ಐಪಿಎಲ್ 2019: ಪ್ಲೇ ಆಫ್ ಕನಸು ಉಳಿಸಿಕೊಂಡ ಕೊಲ್ಕತ್ತಾ.

ಐಪಿಎಲ್ 2019: ಪ್ಲೇ ಆಫ್ ಕನಸು ಉಳಿಸಿಕೊಂಡ ಕೊಲ್ಕತ್ತಾ.

ಮೊಹಾಲಿ: ಆರಂಭಿಕ ಜೋಡಿ ಶುಭಂ ಗಿಲ್ ಮತ್ತು ಕ್ರಿಸ್ ಲಿನ್ ರ ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿಯ ಐ ಪಿ ಎಲ್ ಸರಣಿಯಲ್ಲಿ ಪ್ಲೇ ಆಫ್ ಗೆ ಹೋಗುವ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ.

ಪಂಜಾಬ್ ನ ಮೊಹಾಲಿಯಲ್ಲಿರುವ ಬಿಂದ್ರಾ ಮೈದಾನದಲ್ಲಿ ನೆನ್ನೆ ರಾತ್ರಿ ನಡೆದ ಕಿಂಗ್ಸ್ ಸಿಕ್ಸ್ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 7 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಗೆ ಇಳಿದ ಕೊಲ್ಕತ್ತಾ ತಂಡವು ಪಂಜಾಬ್ ತಂಡವನ್ನು 183 ರನ್ ಗಳಿಗೆ ಕಟ್ಟಿಹಾಕಿತು, ನಂತರ ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ತಂಡ ಈ ಗುರಿಯನ್ನ 18 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಲುಪಿತು.

ತಂಡದ ಪರವಾಗಿ ಶುಭಂ ಗಿಲ್ ಔಟಾಗದೆ 49 ಬಾಲ್ ಗಳಲ್ಲಿ 2 ಸಿಕ್ಸರ್ 5 ಬೌಂಡರಿಗಳೊಂದಿಗೆ 65 ರನ್ ಗಳನ್ನು ಹಾಗೂ ಕ್ರಿಸ್ ಲಿನ್ 22 ಬಾಲ್ ಗಳಲ್ಲಿ 3 ಸಿಕ್ಸರ್ 5 ಬೌಂಡರಿಗಳ ನೆರವಿನೊಂದಿಗೆ 46 ರನ್ ಗಳ ಕೊಡುಗೆ ನೀಡಿ ಕೊಲ್ಕತ್ತಾ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.ನಂತರ ಬಂದ ರಾಬಿನ್ ಉತ್ತಮ 22 ರನ್, ರಸಲ್ 24 ರನ್ ನಾಯಕ ದಿನೇಶ್ ಕಾರ್ತಿಕ್ 21 ರನ್ ಗಳನ್ನು ಗಳಿಸಿ ಇನ್ನೂ 2 ಓವರ್ ಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದಿಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡದ ಪರವಾಗಿ ಸ್ಯಾಮ್ ಕುರನ್ ಔಟ್ ಆಗದೆ 24 ಬಾಲ್ ಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 55 ರನ್ ಗಳನ್ನು ಗಳಿಸಿ ತಂಡವು 150 ರನ್ ಗಳ ಗಡಿ ದಾಟುವುದಕ್ಕೆ ಕಾರಣವಾದರು. ಹಾಗೆ ವಿಕೆಟ್ ಕೀಪರ್ ನಿಕೋಲಸ್ ಪೂರನ್ 27 ಬಾಲ್ ಗಳಲ್ಲಿ 4 ಸಿಕ್ಸರ್ 3 ಬೌಂಡರಿಗಳನ್ನು ಸಿಡಿಸಿ, 48 ರನ್ ಗಳ ಕೊಡುಗೆ ನೀಡಿದರೆ,  ಮಾಯಂಕ್ ಅಗರ್ ವಾಲ್ 36, ಮಂದೀಪ್ ಸಿಂಗ್ 25, ಕ್ರಿಸ್ ಗೇಲ್ 14 ರನ್ ಗಳಿಸಿದರು.

ಸ್ಪೋಟಕ ಬ್ಯಾಂಟಿಗ್ ಮಾಡಿದ ಕೊಲ್ಕತ್ತಾ ತಂಡದ ಆರಂಭಿಕ ಆಟಗಾರ ಶುಭಂ ಗಿಲ್ ಪಂದ್ಯ ಪುರುಷೋತ್ತಮಕ್ಕೆ ಭಾಜನರಾದರು.

ಈ ಗೆಲುವಿನ ನಂತರ ಕೊಲ್ಕತ್ತಾ ತಂಡವು ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ 5 ನೇ ಸ್ಥಾನದಲ್ಲಿದೆ.