ಕೆ ಜೆ ಜಾರ್ಜ್ ಹಾಗೂ ಕುಟುಂಬಕ್ಕೆ ಇಡಿ ಸಮನ್ಸ್ ಜಾರಿ

ಕೆ ಜೆ ಜಾರ್ಜ್ ಹಾಗೂ ಕುಟುಂಬಕ್ಕೆ ಇಡಿ ಸಮನ್ಸ್ ಜಾರಿ

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಹಾಗೂ ಕುಟುಂಬದ ಸದಸ್ಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಜಾರಿ ನಿರ್ದೇಶನಾಲಯ ಕಳೆದ ಡಿಸೆಂಬರ್ 23 ರಂದು ಸಮನ್ಸ್ ಜಾರಿ ಮಾಡಿದೆ.

ಜಾರ್ಜ್ ವಿದೇಶದಲ್ಲಿ ಮಕ್ಕಳು ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಆಸ್ತಿ ಗಳಿಸಿದ್ದಾರೆ.  ಆದರೆ ಇದರ ಬಗ್ಗೆ  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಹೋರಾಟಗಾರ ರವಿಕೃಷ್ಣಾರೆಡ್ಡಿ ಕಳೆದ ಮೂರು ತಿಂಗಳ ಹಿಂದೆ ದೂರು ನೀಡಿದ್ದರು.

ಕೆ ಜೆ ಜಾರ್ಜ್ ವಿದೇಶದಲ್ಲಿ  ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ  ಇ.ಡಿ. ಮಾಹಿತಿ ಸಂಗ್ರಹಿಸಿದ್ದು, ಹೀಗಾಗಿ ಕೆ.ಜೆ. ಜಾರ್ಜ್ ಹಾಗೂ   ಪತ್ನಿ ಸುಜಾ ಜಾರ್ಜ್, ಮಕ್ಕಳಾದ ರಾಣಾ ಹಾಗೂ ರೆನಿಟಾ ಖಾತೆ ಮಾಹಿತಿ ಹಾಗೂ ದೇಶ-  ವಿದೇಶದಲ್ಲಿರುವ ಸ್ಥಿರ ಹಾಗೂ ಚರಾಸ್ತಿ ಮಾಹಿತಿ ಕೋರಿ ಫೆಮಾ ಆಕ್ಟ್ ಅಡಿಯಲ್ಲಿ ಜಾರಿ  ನಿರ್ದೇಶನಾಲಯ ಮಾಹಿತಿ ಕೇಳಿದ್ದು, ಇದೇ ತಿಂಗಳ 16ರಂದು ವಿಚಾರಣೆಗೆ ಹಾಜರಾಗುವಂತೆ  ಸಮನ್ಸ್ ಜಾರಿ ಮಾಡಿದೆ.