ಏನದು ಸಾಮಾಜಿಕ ಹೋರಾಟಗಾರ ಹಿರೇಮಠ್‌, ಆರ್ ಎಸ್ ಎಸ್ ಪ್ರಮುಖ ಸಂತೋಷ್‌ ಹೂಟ? : ಹಳಿ ತಪ್ಪಲಿದೆಯೇ ಹೋರಾಟ?

ಏನದು ಸಾಮಾಜಿಕ ಹೋರಾಟಗಾರ ಹಿರೇಮಠ್‌, ಆರ್ ಎಸ್ ಎಸ್  ಪ್ರಮುಖ ಸಂತೋಷ್‌ ಹೂಟ? : ಹಳಿ ತಪ್ಪಲಿದೆಯೇ ಹೋರಾಟ?

ಜಿಂದಾಲ್‌ಗೆ ಭೂಮಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ ಕೆ ಪಾಟೀಲ್‌ ಮತ್ತು ಸಚಿವ ಕೆ ಜೆ ಜಾರ್ಜ್‌ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಈ ನಡುವೆ ವಿವಾದಕ್ಕೆ ತೇಪೆ ಹಾಕುವ ಕೆಲಸವೂ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಾಮಾಜಿಕ ಹೋರಾಟಗಾರ ಎಸ್‌ ಆರ್‌ ಹಿರೇಮಠ್‌ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದೆ ಎನ್ನುತ್ತಾರೆ. ಜಿ. ಮಹಂತೇಶ್ 

ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವನ್ನು ತಾರ್ಕಿಕ ಘಟ್ಟಕ್ಕೆ ತಂದು ನಿಲ್ಲಿಸಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ಆರ್ಹಿರೇಮಠ್ಅವರು ರಾಷ್ಟ್ರೀಯ ಸ್ವಯಂ ಸೇವಕ(ಆರ್ಎಸ್ಎಸ್‌)ಸಂಘಟನೆ ಮತ್ತು ರಾಜ್ಯ ಬಿಜೆಪಿ ಕಛೇರಿಯ  ಬಾಗಿಲು ತಟ್ಟಿದ್ದಾರೆ.


ಆರ್ಎಸ್ಎಸ್ಸಂಘಟನೆಯ ಕಾರ್ಯದರ್ಶಿಯೂ ಆಗಿರುವ ಬಿ ಎಲ್ಸಂತೋಷ್ಅವರನ್ನು ಮಲ್ಲೇಶ್ವರಂನ ಜಗನ್ನಾಥಭವನದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಳೆದ ಮಂಗಳವಾರದಂದು ದಿಢೀರ್ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ನಡುವಿನ ಮಾತುಕತೆಯ ಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಮೊದಲು ಎಲ್ಲಿಯೂ ಎಸ್ಆರ್ಹಿರೇಮಠ್ಅವರು ಆರ್ಎಸ್ಎಸ್ಸಂಘಟನೆ ಮತ್ತು ಬಿಜೆಪಿ ಕಛೇರಿಗೆ ಮತ್ತು ಅದರ ಮುಖ್ಯಸ್ಥರನ್ನು ಭೇಟಿ ಮಾಡಿದ ನಿದರ್ಶನಗಳಿಲ್ಲ. ಹೀಗಾಗಿಯೇ ಇವರಿಬ್ಬರ ಭೇಟಿ ಸಹಜವಾಗಿಯೇ ಹಲವು ಪ್ರಶ್ನೆಗಳು ಮೂಡಲು ಕಾರಣವಾಗಿದೆ


ಎಸ್ ಆರ್ ಹಿರೇಮಠ್ ಅವರು ಸಂತೋಷ್ ಜೊತೆ ಮಾತುಕತೆ ನಡೆಸಿರುವುದು

ಜಿಂದಾಲ್‌ಗೆ ಭೂಮಿ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಬಿಜೆಪಿಯ ಕರ್ನಾಟಕ ಘಟಕದ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ ಎಸ್ಯಡಿಯೂರಪ್ಪ ಅವರು ತೀವ್ರವಾಗಿ ವಿರೋಧಿಸಿ ಸಂಬಂಧ ಅಹೋರಾತ್ರಿ ಹೋರಾಟ ನಡೆಸುವ ಸುಳಿವು ನೀಡಿರುವ ಹೊತ್ತಿನಲ್ಲೇ,  ಎಸ್ಎಸ್ಆರ್ಹಿರೇಮಠ್ಅವರು ಆರ್ಎಸ್ಎಸ್ಸಂಘಟನೆ ಕಾರ್ಯದರ್ಶಿ ಆಗಿದ್ದ ಸಂತೋಷ್ಅವರನ್ನು ಭೇಟಿಯಾಗಿದ್ದರ ಹಿಂದಿನ ನಿಜವಾದ ಉದ್ದೇಶವೇನು ಎಂಬುದು ತಿಳಿದು ಬಂದಿಲ್ಲ.  


ಸಂತೋಷ್ಮತ್ತು ಎಸ್ಆರ್ಹಿರೇಮಠ್ಅವರೊಂದಿಗೆ ನಡೆದಿರುವ ಮಾತುಕತೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. ಮುಖ್ಯವಾಗಿ ಜಿಂದಾಲ್ಕಂಪನಿಗೆ ರಾಜ್ಯ ಸರ್ಕಾರ ನೀಡಲು ಹೊರಟಿರುವ ಜಮೀನಿನ ವಿಷಯವೂ ಚರ್ಚಿಸಿದ್ದಾರೆ. ಹೋರಾಟಕ್ಕೆ ಕೈಜೋಡಿಸುವಂತೆ ಕೋರಿದ್ದಾರೆ ಎಂದು ಆರ್ಎಸ್ಎಸ್‌ ಮೂಲಗಳುಡೆಕ್ಕನ್‌'ನ್ಯೂಸ್‌ ಗೆ ತಿಳಿಸಿವೆ.


