ಶೀಘ್ರ ವಿಚಾರಣೆಗೆ ಮೊದಲು ರಿಜಿಸ್ಟ್ರಾರ್ ಗೆ ಮನವಿ ಸಲ್ಲಿಸಿ: ಕರ್ನಾಟಕದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ

ಶೀಘ್ರ ವಿಚಾರಣೆಗೆ ಮೊದಲು ರಿಜಿಸ್ಟ್ರಾರ್ ಗೆ ಮನವಿ ಸಲ್ಲಿಸಿ: ಕರ್ನಾಟಕದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ

ದೆಹಲಿ: ಕರ್ನಾಟಕದ ಈ  ಹಿಂದಿನ ಸರ್ಕಾರದಿಂದ ಅನರ್ಹಗೊಂಡ 17 ಶಾಸಕರ ಅರ್ಜಿಯ ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್  ನಿರಾಕರಿಸಿದ್ದು, ಮೊದಲು ಈ ಅರ್ಜಿಯ ಶೀಘ್ರ ವಿಚಾರಣೆಗಾಗಿ ನೋಂದಾಯಿಸುವಂತೆ ರಿಜಿಸ್ಟ್ರಾರ್ ಗೆ ಮನವಿ ಸಲ್ಲಿಸಿ ಎಂದು ನಿರ್ದೇಶಿಸಿದೆ.

ಅನರ್ಹ ಶಾಸಕರ ಪರ ವಕೀಲ ಮೋಹನ ರೊಹಟಗಿ ಅವರು ನ್ಯಾ. ಅರುಣ ಮಿಶ್ರಾ ಅವರಿದ್ದ ನ್ಯಾಯಪೀಠದ ಮುಂದೆ,  ಆ. 19 ರಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ಸರ್ಕಾರದ ವರ್ತನೆಗೆ ಬೇಸತ್ತು ಬಂಡೆದಿದ್ದ ಎಲ್ಲ 17 ಶಾಸಕರನ್ನು ಅಂದಿನ ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದರು. ಜು. 29ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮತ ಕೋರಿ, ವಿಫಲರಾದರು. ನಂತರ, ಬಿಜೆಪಿ ನೇತೃತ್ವದಲ್ಲಿ ಬಿ.ಎಸ್.ಯಡಿಯೂರಪ್ಪ ನೂತನ ಸರ್ಕಾರ ರಚಿಸಿದ್ದರು ಎಂದು ನ್ಯಾಯಪೀಠದ ಗಮನ ಸೆಳೆದರು.

ಆದರೆ, ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಮುನ್ನ ನ್ಯಾಯಪೀಠವು, ಮೊದಲು ಈ ಪ್ರಕರಣವನ್ನು ಶೀಘ್ರವಾಗಿ ದಾಖಲಿಸಲು ರಿಜಿಸ್ಟ್ರಾರ್ ಅವರಿಗೆ ಮನವಿ ಸಲ್ಲಿಸಿ ಎಂದು ನಿರ್ದೇಶಿಸಿತು.

ಕರ್ನಾಟಕ ಸರ್ಕಾರದ ಅಂದಿನ ವಿಧಾನಸಭಾಧ್ಯಕ್ಷ ಕೆ. ರಮೇಶಕುಮಾರ್, ಎಲ್ಲ 17 ಶಾಸಕರನ್ನು ಅನರ್ಹಗೊಳಿಸಿದ್ದರು. ಈ ನಡೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.