ಟಿ-20ಯಲ್ಲಿ ವಿಶೇಷ ಸಾಧನೆಗೈದ ಯಜುವೇಂದ್ರ ಚಹಲ್ !

ಟಿ-20ಯಲ್ಲಿ ವಿಶೇಷ  ಸಾಧನೆಗೈದ ಯಜುವೇಂದ್ರ ಚಹಲ್ !

ಹೈದರಾಬಾದ್:ವೆಸ್ಟ್ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ವಿಶೇಷ ಸಾಧನೆ ಮಾಡಿದ್ದಾರೆ. ಟಿ20 ಮಾದರಿಯಲ್ಲಿ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿ ಆರ್.ಅಶ್ವಿನ್ ರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಆಟಗಾರ ಹೆಟ್ಮಾಯರ್ ವಿಕೆಟ್ ಪಡೆಯುವ ಮೂಲಕ ಚಹಲ್ ಈ ಸಾಧನೆ ಮಾಡಿದ್ದು, ಆ ಮೂಲಕ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ಹಿಂದಿಕ್ಕಿದ್ದಾರೆ.

ಭಾರತ ಪರ ಅತಿ ಕಡಿಮೆ 34 ಪಂದ್ಯದಲ್ಲಿ 50 ವಿಕೆಟ್ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಯನ್ನು ಚಹಲ್ ಸಾಧಿಸಿದ್ದು, ಈ ಪಟ್ಟಿಯಲ್ಲಿ ಶ್ರೀಲಂಕಾ ಆಟಗಾರ ಅಜಂತಾ ಮೆಂಡಿಸ್ (26 ಪಂದ್ಯ) ವಿಶ್ವ ಕ್ರಿಕೆಟ್‍ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದುವರೆಗೂ ವಿಶ್ವ ಟಿ20 ಕ್ರಿಕೆಟ್ ಮಾದರಿಯಲ್ಲಿ 32 ಆಟಗಾರರು 50 ವಿಕೆಟ್ ಪಡೆದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಭಾರತದ ಪರ ಆರ್.ಅಶ್ವಿನ್, ಬುಮ್ರಾ, ಚಹಲ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮೊದಲ ಟಿ20 ಪಂದ್ಯದಲ್ಲಿ ಚಹಲ್ 9 ಓವರ್ ನಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದಿದ್ದರು.