ಭಾರತೀಯ ವಿಜ್ಞಾನ ಸಂಸ್ಥೆ ವತಿಯಿಂದ ನಾಳೆ ‘ಓಪನ್ ಡೇ’ ; ಸಾರ್ವಜನಿಕರಿಗೆ ಮುಕ್ತ ಅವಕಾಶ

ಭಾರತೀಯ ವಿಜ್ಞಾನ ಸಂಸ್ಥೆ ವತಿಯಿಂದ ನಾಳೆ ‘ಓಪನ್ ಡೇ’ ; ಸಾರ್ವಜನಿಕರಿಗೆ ಮುಕ್ತ ಅವಕಾಶ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಈ ಹಿಂದಿನ ವರ್ಷಗಳಂತೆ ಸಂಸ್ಥೆಯ ’ಓಪನ್ ಡೇ-ಸಾರ್ವಜನಿಕರಿಗೆ ಮುಕ್ತ ದಿನ’ವನ್ನು 2020ರ ಫೆಬ್ರವರಿ 29ರ ಶನಿವಾರ ಆಯೋಜಿಸಿದೆ. ಅಂದು ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಸಂಸ್ಥೆಯ ಪ್ರವೇಶ ಮುಕ್ತವಾಗಿರಲಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಮುದಾಯಗಳಿಗೆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪ್ರದರ್ಶಿಸಲಾಗುವುದು.

ಅಂದು ವಿದ್ಯಾರ್ಥಿಗಳು, ವಿಜ್ಞಾನ-ತಂತ್ರಜ್ಞಾನ ಆಸಕ್ತರು, ಸಾರ್ವಜನಿಕರು, ಸಂಸ್ಥೆಯ ಆವರಣದಲ್ಲಿ ಓಡಾಡಲು ಹಾಗೂ ಮಾಹಿತಿಪೂರ್ಣ ಮತ್ತು ಆಕರ್ಷಕ ವಿಜ್ಞಾನ-ತಂತ್ರಜ್ಞಾನ ಚಟುವಟಿಕೆಗಳನ್ನು ಅರಿಯಲು ಪ್ರವೇಶ ಮುಕ್ತವಾಗಿರುತ್ತದೆ. ಅಂದು ಸಂಸ್ಥೆಯ ವಿವಿಧ ವಿಭಾಗಗಳು ಮತ್ತು ಕೇಂದ್ರಗಳಲ್ಲಿ ಜನಪ್ರಿಯ ಉಪನ್ಯಾಸಗಳು, ಪ್ರಾಯೋಗಿಕ ಪ್ರದರ್ಶನಗಳು, ಭಿತ್ತಿಪತ್ರ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆ, ವಿವಿಧ ವೈಜ್ಞಾನಿಕ ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಡೆಯಲಿವೆ.

ಯುವ ವಿದ್ಯಾರ್ಥಿಗಳ ಆಕರ್ಷಣೆಗಾಗಿ ’ಕಿಡ್ಸ್-ಝೋನ್’ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಲ್ಲಿ ವಿಜ್ಞಾನ- ತಂತ್ರಜ್ಞಾನದ ಹಲವಾರು ಪ್ರದರ್ಶನಗಳು ನಡೆಯಲಿವೆ.

ಓಪನ್ ಡೇ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.