ಸಿಕ್ಕಿದೆ ಹಿಂದೆಂದೂ ಕಾಣದ ಒಂದು ಖನಿಜ!

ಪ್ರಯೋಗಾಲಯದಲ್ಲಿ ಇದುವರೆಗೆ 600,000 ದಷ್ಟು ಖನಿಜಗಳನ್ನು ಪತ್ತೆ ಮಾಡಲಾಗಿದೆ. ಆದರೆ ಪ್ರಾಕೃತಿಕವಾಗಿ ರೂಪುಗೊಂಡಿರುವಂಥ ಖನಿಜ ಇದರಲ್ಲಿ 6 ಸಾವಿರದಷ್ಟು ಮಾತ್ರ.

ಸಿಕ್ಕಿದೆ ಹಿಂದೆಂದೂ ಕಾಣದ ಒಂದು ಖನಿಜ!

ಆಸ್ಟ್ರೇಲಿಯಾದ ವೆಡ್ಡೆಬರ್ನ್ ಎಂಬಲ್ಲಿ ಸಿಕ್ಕಿದ್ದ ಖನಿಜ, ಈ ಹಿಂದೆಂದೂ ಪ್ರಕೃತಿಯಲ್ಲಿ ಕಂಡಿರದಂಥದ್ದು ಎಂಬುದನ್ನು ವಿಜ್ಞಾನಿಗಳು ಪ್ರಯೋಗಗಳ ಮೂಲಕ ಕಂಡುಕೊಂಡಿದ್ದಾರೆ.

1951 ರಲ್ಲೇ 210 ಗ್ರಾಂನ ಸಣ್ಣ ಕಲ್ಲಿನ ತುಂಡೊಂದು ಸಿಕ್ಕಿತ್ತು. ಸೆಂಟ್ರಲ್ ವಿಕ್ಟೋರಿಯಾ ಸಂಗ್ರಹಾಲಯದಲ್ಲಿ ಅದನ್ನು ಇರಿಸಲಾಗಿತ್ತು, ಜತೆಗೆ ಆಕಾಶದಿಂದ ಬಿದ್ದಿದ್ದು ಎಂಬ ಲೆಕ್ಕದಿಂದ ಅದನ್ನ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಬೇರೆಬೇರೆ ವಿಜ್ಞಾನಿಗಳು ಪ್ರಯೋಗಕ್ಕೆ ಒಳಪಡಿಸಿದ್ದರು. ಅದರಲ್ಲಿ ಚಿನ್ನ  ಮತ್ತು ಕಬ್ಬಿಣದ ಅಂಶ, ವಿರಳವಾದ ಕಮಸಿಟ್, ಸ್ಕ್ರೀಬರ್ ಸಿಟ್, ಟಿಇನೈಟ್,ಟ್ರ್ಯಾಲೈಟ್ ನಂಥ ಖನಿಜಗಳು ಅದರಲ್ಲಿದ್ದನ್ನು ನೂರಾರು ಪ್ರಯೋಗಗಳ ಮೂಲಕ ಕಂಡುಕೊಳ್ಳಲಾಗಿತ್ತು. ಆದರೆ ಅವೆಲ್ಲಕ್ಕೂ ಮಿಗಿಲಾಗಿ ಈಗ,  ಪ್ರಾಕೃತಿಕವಾಗಿ ರಚನೆಯಾಗುವುದೇ ಇಲ್ಲ ಎನ್ನಲಾಗುವ ಐರನ್ ಮತ್ತು ಕಾರ್ಬೈಡ್(ಕಬ್ಬಿಣದ ಕಾರ್ಬೈಡ್) ಖನಿಜದಂಥ ಅತಿವಿರಳಾತಿವಿರಳದ ಅಂಶಗಳು ಅದರಲ್ಲಿರುವುದು ಗೊತ್ತಾಗಿದ್ದು ಅದಕ್ಕೆ ಎಡ್ಸ್ ಕೋಟ್ಟೈಟ್ ಎಂದು ಕರೆಯಲಾಗಿದೆ.  ಖ್ಯಾತ ಶಿಲಾವಿಜ್ಞಾನಿ ಎಡ್ವರ್ಡ್ ಸ್ಕಾಟ್ ಹೆಸರನ್ನೇ ಇದಕ್ಕಿಡಲಾಗಿದ್ದು, ಈ ಐರನ್ ಕಾರ್ಬೈಡ್ ಖನಿಜ ಪ್ರಾಕೃತಿಕವಾಗಿ ಸಿಗುತ್ತಿರಲಿಲ್ಲ, ಇದನ್ನು ಕಬ್ಬಿಣ ಕರಗಿಸುವ ಪ್ರಕ್ರಿಯೆಯಲ್ಲಿ ಮಾತ್ರವೇ ಪಡೆಯಲಾಗುತ್ತಿತ್ತು

ಪ್ರಯೋಗಾಲಯದಲ್ಲಿ ಇದುವರೆಗೆ 600,000 ದಷ್ಟು ಖನಿಜಗಳನ್ನು ಪತ್ತೆ ಮಾಡಲಾಗಿದೆ. ಆದರೆ ಪ್ರಾಕೃತಿಕವಾಗಿ ರೂಪುಗೊಂಡಿರುವಂಥ ಖನಿಜ ಇದರಲ್ಲಿ 6 ಸಾವಿರದಷ್ಟು ಮಾತ್ರ. ಈಗ ಗೊತ್ತಾಗಿರುವ ಪ್ರಾಕೃತಿಕ ಖನಿಜದ ತುಂಡು, ಆಕಾಶದಲ್ಲಿನ ಕಾಯಗಳ ನಡುವೆ ಘರ್ಷಣೆಯಾಗಿ ಕೆಳಕ್ಕೆ ಬಿದ್ದಿರಬಹುದು ಎಂಬ ಅಂದಾಜು ಇದ್ದು, ಪ್ರಸ್ತುತ ಅನೈಸರ್ಗಿಕವಾಗಿ ರೂಪಿಸಿಕೊಳ್ಳುತ್ತಿರುವ ಇಂಥ ಖನಿಜ ಪ್ರಕೃತಿಯಲ್ಲೇ ಇತ್ತು ಎಂಬುದೀಗ ಬೆಳಕಿಗೆ ಬಂದಿರುವುದರಿಂದ, ಪ್ರಕೃತಿ ಗರ್ಭದಲ್ಲಿ ಇನ್ನೂ ಏನೇನು ರಹಸ್ಯಗಳು ಅಡಗಿವೆಯೋ ಎಂಬುದರ ಹುಡುಕಾಟ ನಡೆಯುತ್ತಲೇ ಇದೆ.