ಮೌನದಲ್ಲಿ ಕ್ರಾಂತಿ

ಮೌನ ಸಾರ್ವತ್ರಿಕˌ ಸರ್ವವ್ಯಾಪಿಯಾಗಿರುವˌ ಎಲ್ಲವನ್ನು ಒಳಗೊಂಡˌ ಸಕಲ ಚರಾಚರ ಜೀವರಾಶಿಗಳ ಅಸ್ತಿತ್ವ ಮತ್ತು ಅರ್ಥವಾಗುವ ಭಾಷೆ ಅಥವ ಭಾಷೆಯಲ್ಲದು. ಒಳಗೂ ಹೋರಗೂ ಭಾಷೆ ಮತ್ತು ಭಾಷಣವಲ್ಲದ್ದು ಮೌನ

ಮೌನದಲ್ಲಿ ಕ್ರಾಂತಿಮೌನ ಸಾರ್ವತ್ರಿಕˌ ಸರ್ವವ್ಯಾಪಿಯಾಗಿರುವˌ ಎಲ್ಲವನ್ನು ಒಳಗೊಂಡˌ ಸಕಲ ಚರಾಚರ ಜೀವರಾಶಿಗಳ ಅಸ್ತಿತ್ವ ಮತ್ತು ಅರ್ಥವಾಗುವ ಭಾಷೆ ಅಥವ ಭಾಷೆಯಲ್ಲದು. ಒಳಗೂ ಹೋರಗೂ ಭಾಷೆ ಮತ್ತು ಭಾಷಣವಲ್ಲದ್ದು ಮೌನ. ಅಂದರೇ ನಮ್ಮೊಳಗಿರುವಂತೆ ಸಕಲ ಜೀವರಾಶಿಗಳಲ್ಲಿಯು ಇರುವ ಸ್ಥಳ ( space). ಈ ಸ್ಥಳದಲ್ಲಿಯೆ ಎಲ್ಲಾ ಬ್ರಹ್ಮಾಂಡದ ರಹಸ್ಯ ಮತ್ತು ಬ್ರಹ್ಮಾಂಡ ಅಡಗಿರುವದು.

ನಾವು ಮಾತನಾಡದಿರುವದೇ ಮೌನವೆಂದುಕೊಂಡಿದ್ದೇವೆ. ಕೆಲವರು ಮೌನವ್ರತವನ್ನು ಮಾಡುತ್ತಾರೆ. ಈ ಮಾತನಾಡದಿರುವದು ಅಥವ ವ್ರತದಿಂದ ಮೌನವಾಗಲು ಸಾಧ್ಯವೇ? ಒಳಗಡೆ ನಿರಂತರವಾಗಿ ನಾವು ಸದಾ ವಟಾವಟಾ ಎಂದು ಮಾತನಾಡಿಕೊಳ್ಳುತ್ತಲ್ಲೆ ಇರುತ್ತೇವೆ. ಯಾವದೋ ಕಾಲ್ಪನಿಕವಾದ ವೈರಿಯನ್ನೋˌ ಸ್ನೇಹಿತನನ್ನೊ ˌ ಪ್ರೇಯಸಿˌ ಪ್ರೀಯಕರ...ಇನ್ನು ಯಾರನ್ನಾದ್ರೂ ಸೃಷ್ಟಿಸಿಕೊಂಡು ನಿರಂತರವಾಗಿ ಅವರೊಂದಿಗೆ ಮಾತನಾಡುತ್ತಲೆ ಇರುತ್ತೇವೆˌ ತನ್ನಷ್ಟಕ್ಕೆ ತಾನೇ ಪ್ರಶ್ನೆ ಉತ್ತರಗಳ ಸರಮಾಲೆ ಹೆಣೆಯುತ್ತಿರುತ್ತದೆ ಅಥವ ಸರಣಿ ನೆನಪುಗಳು ಬಿಚ್ಚಿಕೊಳ್ಳುತ್ತಿರುತ್ತವೆ. ಅಥವ ಏನಾದರೂ ಮನಸ್ಸು ಗೊಣಗುತ್ತಲೆ ಇರುತ್ತದೆ. ಹೀಗೆ ಬರೀ ಆಲೋಚನೆಗಳಿಂದ ತುಂಬಿಕೊಂಡಿರುವ ಮನಸ್ಸು ಮೌನವಾಗಲೂ ಸಾಧ್ಯವೇ? ಮೌನಕ್ಕೆ ಒಳಗಡೆ  ಸ್ಥಳವೆಲ್ಲಿದೆ? ಸ್ಥಳವೆಂದ್ರೇ ಸಂಪೂರ್ಣ ಖಾಲಿತನ. ಒಳಗಡೆ ಈ ಖಾಲಿತನವನ್ನೆಲ್ಲಾ ಆಲೋಚನೆಗಳು ಆಕ್ರಮಿಸಿಕೊಂಡಿವೆ.  ಮೌನ ಮತ್ತು ಶಾಂತಿ ಇವೆರಡು ಬೇರೆಯಲ್ಲ. ನಾವು ಯಾವಗ ಮೌನವಾಗಿರುತ್ತೇವೆಯೊ ಅವಾಗ ನಾವು ಸಹಜವಾಗಿ ಶಾಂತವಾಗಿರುತ್ತೇವೆ. ಮನದಲ್ಲಿ ಆಲೋಚನೆಗಳ ಹಾವಳಿ ಎಷ್ಟೊಂದು ಇದೆಯೆಂದ್ರೇ ಒಂದು ಹತ್ತು ಸೆಕೆಂಡ್ ಕೂಡ ಮೌನದಲ್ಲಿ ಇರಲು ಸಾಧ್ಯವಾಗುತ್ತಿಲ್ಲ..

