ವಿಶ್ವಕಪ್ ಕ್ರಿಕೆಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ವಿಶ್ವಕಪ್ ಕ್ರಿಕೆಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಬರ್ಮಿಂಗ್‍ಹ್ಯಾಮ್‍: ವಿಶ್ವಕಪ್‍ ಟೂರ್ನಿಯಲ್ಲಿ ನಡೆಯಲಿರುವ ಭಾರತ-ಬಾಂಗ್ಲಾ ಕ್ರಿಕೆಟ್‍ ಹಣಾಹಣಿಯಲ್ಲಿ ಟಾಸ್‍ ಗೆದ್ದಿರುವ ಭಾರತ ಮೊದಲು ಬ್ಯಾಟಿಂಗ್‍ ಆರಿಸಿಕೊಂಡಿದೆ.

ಇಂದು ಮಧ್ಯಹ್ನ 3 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‍ ವಿರುದ್ಧ ಸೋತಿದ್ದ ಭಾರತ ಇಂದಿನ ಪಂದ್ಯವನ್ನು ಗೆದ್ದು ಸೆಮಿ-ಫೈನಲ್‍ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಈ ಬಾರಿಯ ವಿಶ್ವಕಪ್‍ನಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಂಗ್ಲಾ ವಿಶ್ವಕಪ್‍ ಅಂಕಪಟ್ಟಿಯಲ್ಲಿ 7 ಸ್ಥಾನದಲ್ಲಿದ್ದು ಭಾರತಕ್ಕೆ ತೀವ್ರ ಪೈಪೋಟಿ ಒಡ್ಡಲಿದೆ.

ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‍ ಮತ್ತು ಭುವನೇಶ್ವರ್‍ ಕುಮಾರ್‍ ಆಡಲಿದ್ದು ಕುಲದೀಪ್‍ ಯಾದವ್‍ ಮತ್ತು ಕೇದರ್‍ ಜಾಧವ್‍ ಹೊರಗುಳಿದಿದ್ದಾರೆ. ಕಾಲ್ಬೆರಳಿನ ಗಾಯದಿಂದ ಹೊರನಡೆದಿರುವ ಆಲ್‍ರೌಂಡರ್‍ ಆಟಗಾರ ವಿಜಯ್‍ಶಂಕರ್‍ ಅನುಪಸ್ಥಿತಿಯಿಂದಾಗಿ ಮುಂದಿನ ಪಂದ್ಯಗಳಲ್ಲಿ ಮಯಾಂಕ್‍ ಅಗರ್ವಾಲ್‍ಗೆ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಆಟಗಾರರು

ಭಾರತ: ಕೆ ಎಲ್‍ ರಾಹುಲ್‍, ರೋಹಿತ್‍ ಶರ್ಮಾ, ವಿರಾಟ್‍ ಕೋಹ್ಲಿ(ನಾಯಕ), ರಿಷಬ್‍ ಪಂಥ್‍, ದಿನೇಶ್ ಕಾರ್ತಿಕ್‍, ಎಮ್‍ಎಸ್‍ ಧೋನಿ(ವಿಕೆಟ್‌ ಕೀಪರ್‌), ಹಾರ್ದಿಕ್‍ ಪಾಂಡ್ಯ, ಭುವನೇಶ್ವರ್‍ ಕುಮಾರ್‍, ಮಹಮ್ಮದ್‍ ಶಮಿ, ಯಜುವೇಂದ್ರ ಚಹಲ್‍, ಜಸ್ಪ್ರಿತ್‍ ಬೂಮ್ರಾ.

ಬಾಂಗ್ಲಾದೇಶ: ತಮೀಮ್‍ ಇಕ್ಬಲ್‍, ಸೌಮ್ಯ ಸರ್ಕಾರ್‍, ಶಕಿಬ್‍ ಅಲ್‍ ಹಸನ್‍, ಮಶ್ರಫೆ ಮೊರ್ಟಝಾ(ನಾಯಕ), ಮುಷ್ಫಿಕರ್‍ ರಹೀಮ್‍(ವಿಕೆಟ್‍ ಕೀಪರ್‍), ಲಿಟೊನ್‍ ದಾಸ್‍, ಮೊಸದ್ದಿಕ್‍ ಹುಸೈನ್‍, ಸಬ್ಬಿರ್ ರೆಹ್ಮನ್‍, ಮಹಮ್ಮದ್‍ ಸೈಫುದ್ದಿನ್‍, ರಬೆಲ್‍ ಹುಸೈನ್‍, ಮುಸ್ತಫಿರ್‍ ರೆಹಮಾನ್‍.