ಈಗ ಪತ್ತೆಯಾಗಿದೆ ಇನ್ನೊಂದು ಪುರಾತನ ಕಾನನ

ಈಗ ಪತ್ತೆಯಾಗಿದೆ ಇನ್ನೊಂದು ಪುರಾತನ ಕಾನನ

ವಿಶ್ವದ ಅತ್ಯಂತ ಪ್ರಾಚೀನ ಅರಣ್ಯವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಇದರಿಂದ ಪರಿಸರ ಅಧ್ಯಯನ, ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಹುಡುಕಿಕೊಳ್ಳುವ ಸಾಧ್ಯತೆಗಳಿವೆ.

ಕೈರೋ ಸಮೀಪದ ಕ್ಯಾಟಸ್ಕಿಲ್ ಪ್ರದೇಶದಲ್ಲಿ ಅತಿ ಹಳೆಯ ಅರಣ್ಯ ಪ್ರದೇಶ ಪತ್ತೆಯಾಗಿತ್ತು. ಈಗ ಅದರಿಂದ 25 ಮೈಲುಗಳಷ್ಟು ದೂರದಲ್ಲೆ ಇರುವ ಗಿಲ್ಬೊಆ ದಲ್ಲಿ ಮತ್ತಷ್ಟು ಪ್ರಾಚೀನ ಮರಗಳ ಪಳಯುಳಿಕೆಗಳು ಶಿಲೆಗಳ ಮೇಲಿರುವುದನ್ನು ಪತ್ತೆ ಹಚ್ಚಲಾಗಿದ್ದು, ಈ ಅರಣ್ಯ 385 ಮಿಲಿಯನ್ ವರ್ಷಗಳಷ್ಟು ಹಿಂದಿನದು ಎನ್ನಲಾಗಿದೆ. ಕಾರ್ಬನ್ ಡೈ ಆಕ್ಸೈಡ್ ಸೇರಿದಂತೆ ಇತರೆ ಪರಿಸರಿಕ ಅಂಶಗಳು ಆ ಅರಣ್ಯದ ಮರಗಳ ಮೇಲೆ ಹೇಗೆಲ್ಲ ಪ್ರಭಾವ ಬೀರಿದ್ದವು, ಈಗಿನ ತಾಪಮಾನಕ್ಕೂ ಆಗಿನದ್ದರ ಏನಾದರೂ ಪರಿಹಾರವಾಗಿ ಸಿಗಬಲ್ಲದೇ ಎಂಬ ನಿಟ್ಟಿನಲ್ಲಿ ಸಂಶೋಧನೆಗಳಾಗುತ್ತಿವೆ.

ಪಾಮ್ ರೀತಿಯ ಮರಗಳು ಅವಾಗಿದ್ದು, ಗಟ್ಟಿಯಾದ ಕಾಂಡ, ವಿಸ್ತೃತವಾದ ಕೊಂಬೆಗಳು, ಎಲೆಗಳು ಇಲ್ಲದಿರುವುದು, ಎಲೆಗಳು ಇರುವಂಥದ್ದರ ಮಾದರಿಗಳೆಲ್ಲ ಸಂಶೋಧಕರಿಗೆ ದೊರೆತಿದೆ. ಇದೆಲ್ಲದರ ಸಂಪೂರ್ಣ ಅಧ್ಯಯನದಿಂದಾಗಿ ಮತ್ತಷ್ಟು ವಿಶೇಷಾಂಶಗಳು ಬೆಳಕಿಗೆ ಬರಲಿವೆ.