ಹಸ್ತ ನೋಡಲು ಹೇಳಿದ್ರೇˌ ಕೈ ಬೆರಳುಗಳೇ ಕಾಣುತ್ತವೆ. ಕೈ ಬೆರಳುಗಳ ಮಧ್ಯದ ಖಾಲಿಸ್ಥಳ ನಾವು ನೋಡುವುದಿಲ್ಲ. ನಮ್ಮೊಳಗಡೆ ನಿರಂತರವಾದ ಆಲೋಚನೆಗಳಿವೆ. ಆದರೇˌ ಒಂದು ಆಲೋಚನೆ ನಂತರ ಇನ್ನೊಂದು ಆಲೋಚನೆ ಮಧ್ಯ ಒಂದು ಚಿಕ್ಕ ಸ್ಥಳವಿದೆ ಆ ಸ್ಥಳವನ್ನು ನೋಡುವುದಿಲ್ಲ. ಮಾತನಾಡುವಾಗ ಒಂದು ಪದದಿಂದ ಇನ್ನೊಂದು ಪದ ಉಚ್ಚಾರಣೆ ಮಧ್ಯ ಒಂದು ಅಂತರವಿದೆ ಆ ಅಂತರವನ್ನು ನಮಗೆ ಗಮನಿಸಲು ಆಗುತ್ತಿಲ್ಲ. ಬರೆಯುವಾಗ ಒಂದು ಶಬ್ದದಿಂದ ಇನ್ನೊಂದು ಶಬ್ದ ಬರೆಯುವ ಮಧ್ಯ ಸ್ಥಳವಿದೆ...ಈ ಸ್ಥಳಗಳನ್ನು ಆಳವಾಗಿ ಗಮನಿಸಲು ಸಾಧ್ಯವಿದ್ದಲ್ಲಿ ನಾವು ಮೌನದ ಆಳದಲ್ಲಿ ಇರಬಲ್ಲೆವು. ಇದನ್ನೆಲ್ಲಾ ಗಮನಿಸಲು ಮನಸ್ಸು ಸದಾ ಏಚ್ಚರದಲ್ಲಿರಬೇಕು.

ರಾತ್ರಿ ಮಲಗಿರುವಾಗಲೂ ನಾವು ಮೌನದಲ್ಲಿ ಇರುತ್ತೆವೆಯೆ? ನಿದ್ರೆಯ ಬಹುತೇಕ ಸಮಯ ಆಲೋಚನೆಗಳು ಕನಸಿನ ರೂಪದಲ್ಲಿ ಇರುತ್ತವೆ. ಮನುಷ್ಯ ಎರಡು ಗಂಟೆ ಮಾತ್ರ ಆಳವಾದ ವಿಶ್ರಾಂತ ಸ್ಥಿತಿಯಲ್ಲಿ ಇರುತ್ತಾನೆ. ಭಾರತದಲ್ಲಿ ಮಧ್ಯರಾತ್ರಿ 3 ಗಂಟೆಯಿಂದ ಬೆಳಗ್ಗಿನ 5 ಗಂಟೆಯವರೆಗೆ ಮಾತ್ರ ಯಾವ ಆಲೋಚನೆಗಳಿಲ್ಲದೆ ವಿಶ್ರಾಂತ ಸ್ಥಿತಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ನಿಸರ್ಗ ನಮ್ಮೊಳಗೆ ಅದ್ಯಮವಾದ ಚೈತನ್ಯವನ್ನು ಭರಿಸುತ್ತದೆ. ಭಾರತದಲ್ಲಿ ರಾತ್ರಿ ಮೂರರಿಂದ ಐದು ಗಂಟೆಯವರೆಗೆ ಹೆದ್ದಾರಿ ಮೇಲೆ ವಾಹನ ಸಂಚಾರ ನಿಷೇಧಗೊಳಿಸಲಾಗಿದೆ. ಯಾಕೆಂದರೆ ˌ ಅದು ಗಾಢ ವಿಶ್ರಾಂತಿಯ ಸಮಯ. ಇಂಥ ಸಮಯದಲ್ಲಿ ವಾಹನ ಚಲಾಯಿಸಿದರೆ ˌ ಅಪಘಾತ ಸಂಭವ ಹೆಚ್ಚು. ಬಹುತೇಕ ವಾಹನ ಅಪಘಾತಗಳು ಮತ್ತು ಮನುಷ್ಯ ನಿದ್ರಾಹೀನತೆˌ ರೋಗಿಗಳುˌ ರಾತ್ರಿ ಕೆಲಸ ಮಾಡುವವರುˌ ವ್ರದ್ದರು... ಹದ್ರಯಾಘಾತವಾಗುವ ಸಮಯವಿದು. ಮನಸ್ಸಿನ ವಿಶ್ರಾಂತಿಯೆಂದರೆ ಅದರ ಮೂಲ ಸ್ಥಳ ಮೌನದಲ್ಲಿ ಲೀನವಾಗುವಿಕೆ. ಈ ಸಮಯದಲ್ಲಿ ಮನಸ್ಸು ತನ್ನೆಲ್ಲ ದಿನನಿತ್ಯದ ವ್ಯವಾಹರವನ್ನೆಲ್ಲಾ ಮುಗಿಸಿ ವಿಶ್ರಾಂತಿಗೆ ಮರಳುವ ಸಮಯ.

