2018 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ; ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ

2018 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ; ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟಬೆಂಗಳೂರು; 2018 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಸಾಲಿನ ಮೊದಲ ಅತ್ಯುತ್ತಮ ಚಲನಚಿತ್ರವಾಗಿ ' ಕರಾಳ ರಾತ್ರಿ'  ಆಯ್ಕೆಯಾಗಿದೆ.
ವಿಧಾನಸೌದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಪಟ್ಟಿಯನ್ನು ಬಿಡುಗಡೆಗೊಳಿಸಿದರು. ರಾಮನ ಸವಾರಿ, ಒಂದಲ್ಲಾ ಎರಡಲ್ಲಾ  ಚಿತ್ರಗಳು  ಎರಡು ಹಾಗೂ ಮೂರನೇ ಅತ್ಯುತ್ತಮ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಅತ್ಯುತ್ತಮ ಮನರಂಜನಾ ಸಿನಿಮಾವಾಗಿ ರಿಷಬ್ ಶೆಟ್ಟಿ ನಿರ್ದೇಶನದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.  ಸಾಮಾಜಿಕ ಕಳಕಳಿ ಚಿತ್ರವಾಗಿ  ಸಂತಕವಿ ಕನಕದಾಸ ರಾಮಧ್ಯಾನ,  ಮಕ್ಕಳ ಚಿತ್ರವಾಗಿ ಹೂ ಬಳ್ಳಿ ಆಯ್ಕೆಯಾಗಿದೆ.
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷ ಚಲನಚಿತ್ರವಾಗಿ  ತುಳು ಭಾಷೆಯ  ದೇಯಿ ಬೈದೇತಿ ಆಯ್ಕೆಯಾಗಿದೆ.
ಅತ್ಯುತ್ತಮ ನಟರಾಗಿ ಅಮ್ಮನ ಮನೆ ಚಿತ್ರದ ನಟನೆಗೆ ರಾಘವೇಂದ್ರ  ರಾಜ್ ಕುಮಾರ್  ಅವರಿಗೆ ಲಭಿಸಿದೆ. ನಟಿಯಾಗಿ  ಮೇಘನಾ ರಾಜ್  ಅವರಿಗೆ ಇರುವುದೆಲ್ಲವ ಬಿಟ್ಟು ಚಿತ್ರದ ಅಭಿನಯಕ್ಕೆ ದೊರೆತಿದೆ.  ಪೋಷಕ  ನಟ ಪ್ರಶಸ್ತಿಯು ಚೂರಿಕಟ್ಟೆಯಲ್ಲಿ ಅಭಿನಯಿಸಿದ ಬಾಲಾಜಿ ಮನೋಹರ್ ಹಾಗೂ ಪೋಷಕ ನಟಿಯಾಗಿ ಕರಾಳ ರಾತ್ರಿ ನಟಿಸಿದ ವೀಣಾ ಸುಂದರ್ ಅವರಿಗೆ ದೊರೆತ್ತಿದೆ..
ಇನ್ನು  ನಾಯಿಗೆರೆ ಚಿತ್ರಕ್ಕೆ ಕತೆ ಬರೆದ ಹರೀಶ್ ಎಸ್  ಅತ್ಯುತ್ತಮ ಕತೆ  ಪ್ರಶಸ್ತಿ , ಅತ್ಯುತ್ತಮ ಚಿತ್ರಕತೆ ಪಿ ಶೇಷಾದ್ರಿ, ಮೂಕಜ್ಜಿಯ ಕನಸುಗಳು, ಅತ್ಯುತ್ತಮ  ಸಂಭಾಷಣೆಗಾಗಿ  ಶಿರಿಷಾ ಜೋಶಿ , ಅತ್ಯುತ್ತಮ ಛಾಯಾಗ್ರಹಣ ಅಮ್ಮಚ್ಚಿಯೆಂಬ ನೆನೆಪು ಚಿತ್ರಕ್ಕ ಛಾಯಾಗ್ರಹಣ ಮಾಡಿದ  ನವೀನ್ ಕುಮಾರ್ , ಅತ್ಯುತ್ತಮ ಸಂಗೀತ ನಿರ್ದೇಶಕ ರವಿ ಬಸ್ರೂರ್ ಚಿತ್ರ  ಕೆ.ಜಿ.ಎಪ್, ಅತ್ಯುತ್ತಮ ಸಂಕಲನ  ಸುರೇಶ್ ಆರ್ಮಗಂ, , ಬಾಲ ನಟ ಹಾಗೂ ನಟಿಯಾಗಿ ಮಾಸ್ಟರ್  ಅರ್ಯನ್ , ಬೇಬಿ ಸಿಂಚನ ಪಡೆದಿದ್ದಾರೆ.