ಜೂನ್ 14ಕ್ಕೆ “ಹ್ಯಾಂಗೋವರ್” ಸಿನಿಮಾ  ರಿಲೀಸ್

ಮೂವರು ಹುಡುಗರು, ಮೂವರು ಹುಡುಗಿಯರು ರಾತ್ರಿ ಪಾರ್ಟಿಗೆ ಹೋಗಿರ್ತಾರೆ. ಆಗ ಮೂವರು ಹುಡುಗಿಯರ ಪೈಕಿ ಒಬ್ಬಳು ಕೊಲೆಯಾಗ್ತಾಳೆ. ಕುಡಿದ ಮತ್ತಿನಲ್ಲಿದ್ದ ಅಷ್ಟು ಜನರ ಪೈಕಿ ಕೊಲೆ ಯಾರು ಮಾಡಿದ್ರು..?ಯಾಕೆ ಮಾಡಿದ್ರು ಅನ್ನೋದೆ ಸಿನಿಮಾದ ಸಸ್ಪೆನ್ಸ್ ಕಥೆಯಂತೆ.

ಜೂನ್ 14ಕ್ಕೆ “ಹ್ಯಾಂಗೋವರ್” ಸಿನಿಮಾ  ರಿಲೀಸ್

ಸ್ಯಾಂಡಲ್ ವುಡ್ ಗೆ ಈ ವಾರ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರವಿರೋ ಸಿನಿಮಾವೊಂದು ಬರ್ತಿದೆ ಅದೇ 'ಹ್ಯಾಂಗೋವರ್'.

ವಿಠಲ್ ಭಟ್ ನಿರ್ದೇಶನದಲ್ಲಿ ಮೂಡಿಬರ್ತಿರೋ ಈ ಚಿತ್ರ ಪ್ರೇಕ್ಷಕರಲ್ಲಿ ಭರ್ತಿ ಕ್ಯೂರಿಯಾಸಿಟಿ ಹುಟ್ಟಿಸತ್ತಂತೆ. ಜೀವನದಲ್ಲಿ ನಡೆಯೋ ಅನಿರೀಕ್ಷಿತ ಘಟನೆಗಳು ಕೂಡ ಇದೆ.

ಈ ಸಿನಿಮಾದಲ್ಲಿನ ಒಂದು  ಕಥಾ ಎಳೆ. ಮೂವರು ಹುಡುಗರು, ಮೂವರು ಹುಡುಗಿಯರು ರಾತ್ರಿ ಪಾರ್ಟಿಗೆ ಹೋಗಿರ್ತಾರೆ. ಆಗ ಮೂವರು ಹುಡುಗಿಯರ ಪೈಕಿ ಒಬ್ಬಳು ಕೊಲೆಯಾಗ್ತಾಳೆ. ಕುಡಿದ ಮತ್ತಿನಲ್ಲಿದ್ದ ಅಷ್ಟು ಜನರ ಪೈಕಿ ಕೊಲೆ ಯಾರು ಮಾಡಿದ್ರು..?ಯಾಕೆ ಮಾಡಿದ್ರು ಅನ್ನೋದೆ ಸಿನಿಮಾದ ಸಸ್ಪೆನ್ಸ್ ಕಥೆಯಂತೆ.

ಆಧುನಿಕತೆಯಲ್ಲಿರೋ ಯುವಜನತೆಗೆ 'ಹ್ಯಾಂಗೋವರ್' ಸಿನಿಮಾ ಡೈರೆಕ್ಟ್ ಆಗಿ ಕನೆಕ್ಟ್ ಆಗಲಿದೆಯಂತೆ. ಭರತ್, ರಾಜ್, ಚಿರಾಗ್ ಸಿನಿಮಾದ ನಾಯಕರು. ಹಾಗೆಯೇ ಮಹತಿ ಭಿಕ್ಷು, ಶಹನ್ ಪೊನ್ನಮ್ಮ, ನಂದಿನಿ ನಟರಾಜ್ ಸಿನಿಮಾದ ನಾಯಕಿಯರು. ಗಣೇಶ್ ರಾಣೇಬೆನ್ನೂರು ಸಂಭಾಷಣೆ, ವೀರ್ ಸಮರ್ಥ್ ಸಂಗೀತ ಸಂಯೋಜನೆ  ಹಾಗೂ  ಯೋಗಿ ಛಾಯಾಗ್ರಹಣ ಹ್ಯಾಂಗೋವರ್ ಸಿನಿಮಾಕ್ಕಿದೆ.

ಈ ಸಿನಿಮಾದಲ್ಲಿ ಮೂರು ಹಾಡುಗಳು ಇರಲಿವೆ. “ನಾನೇ ರುಕ್ಕು”ಅನ್ನೋ ಹಾಡಿಗೆ ನಟಿ ನೀತು ಹೆಜ್ಜೆ ಹಾಕಿದ್ದಾರೆ. ಉಳಿದಂತೆ “ದಿನವೂ ಒಂದು ರೋಚಕ”ಹಾಡು ಹಾಗೂ ಒಂದು ಥೀಮ್ ಸಾಂಗ್ ಇದೆಯಂತೆ. ಹ್ಯಾಂಗೋವರ್ ಸಿನಿಮಾವನ್ನು ರಮಣ್ ರೀಲ್ ಸಂಸ್ಥೆ ಮೂಲಕ ರಾಕೇಶ್ ನಿರ್ಮಿಸಿದ್ದಾರೆ