ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌: ಸಿಂಧೂ ಸೋಲುವ ಮೂಲಕ ಭಾರತ ಅಭಿಯಾನ ಅಂತ್ಯ

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌: ಸಿಂಧೂ ಸೋಲುವ ಮೂಲಕ ಭಾರತ ಅಭಿಯಾನ ಅಂತ್ಯ

ಬರ್ಮಿಂಗ್ ಹ್ಯಾಮ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ ಕ್ವಾರ್ಟರ್ ಫೈನಲ್ಸ್‌ ನಲ್ಲಿ  ಭಾರತದ ಪಿ.ವಿ.ಸಿಂಧೂ    ಸೋಲು ಕಂಡಿದ್ದಾರೆ.

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸಿಂಧೂ  21-12, 15-21, 13-21 ರಿಂದ ಜಪಾನ್ ನೊಜೊಮಿ ಒಕುಹಾರ ವಿರುದ್ಧ ಸೋತು ನಿರಾಶೆ ಅನುಭವಿಸಿದರು.  ಒಂದು ಗಂಟೆ 8 ನಿಮಿಷ ನಡೆದ ಎಂಟರ ಘಟ್ಟದ ಕಾದಾಟದಲ್ಲಿ ಸಿಂಧೂ ಆಘಾತಕ್ಕೆ ಒಳಗಾದರು. ಸಿಂಧೂ   ಸೋಲುವ ಮೂಲಕ  ಸೂಪರ್ 1000 ಪಂದ್ಯಾವಳಿಯಲ್ಲಿ ಭಾರತದ ಅಭಿಯಾನವನ್ನು ಕೊನೆಗೊಳಿಸಿತು.