‘ಮಲ್ಲಮ್ಮನ ಮನೆ ಹೋಟ್ಲು’ ನಾಟಕ ಸಾಂಸರಿಕ ಜೀವನದ ಪ್ರತಿಬಿಂಬ  

ಸಾಮಾಜಿಕ ಕಳಕಳಿಯುಳ್ಳ ಪ್ರಸ್ತುತತೆಗೆ ಒಗ್ಗುವ ನಾಟಕ. ಸಾಂಸಾರಿಕ ಜೀವನದಲ್ಲಿ ಉಂಟಾಗುವ ಕಲಹಗಳು ತಾರಕಕ್ಕೇರಿ ವಿಚ್ಛೇದನ ಮಾಡಿಕೊಳ್ಳುವ ದಂಪತಿಗಳಿಗೆ ಈ ನಾಟಕ ಒಂದು ಅರ್ಥಪೂರ್ಣ ಪರಿಹಾರ ಸೂಚಿಸುತ್ತದೆ. ಉತ್ತಮ ಸಂದೇಶವನ್ನು ಹೊಂದಿರುವ ನಾಟಕ ಈಗಿನ ಯುವಜನತೆಗೆ ರಂಗ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತದೆ.

‘ಮಲ್ಲಮ್ಮನ ಮನೆ ಹೋಟ್ಲು’ ನಾಟಕ ಸಾಂಸರಿಕ ಜೀವನದ ಪ್ರತಿಬಿಂಬ  

ರಂಗ ಕಲೆ ಎಂದರೆ ಅದೊಂದು ರೀತಿಯ ಸಾಮಾಜಿಕ ಮೌಲ್ಯಗಳನ್ನು ದೃಶ್ಯದ ಮೂಲಕ ರಂಗದ ಮೇಲೆ ತರುವ ಒಂದು ವಿಶಿಷ್ಟ ಮಾಧ್ಯಮ. ಸಾಹಿತ್ಯ ರೂಪದಲ್ಲಿ ಇರುವ ಕತೆಗಳನ್ನು ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತೆ ದೃಶ್ಯೀಕರಿಸುವ  ಕಲೆಯೂ ಹೌದು. 

ರಂಗಭೂಮಿಗೆ ಅನೇಕ ತಿರುವು, ಆಯಾಮ, ಏಳುಬೀಳುಗಳ ಒಂದು ಇತಿಹಾಸವೇ ಇದೆ. ಪುರಾತನ ಕಾಲದಿಂದಲು ಮನುಷ್ಯ ತನ್ನ ಖುಷಿಗಾಗಿ ಬಳಸಿ ಬೆಳಸಿಕೊಂಡು ಬಂದತಹ ಒಂದು ಅದ್ಬುತ ಕಲೆಯೇ ಈ ರಂಗ ಕಲೆ .

ಇತ್ತೀಚಿನ ಆಧುನಿಕ ಜೀವನ ಶೈಲಿಯಲ್ಲಿ ಯಾಂತ್ರಿಕವಾಗಿ ಬದುಕುತ್ತಿರುವ ಈ ಯುಗದಲ್ಲಿ ರಂಗ ಭೂಮಿಯನ್ನು ನಿರ್ಲಕ್ಷಿಸಿರುವ ಜನಸಮೂಹ ಇರುವಂತೆಯೇ ಈಗಲೂ ಅದನ್ನು ಪ್ರೋತ್ಸಾಹಿಸುವ ವರ್ಗವೂ ಇದೆ. 

ಇತ್ತೀಚೆಗೆ ತಲೆ ಎತ್ತಿರುವ ಕೆಲವು ರಂಗ ಸಂಘಟನೆಗಳು ರಂಗ ಕಲೆಯಲ್ಲಿ ಹೊಸ ದಿಕ್ಕುಗಳ ಹುಡುಕಾಟಕ್ಕೆ ಪ್ರಯತ್ನ ನಡೆಸುತ್ತಲೇ ಇವೆ. ಆದರೆ ಇದನ್ನೇ ಲಾಭದ ದೃಷ್ಟಿಕೋನದಲ್ಲಿ ನೋಡುವ ಜಾಲವು ಬಹಳ ದೊಡ್ಡದಿದೆ ಬೇಸಿಗೆ ಶಿಬಿರಗಳಲ್ಲಿ ಇದರ ಅಬ್ಬರ ನೋಡಬಹುದು 

