ಹೆಚ್ಚು ಪದಕಗಳ ಭರವಸೆ ಮೂಡಿಸಿದ ಹಿಮದಾಸ್

ಹೆಚ್ಚು ಪದಕಗಳ ಭರವಸೆ ಮೂಡಿಸಿದ ಹಿಮದಾಸ್

ದೆಹಲಿ: ಒಂದು ತಿಂಗಳಲ್ಲಿ ಐದು ಚಿನ್ನಗಳನ್ನು ಗೆದ್ದ ಹಿಮಾದಾಸ್, ದೇಶಕ್ಕೆ ಹೆಚ್ಚಿನ ಪದಕಗಳನ್ನು ತರುವ ಭರವಸೆ ಮೂಡಿಸಿದ್ದಾರೆ.ಚೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ 400 ಮೀ. ಓಟದಲ್ಲಿ ಇಂಡಿಯನ್ ಸ್ಪಿಂಟರ್ ಹಿಮಾದಾಸ್ 5ನೇ ಚಿನ್ನದ ಪದಕವನ್ನು ಗೆದ್ದು ಅಗ್ರಸ್ಥಾನಕ್ಕೆ ಸೇರಿಸಿಕೊಂಡರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಒಳಗೊಂಡಂತೆ ಹಿಮಾದಾಸ್, ಅದ್ಭುತ ಓಟದ ಹಿನ್ನೆಲೆಯಲ್ಲಿ ಅಭಿನಂದಿಸಿದ್ದಾರೆ.ಭಾರತಕ್ಕೆ ಹೆಚ್ಚಿನ ಪದಕಗಳನ್ನು ತರುವುದಾಗಿ ಅವರು ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.

ಕ್ಲಾಡೋ ಅಥ್ಲೆಟಿಕ್ ಮೀಟ್, ಕುಂಟೋ ಅಥ್ಲೆಟಿಕ್ ಮೀಟ್, ಫೋಜ್ನಾನ್ ಅಥ್ಲೆಟಿಕ್ ಗ್ರ್ಯಾಂಡ್ ಪ್ರೀಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದ ನಂತರ 2018   ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತದಿಂದ ಅದ್ಭುತ ಓಟ ಆರಂಭವಾಯಿತು. ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ ನಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು 4ನೇ ಚಿನ್ನದ ಪದಕವನ್ನು ಗೆದ್ದರು.

ಪ್ರಸಕ್ತ ವರ್ಷದ ಆರಂಭದಲ್ಲಿ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನಲ್ಲಿ ಬೆನ್ನು ಸ್ನಾಯು ಸೆಳೆತದಿಂದ ಚೇತರಿಸಿಕೊಂಡ ನಂತರ ಹಿಮಾದಾಸ್ ಗೆದ್ದ ಪದಕಗಳು ಇವುಆದರೂ ಸಹ ವಿಶ್ವ ಚಾಂಪಿಯನ್ ಷಿಪ್ ಹಾಗೂ 2020 ಒಲಂಪಿಕ್ ಗೆ ಅರ್ಹತೆ ಪಡೆದಿಲ್ಲ.