ಮೌನದಲ್ಲಿ ಕ್ರಾಂತಿ ಘಟಿಸುವದು. ಪ್ರತಿಯೊಂದು ಮೊದಲು ಮೌನದಲ್ಲಿ ಸೃಷ್ಟಿಯಾಗುತ್ತದೆ. ನಂತರ ಹೊರಗಡೆ ಅದು ಪುನರ್‌ಸೃಷ್ಟಿಯಾಗಿದೆ.  ಅಂದರೇˌ ಏನೇ ಸೃಷ್ಟಿಯಾದ್ರು ಮೌನದಲ್ಲಿ. ಏನೇ ಲೀನವಾದ್ರೂ ಮೌನದಲ್ಲಿ..

ಮೌನದ ಬಗ್ಗೆ ವಿಶ್ಲೇಷಿಸಲಾಗದು. ಏನೇ ವಿಶ್ಲೇಷಿಸಿದರೂ ಅದು ಮೌನವಾಗುವುದಿಲ್ಲ. ಮೌನದ ವಿಶ್ಲೇಷಣೆ ವಿಶ್ಲೇಷಕನದೇ ಆಗಿರುತ್ತದೆ ಹೊರತು ಮೌನದ್ದಲ್ಲ. ಮಾತುಗಳು ಮೌನವನ್ನು ಸಂಕೇತಿಸುತ್ತವೆ ಅಷ್ಟೆ. ಆದರೇˌ ಅದು ಸಮಗ್ರ ಮೌನವಲ್ಲ. ಮಾತುಗಳನ್ನು ಭಿತ್ತರಿಸಲು, ಪ್ರಸರಿಸಲು ಅನೇಕ ಸಂಸ್ಥೆಗಳು, ಮಾಧ್ಯಮಗಳು, ಸಂಘಗಳು ಸಂಘಟನೆಗಳಿವೆ...ಆದರೇˌ ಮೌನವನ್ನು ಭಿತ್ತರಿಸಲಾಗದುˌ ಹಸ್ತಾಂತರಿಸಲಾಗದುˌ ಪ್ರಸರಿಸಲಾಗದು. ಅದು ಸ್ವಯಂನ ದರ್ಶನ.

ಧ್ಯಾನದಲ್ಲಿ ಏಚ್ಚರದಿಂದ ಮೌನವಾಗುತ್ತೆವೆ. ಹೀಗಾಗಿ ನಮ್ಮ ಆಲೋಚನೆಗಳ ವೇಗವಿರುವುದಿಲ್ಲ. ಯಾವಾಗ ಆಲೋಚನೆಗಳ ವೇಗ ಕಡಿಮೆಯಿರುತ್ತದೆಯೋ ಅವುಗಳನ್ನು ನಾನು ಸ್ಪಷ್ಟವಾಗಿ ನೋಡುತ್ತ ˌ ಅವುಗಳನ್ನು ನಿರ್ದೇಶಿಸಬಹುದು. ಯಾವಾಗ ನಿಮ್ಮ ಆಲೋಚನೆಗಳನ್ನು ನಿರ್ದೇಶಿಸುವ ಶಕ್ತಿ ಬರುತ್ತದೆಯೋ ಅವಾಗ ನಿಮಗೆ ನೀವೇ ಯಜಮಾನ.