ಕೊರೊನಾ ಭೀತಿ:ಷೇರು ಮಾರುಕಟ್ಟೆ ಭಾರೀ ಇಳಿಕೆ

ಕೊರೊನಾ ಭೀತಿ:ಷೇರು ಮಾರುಕಟ್ಟೆ ಭಾರೀ ಇಳಿಕೆ

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದಂದು ಭಾರೀ ಇಳಿಕೆ ಕಂಡಿವೆ. ಸೆನ್ಸೆಕ್ಸ್ 392.24 ಪಾಯಿಂಟ್ ಇಳಿಕೆಯಾಗಿ, 39,888.96 ಪಾಯಿಂಟ್ ಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 119.4 ಪಾಯಿಂಟ್ ಗಳಷ್ಟು ಕಡಿಮೆಯಾಗಿ 11,678.50 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

ಏಷ್ಯಾದ ಮಾರುಕಟ್ಟೆಗಳು ದುರ್ಬಲವಾಗಿದ್ದು ಹಾಗೂ ಯು.ಎಸ್. ನಲ್ಲಿ ಕೊರೊನಾ ಭೀತಿ, ಫ್ಯೂಚರ್ ಅಂಡ್ ಆಪ್ಷನ್ ಅವಧಿ ಮುಕ್ತಾಯ ಆಗುತ್ತಿರುವುದರಿಂದ ಸೆನ್ಸೆಕ್ಸ್, ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಾದ ಚಿನ್ನ, ಸರ್ಕಾರಿ ಬಾಂಡ್ ಗಳ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.