ಮೊಬೈಲ್ `ಫ್ರೀ ಚಾರ್ಜ್ ಮಾಡಿ, ಹಣ ಕಳೆದುಕೊಳ್ಳಬೇಡಿ

ಮೊಬೈಲ್ `ಫ್ರೀ ಚಾರ್ಜ್ ಮಾಡಿ, ಹಣ ಕಳೆದುಕೊಳ್ಳಬೇಡಿ

ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ಚಾರ್ಜು ಮಾಡಿಕೊಳ್ಳುವ ಕೇಂದ್ರದಲ್ಲಿ ಚಾರ್ಜು ಮಾಡಿಕೊಂಡರೆ, ಬ್ಯಾಂಕಿನ ಹಣ, ಇ-ಮೇಲ್, ಖಾಸಗಿ ಫೋಟೋಗಳೂ ಇತ್ಯಾದಿ ಇತ್ಯಾದಿ ಎಲ್ಲವೂ ಹ್ಯಾಕ್ ಆಗುವ ಸಂಭವಗಳಿಗೆ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಬ್ಯಾಟರಿ ಚಾರ್ಜು ಮಾಡಿಕೊಳ್ಳಲೇ ಬೇಡಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸೂಚನೆ ಕೊಟ್ಟಿದೆ.
ಬೆಂಗಳೂರಿನ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಮಾಲ್‌ಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯ ವಿವರ ಕೊಡಬೇಡಿ. ಅದರಿಂದ ನಿಮ್ಮ ವಿವರಗಳನ್ನ ಮಾರಿಕೊಳ್ಳುವಂಥದ್ದು ಆಗುತ್ತೆ, ಸೈಬರ್ ಅಪರಾಧಗಳು ಹೆಚ್ಚಾಗಲು ಇದೂ ಒಂದು ಕಾರಣ ಎಂದು ಹೇಳಿದ್ದರ ಬೆನ್ನಲ್ಲೇ ಎಸ್‌ಬಿಐ, ಬಸ್ಸು ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಆಸ್ಪತ್ರೆ, ಪ್ರಮುಖ ಸ್ಥಳಗಳು ಹೀಗೇ ಇತ್ಯಾದಿ ಕಡೆ, ತುರ್ತಿಗೆ ಇರಲಿ ಎಂದು ಉಚಿತವಾಗಿ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ. ಇಂಥವುಗಳಲ್ಲಿ ಗ್ಯಾಡ್ಜೆಟ್ ನಂತ ಇತರೆ ಸಲಕರಣೆ ಬಳಸಿ, ಚಾರ್ಜಿಗಿಟ್ಟ ಮೊಬೈಲ್, ಲ್ಯಾಪ್‌ಟಾಪ್‌ನಿಂದ ಮಾಹಿತಿ ಕದಿಯಲಾಗುತ್ತಿದೆ ಎಂದು ಎಚ್ಚರಿಕೆ ಕೊಟ್ಟಿದೆ.
ನೇರವಾಗಿ ವಿದ್ಯುತ್ ಸಂಪರ್ಕ ಸಾಧನದಿಂದಲೆ ಚಾರ್ಜು ಮಾಡಬೇಕು. ಮಧ್ಯ ಇನ್ನೇನಾದರೂ ಇದ್ದರೆ ಅದು ಮಾಹಿತಿ ಕದಿಯುವ ಸಾಧನವಾಗಿರಬಹುದು. ಅದಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಕೇಂದ್ರಗಳಲ್ಲಿ ಚಾರ್ಜು ಮಾಡಿಕೊಳ್ಳಲೇಬೇಡಿ ಎಂದು ತಿಳಿಸಿದೆ.
ಚಾರ್ಜಿಂಗ್‌ಗೆ ಹಾಕಿದಾಗ ಮಾಹಿತಿ ಕದಿಯುವಂಥದ್ದು ಹೊಸದೇನಲ್ಲ. 2012 ರಲ್ಲೇ ಕ್ಯಾಲಿಫೋರ್ನಿಯಾದಲ್ಲಿ ಇಂಥ ಅನೇಕ ಹ್ಯಾಕಿಂಗ್ ಘಟನೆಗಳು ನಡೆದು, ಅದೆಷ್ಟೋ ಮಂದಿ ಬ್ಯಾಂಕಿನಲ್ಲಿಟ್ಟಿದ್ದ ಹಣ, ಖಾಸಗಿ ಫೋಟೋ ಹಾಗೂ ಇತರೆ ಮಾಹಿತಿಗಳನ್ನು ಕಳೆದುಕೊಂಡಿದ್ದಾರೆ.