ಮಮತಾ ಬ್ಯಾನರ್ಜಿ ಶ್ರೀಲಂಕಾದ ಲಂಕಿನಿ ; ಬಿಜೆಪಿ ಶಾಸಕ ಸುರೇಂದರ್ ಸಿಂಗ್‌ ಆರೋಪ

ಮಮತಾ ಬ್ಯಾನರ್ಜಿ ಶ್ರೀಲಂಕಾದ ಲಂಕಿನಿ ; ಬಿಜೆಪಿ ಶಾಸಕ ಸುರೇಂದರ್ ಸಿಂಗ್‌ ಆರೋಪ

ಉತ್ತರ ಪ್ರದೇಶ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ರಾಕ್ಷಸಿ ಲಂಕಿನಿಗೆ ಹೋಲಿಸಿರುವ ಬಿಜೆಪಿ ಶಾಸಕ ಸುರೇಂದರ್ ಸಿಂಗ್‌, ಸಾವಿರಾರು ಹಿಂದೂಗಳನ್ನು ಕೊಂದ ಭಯೋತ್ಪಾದಕರ ರಕ್ಷಣೆಗೆ ನಿಂತಿದ್ದಾರೆ. ಇವರು ರಾಕ್ಷಸರ ಮುಖ್ಯಸ್ಥೆ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ಸಮಾಜದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ರಾಕ್ಷಸತನದ ಗುಣಗಳಿವೆ. ಆಕೆಗೆ ಮಾನವೀಯ ಮೌಲ್ಯಗಳಿಲ್ಲ ಮತ್ತು ಮಹಿಳಾ ಗುಣಲಕ್ಷಣಗಳಿಲ್ಲ, ಸಾವಿರಾರು ಹಿಂದೂಗಳನ್ನು ಕೊಂದವರಿಗೆ ಅವರು ರಕ್ಷಣೆ ನೀಡುತ್ತಾರೆ. ಅದಕ್ಕಾಗಿ ನಾವು ಅವರನ್ನು ಮನುಷ್ಯರ ಬದಲು ರಾಕ್ಷಸಿ ಎಂದು ಕರೆಯಬೇಕಾಗಿದೆ ಎಂದು ಬಿಜೆಪಿ ಶಾಸಕ ಸುರೇಂದರ್ ಸಿಂಗ್ ಎಎನ್ ಐ ಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲ. ಅವರು ಶ್ರೀಲಂಕಾದ ಲಂಕಿನಿ ಇದ್ದಹಾಗೆ. ರಾಜ್ಯದಲ್ಲಿ ಬಿಜೆಪಿ 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಈಗ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವೇ ಮುನ್ನಡೆಯಲಿದೆ. ಭಾರತದಲ್ಲಿ ಬಿಜೆಪಿ ಪಕ್ಷ ದೇವರ ಪಕ್ಷ ಇನ್ನುಳಿದ ಎಸ್ ಪಿ , ಬಿಎಸ್‌ಪಿ ಮತ್ತು ಟಿಎಂಸಿ ಪಕ್ಷಗಳು ದೆವ್ವಗಳ ಪಕ್ಷಗಳಾಗಿವೆ ಏಕೆಂದರೆ ಭಯೋತ್ಪಾದಕರಿಗೆ ರಕ್ಷಣೆ ನೀಡುವುದು ಎಂದರೆ ದೆವ್ವಗಳನ್ನು ರಕ್ಷಿಸಿಸುವುದು ಎಂದರ್ಥ. ಅದಕ್ಕಾಗಿ ನಾವು ಅವರನ್ನು ರಾಕ್ಷಸರ ಮುಖ್ಯಸ್ಥೆ ಎಂದು ಕರೆಯುತ್ತೇವೆ ಎಂದು ಬಿಜೆಪಿ ಶಾಸಕ ಸುರೇಂದರ್ ಸಿಂಗ್ ಕಿಡಿಕಾರಿದ್ದಾರೆ.