ಕೇಂದ್ರ ಸರ್ಕಾರಕ್ಕೆ ಮಹತ್ವದ ಜಯ! ಮಲ್ಯ ಭಾರತ ಹಸ್ತಾಂತರ ತಡೆಗಾಗಿನ ಮನವಿ ಕೇಳದ ಯುಕೆ ಕೋರ್ಟ್

ಕೇಂದ್ರ ಸರ್ಕಾರಕ್ಕೆ ಮಹತ್ವದ ಜಯ!  ಮಲ್ಯ ಭಾರತ ಹಸ್ತಾಂತರ ತಡೆಗಾಗಿನ ಮನವಿ ಕೇಳದ ಯುಕೆ ಕೋರ್ಟ್

ಲಂಡನ್: ಮದ್ಯದ ದೊರೆ ವಿಜಯ್ ಮಲ್ಯಗೆ ಲಂಡನ್ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅಲ್ಲಿನ ಹೈಕೋರ್ಟ್ ಅವಕಾಶ ನೀಡಿಲ್ಲ. ಕಳೆದ ತಿಂಗಳು ಭಾರತಕ್ಕೆ ಹಸ್ತಾಂತರದ ಆದೇಶದ ವಿರುದ್ಧದ ಮಲ್ಯ ಅರ್ಜಿಯನ್ನು ಅಲ್ಲಿನ ಹೈಕೋರ್ಟ್ ವಜಾ ಮಾಡಿತ್ತು. ಇದೀಗ ಮತ್ತೆ ಆ ವಿಚಾರವಾಗಿ ಯುಕೆ ಸುಪ್ರೀಂ ಕೋರ್ಟ್‌ಮೆಟ್ಟಿಲೇರುವ ಕನಸಿನಲ್ಲಿದ್ದ ವಿಜಯ್ ಮಲ್ಯ ಅವರಿಗೆ ನಿರಾಶೆಯಾಗಿದ್ದು ಇನ್ನು ಕೆಲವು ದಿನಗಳಲ್ಲಿ ಅವರು ಭಾರತಕ್ಕೆ ಆಗಮಿಸುವುದು ಖಚಿತ ಆದಂತಾಗಿದೆ.

ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ.ಸಂಬಂಧಿಸಿದಂತೆ ವಂಚನೆ ಮತ್ತು ಬಹಿರಂಗಪಡಿಸದ ಸಾಲಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಕಳೆದ  ಏಪ್ರಿಲ್ 20ರ  ಹೈಕೋರ್ಟ್ ತೀರ್ಪಿನ ಮೇಲೆ ಉನ್ನತ ನ್ಯಾಯಾಲಯವನ್ನು  ಸಂಪರ್ಕಿಸಲು ಅನುಮತಿಗಾಗಿ ಈ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಯುಕೆ ಗೃಹ ಕಾರ್ಯದರ್ಶಿ ಪ್ರಮಾಣೀಕರಿಸಿದ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹಸ್ತಾಂತರ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಜಾ ಮಾಡಿದೆ. ಇತ್ತೀಚಿನ ತೀರ್ಪು ಈಗ ಮರು ಪ್ರಮಾಣೀಕರಣಗೊಂಡಿದ್ದು  28 ದಿನಗಳಲ್ಲಿ ಮಲ್ಯ ಭಾರತಕ್ಕೆ ಶಸ್ತಾಂತರವಾಗುವ ಪ್ರಕ್ರಿಯೆ ನಡೆಯಬೇಕಿದೆ.

ಮೌಖಿಕ ಹೇಳಿಕೆಯನ್ನು ಆಲಿಸುವುದು, ಕರಡು ಶ್ನೆಗಳ ಬಗ್ಗೆ ಪ್ರಮಾಣಪತ್ರವನ್ನು ನೀಡುವುದು ಮತ್ತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವುದು ಮುಂತಾದ ಮೂರು ಅಂಶಗಳಲ್ಲೂ ಮಲ್ಯ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಯುಕೆ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ಹೇಳಿದೆ.

’ಇನ್ನು ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿ ಇದೇ ವಾರದ ಮೊದಲಲ್ಲಿ ಭಾರತ ಸರ್ಕಾರ ತನ್ನ ಪ್ರತಿಕ್ರಿಯೆ ನೀಡಿತ್ತು.ಇದೀಗ ಮಲ್ಯ ವರಿಗಿದ್ದ ಕಡೇ ಅವಕಾಶವೂ ತಪ್ಪಿದ್ದು ಭಾರತವು ಮಲ್ಯ ಅವರ ಭಾರತ ಹಸ್ತಾಂತರಕ್ಕೆ ಸಂಬಂಧಿಸಿದ ವಿನಂತಿಯ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ನಡೆಸಲಿದೆ ಎನ್ನಲಾಗಿದೆ.