆ ಕಾಲೇಜಿನಲ್ಲಿ ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದರು ಎಂದು ಶಶಿ ತರೂರ್ ಹೇಳಿದ್ದಾರೆ.