ಇದೆಲ್ಲದರ ನಡುವೆ ಕೆಲ ಯುವಜನತೆಯ ಗುಂಪು ರಂಗ ಭೂಮಿಯನ್ನು ರಂಗ ಕಲೆಯನ್ನು ಉಳಿಸುವ ಪ್ರಯತ್ನವನ್ನು ಸಹ ಮಾಡುತ್ತಿರುವುದನ್ನು ಕಾಣಬಹುದು ಅಂತಹ ಗುಂಪುಗಳಲ್ಲಿ ನಾಟಕವೇ ಜೀವನ  ಅದೇ ನಮ್ಮ ವೃತ್ತಿ ಬದುಕು ಎಂದು ಬದುಕುತ್ತಿರುವ ‘ವೃತ್ತಿ ರಂಗ’ ಎಂಬ ಸಂಸ್ಥೆಯೂ ಒಂದು. ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಯಾವ ಲಾಭವನ್ನೂ ಬಯಸದೆ ನಾಟಕ ರಚಿಸಿ ಪ್ರೇಕ್ಷಕರ ಮುಂದಿಡಲು ಈ ಯುವಜನರು ಸಿದ್ದರಾಗಿದ್ದಾರೆ 

ಇದೊಂದು ಸಾಮಾಜಿಕ ಕಳಕಳಿಯುಳ್ಳ ಪ್ರಸ್ತುತತೆಗೆ ಒಗ್ಗುವ ನಾಟಕ. ಸಾಂಸಾರಿಕ ಜೀವನದಲ್ಲಿ ಉಂಟಾಗುವ ಕಲಹಗಳು ತಾರಕಕ್ಕೇರಿ ವಿಚ್ಛೇದನ ಮಾಡಿಕೊಳ್ಳುವ ದಂಪತಿಗಳಿಗೆ ಈ ನಾಟಕ ಒಂದು ಅರ್ಥಪೂರ್ಣ ಪರಿಹಾರ ಸೂಚಿಸುತ್ತದೆ. ಉತ್ತಮ ಸಂದೇಶವನ್ನು ಹೊಂದಿರುವ ನಾಟಕ ಈಗಿನ ಯುವಜನತೆಗೆ ರಂಗ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಹಾಗೂ ಡ್ರಾಮಾ ಜೂನಿರ್ಯಸ್ ನಲ್ಲಿ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿಗೌಡ, ರಂಗ ಕಲೆಯಲ್ಲಿ ಆಸಕ್ತಿ ಇರುವ ಯುವಜನತೆಯ ಜೊತೆ ಸೇರಿ ಉತ್ತಮ ನಾಟಕವನ್ನು ತರುವ ಪ್ರಯತ್ನ ಮಾಡಿದ್ದಾರೆ. ಯಾವುದೇ ಹಣಕಾಸಿನ ನೆರವಿಲ್ಲದೇ  ಒಂದು ಉತ್ತಮ ನಾಟಕವನ್ನು ಸಮಾಜಕ್ಕೆ ನೀಡುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ.

ನಿರ್ದೇಶಕರಾದ ಗಣಪತಿಗೌಡ ಹಾಗೂ ಪ್ರಭು ರಾಜ್ ರವರು ಒಟ್ಟಾಗಿ ಸೇರಿ ‘ಮಲ್ಲಮ್ಮನ ಮನೆ ಹೋಟ್ಲು’ ಎಂಬ ಶೀರ್ಷಿಕೆಯಲ್ಲಿ ಸಾಂಸರಿಕ ಜೀವನದಲ್ಲಿ ಆಗುವ ಘಟನೆಗಳ ಸುತ್ತ ಕತೆಯನ್ನು ಹೆಣೆದಿದ್ದಾರೆ  

ಈ ನಾಟಕದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಸಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ನಾಟಕಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಿದೆ ವಿಶೇಷ ಎಂದರೆ ಈಗಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುವ ಸ್ಥಿತಿ ಇರುವ ಈ ಕಾಲಘಟ್ಟದಲ್ಲಿ ರಂಗ ಕಲೆಯ ಬಗ್ಗೆ ಒಲವಿಟ್ಟು ಅದರಲ್ಲೇ ತಮ್ಮ ಜೀವನ ಕಟ್ಟಿಕೊಳ್ಳವ ಹಂಬಲ ಇರುವ ಯುವಕರ ಗುಂಪು ನಾಟಕಕ್ಕೆ ಹೊಸ ಹುರುಪು ನೀಡಿರುವುದು. 

ಈಗಾಗಲೇ ಮೂರು ಪ್ರದರ್ಶನಗಳನ್ನು ನೀಡಿರುವ ತಂಡ ಇದೇ ತಿಂಗಳ 22 ರಂದು ಕೆ ಎಚ್ ಕಲಾಸೌಧ ದಲ್ಲಿ ಮತ್ತೆ ಪ್ರದರ್ಶನ ನೀಡಲು ಸಜ್ಜಾಗಿದೆ.