ವಿಶ್ವಕಪ್‌ ಟೂರ್ನಿಯಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

ವಿಶ್ವಕಪ್‌  ಟೂರ್ನಿಯಲ್ಲಿ ಇಂದು ಭಾರತ-ಆಸ್ಟ್ರೇಲಿಯಾ ಪಂದ್ಯ:  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

ಕೆನ್ನಿಂಗ್ಟನ್‍: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‍ ಟೂರ್ನಿಯ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಭಾರತ ಟಾಸ್‍ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.

ಭಾರತಕ್ಕೆ ಇಂದು ವಿಶ್ವಕಪ್‍ನಲ್ಲಿ ಎರಡನೇ ಪಂದ್ಯ. ಜೂನ್‌ 5 ರಂದು ದಕ್ಷಿಣ ಆಫ್ರಿಕಾ ಎದುರು ನಡೆದ ಪಂದ್ಯದಲ್ಲಿ ಜಯ ಸಾಧಿಸಿದ್ದ ಭಾರತ ಶುಭಾರಂಭ ಕಂಡಿತ್ತು. ಐದು ಬಾರಿ ವಿಶ್ವಕಪ್‍ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಎದುರು ವಿರಾಟ್‍ ಕೋ‍ಹ್ಲಿ ನೇತ್ರತ್ವದಲ್ಲಿ ಭಾರತ ಸೆಣೆಸಲಿದೆ.