ಸಂತೋಷ್ಅವರನ್ನು ಭೇಟಿ ಮಾಡುವ ಮುನ್ನ ಎಸ್ಆರ್ಹಿರೇಮಠ್ಅವರು ಸಾಮಾಜಿಕ ಹೋರಾಟಗಾರರೊಂದಿಗೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕಚೇರಿಯೊಂದರಲ್ಲಿ ಸಭೆ ನಡೆಸಿದ್ದರು. ಜಿಂದಾಲ್ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ  ಚರ್ಚೆಯಾಗಿತ್ತಲ್ಲದೆ, ಹೋರಾಟದಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮತ್ತು ಕಾಂಗ್ರೆಸ್ನೊಳಗಿದ್ದುಕೊಂಡೇ ಬಲವಾಗಿ ವಿರೋಧ ವ್ಯಕ್ತಪಡಿಸಿರುವ ಎಚ್ಕೆ ಪಾಟೀಲ್ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟವನ್ನು ಬಲಗೊಳಿಸಲು ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಸಲಹೆ ನೀಡಿದ್ದರುಎನ್ನಲಾಗಿದೆ


ಹಲವರ ಅಭಿಪ್ರಾಯವನ್ನು ಆಲಿಸಿದ ನಂತರ ಎಸ್ಆರ್ಹಿರೇಮಠ್ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಲು ವಿರೋಧ ವ್ಯಕ್ತಪಡಿಸಿದ್ದರು. ನಂತರ ಕೆಲವರ ಒತ್ತಾಯಕ್ಕೆ ಮಣಿದು 2019 ಜೂನ್‌ 11ರಂದು ಯಡಿಯೂರಪ್ಪ ಅವರಿಗೆ ಪತ್ರ ಬರೆದು ಭೇಟಿಯಾಗಲು ಮನವಿ ಮಾಡಿದ್ದರು. ಮನವಿಯ ಪ್ರತಿ 'ಡೆಕ್ಕನ್‌'ನ್ಯೂಸ್ ಗೆ ಲಭ್ಯವಾಗಿದೆ.


ಪತ್ರ ಬರೆದ ಮರು ಗಳಿಗೆಯೇ ಕೇಶವ ಶಿಲ್ಪಕ್ಕೆ ಭೇಟಿ ನೀಡಿದ್ದ ಎಸ್ಆರ್ಹಿರೇಮಠ್ಅವರು, ಚುನಾಯಿತ ಜನಪ್ರತಿನಿಧಿ ಹಾಗೂ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರೊಂದಿಗೆ ಭೇಟಿ ನಡೆಸುವ ಮುನ್ನವೇ  ಸಂತೋಷ್ಅವರನ್ನು ಭೇಟಿಯಾಗುವ ಔಚಿತ್ಯವೇನಿತ್ತು ಎಂಬ ಪ್ರಶ್ನೆಗಳು ಕೇಳಿ ಬಂದಿವೆ.


ಭ್ರಷ್ಟಾಚಾರದ ವಿರುದ್ಧ ಹಿಂದೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ಅವರು ಚಳವಳಿ ನಡೆಸಿದ್ದ ಸಂದರ್ಭದಲ್ಲಿ ಆರ್ಎಸ್ಎಸ್ ಕೆಲವರು ಭಾಗಿ ಆಗಿದ್ದರು. ಕರ್ನಾಟಕದಲ್ಲಿಯೂ ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ಹೋರಾಟಗಳ ವಿರುದ್ಧ ಎಸ್ಆರ್ಹಿರೇಮಠ್ಅವರು ನಡೆಸುತ್ತಿರುವ ಹೋರಾಟ, ಚಳವಳಿಗೆ ಆರ್ಎಸ್ಎಸ್‌  ಪ್ರಾಂತೀಯ ಮುಖ್ಯಸ್ಥರು, ಪದಾಧಿಕಾರಿಗಳನ್ನು ಭೇಟಿಯಾಗಿ ಬೆಂಬಲ ಕೋರುತ್ತಿರುವುದು ಆರ್ಎಸ್ಎಸ್ಸಂಘಟನೆ ಮುನ್ನೆಲೆಗೆ ಬರಲು ಪರೋಕ್ಷವಾಗಿ ನೆರವಾಗಲಿದೆ ಎನ್ನಲಾಗಿದೆ.


ಎಸ್ಆರ್ಹಿರೇಮಠ್ಅವರು ಅಧ್ಯಕ್ಷರಾಗಿರುವ ಸಿಟಿಜನ್ ಫಾರ್ಡೆಮಾಕ್ರಸಿ ಹೆಸರಿನ ರಾಷ್ಟ್ರೀಯ ಸಂಘಟನೆಗೆ ಹಿಂದೆ ಜಯಪ್ರಕಾಶ್ನಾರಾಯಣ್ಅವರು ಅಧ್ಯಕ್ಷರಾಗಿದ್ದರು.ಕಾಂಗ್ರೆಸ್ವಿರುದ್ಧ ಹೋರಾಟ ನಡೆಸಿದ್ದ ಜಯಪ್ರಕಾಶ್ನಾರಾಯಣ್ಅವರು, ಮಹಾತ್ಮ ಗಾಂಧಿ ಹತ್ಯೆಯ ನಂತರ ಆರ್ಎಸ್ಎಸ್ಮುಖ್ಯವಾಹಿನಿಗೆ ಬರಲು ಕಾರಣರಾಗಿದ್ದರಲ್ಲದೆ, ವಿಚಾರದಲ್ಲಿ ಬಹುಮುಖ್ಯವಾದ ಪಾತ್ರವನ್ನೂ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.