ಮೋದಿ ಅವರು ‘ಗುಜರಾತ್ ಪರಂಪರೆಗೆ ಕಪ್ಪು ಚುಕ್ಕೆ’ ಇದ್ದಂತೆ: ಮಾಯಾವತಿ

ಮೋದಿ ಅವರು ‘ಗುಜರಾತ್ ಪರಂಪರೆಗೆ ಕಪ್ಪು ಚುಕ್ಕೆ’ ಇದ್ದಂತೆ: ಮಾಯಾವತಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ‘ಗುಜರಾತ್‍ ಪರಂಪರೆಗೆ ಕಪ್ಪು ಚುಕ್ಕೆ’ ಇದ್ದಂತೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಯಾವತಿ,  ‘ಮೋದಿ ಅವರು ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಗಿಂತಲೂ ಹೆಚ್ಚುಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದವರು. ಆದರೆ, ಅವರ ಆಡಳಿತವು ಬಿಜೆಪಿಗೆ ಕಪ್ಪು ಚುಕ್ಕೆಯಾಗಿದೆ. ನನ್ನ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶವು ಗಲಭೆ ಹಾಗೂ ಅರಾಜಕತೆಯಿಂದ ಮುಕ್ತವಾಗಿತ್ತು’ ಎಂದಿದ್ದಾರೆ.

‘ಪ್ರಧಾನಿ ಮೋದಿ ಅವರು ಎಲ್ಲಾ ಯೋಗ್ಯತೆಯ ಮಿತಿಗಳನ್ನು ದಾಟಿದ್ದಾರೆ, ಬೇನಾಮಿ ಗುಣಲಕ್ಷಣದವರು ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವವರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಮೋದಿ ಅವರು ಕೇವಲ ಕಾಗದದ ಮೇಲೆ ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.