ಪಿ.ಶೇಷಾದ್ರಿ ನಿರ್ದೇಶನದಲ್ಲಿ ‘ಮೋಹನದಾಸ’: ಪುತಲೀಬಾಯಿಯಾಗಿ ನಟಿ ಶೃತಿ

ಪಿ.ಶೇಷಾದ್ರಿ ನಿರ್ದೇಶನದಲ್ಲಿ ‘ಮೋಹನದಾಸ’: ಪುತಲೀಬಾಯಿಯಾಗಿ ನಟಿ ಶೃತಿ

ಪಿ. ಶೇಷಾದ್ರಿ ನಿರ್ದೇಶನದಲ್ಲಿ ‘ಮೋಹನದಾಸ’ ಸಿನಿಮಾ ಮೂಡಿಬರ್ತಿದೆ. ರಾಷ್ಟ್ರಪಿತ  ಮಹಾತ್ಮ ಗಾಂಧಿಯವರ ಜೀವನಾಧಾರಿತ ಚಿತ್ರದ ತಾಯಿ ಪುತಲೀಬಾಯಿ ಪಾತ್ರ​ದಲ್ಲಿ ಶೃತಿ ನಟಿಸ್ತಿದ್ದಾರೆ.

ಗಾಂಧೀಜಿಯವರ ಬಾಲ್ಯ ಜೀವನದ ಕುರಿತ ಕಥಾ ಎಳೆಯನ್ನು ಮೋಹನದಾಸ ಸಿನಿಮಾ ಹೊಂದಿರಲಿದೆಯಂತೆ.

ಕಾದಂಬರಿ ಆಧಾರಿತ ಸಿನಿಮಾ ಹಾಗೂ ಬಯೋಪಿಕ್ ಸಿನಿಮಾ ನಿರ್ದೇಶನದಲ್ಲೇ ಹೆಚ್ಚು ತೊಡಗಿಸಿಕೊಳ್ಳೋ ಶೇಷಾದ್ರಿಯವರು ಬಾರಿ ಗಾಂಧೀಜಿ ಜೀವನದ ಕಥೆ ಹೇಳೋಕೆ ಹೊರಟಿದ್ದಾರೆ. ‘ಮೂಕಜ್ಜಿಯ ಕನಸುಗಳು’ ಸಿನಿಮಾ ಬಳಿಕ  ಮೂಡಿಬರ್ತಿರೋ ಬಯೋಪಿಕ್ ಮಾದರಿ ಸಿನಿಮಾ ಮೋಹನದಾಸ.

ಚಿತ್ರದಲ್ಲಿ ಬಾಲ ಪ್ರತಿಭೆ ಸಮರ್ಥ್, ಅನಂತ್ ಮಹಾದೇವನ್, ಪರಮ್ ಸ್ವಾಮಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಗುಜರಾತ್, ಪೋರಬಂದರ್, ರಾಜಕೋಟ್, ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.  ಶೀಘ್ರದಲ್ಲೇ ಚಿತ್ರ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ.