ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದಿರುವುದೇ ಒಂದಷ್ಟು ಸರ್ಕಾರಿ ನೌಕರರ ಚಾಳಿ: ಬಯೋಮೆಟ್ರಿಕ್ ವ್ಯವಸ್ಥೆಯಿಂದ ಸಿಕ್ಕಿ ಬಿದ್ದವರಿಗೆ ಬಿಡಿಸ್ತಿದ್ದಾರೆ ಗಾಳಿ   

ವೇತನ ಪರಿಷ್ಕರಣೆಗೆ ಹರತಾಳ ಮಾಡುವ ಸರ್ಕಾರಿ ನೌಕರರು, ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗುವ ವಿಚಾರದಲ್ಲಿ ಹಿಂದೇಟು ಹಾಕುತ್ತಾರೆ!

ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದಿರುವುದೇ ಒಂದಷ್ಟು ಸರ್ಕಾರಿ ನೌಕರರ ಚಾಳಿ: ಬಯೋಮೆಟ್ರಿಕ್ ವ್ಯವಸ್ಥೆಯಿಂದ ಸಿಕ್ಕಿ ಬಿದ್ದವರಿಗೆ ಬಿಡಿಸ್ತಿದ್ದಾರೆ ಗಾಳಿ   

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿರುವ ಸಚಿವಾಲಯ ಮತ್ತು ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಈಗಲೂ ಸರಿಯಾದ ಸಮಯಕ್ಕೆ ಕಚೇರಿಗಳಿಗೆ ಹಾಜರಾಗುತ್ತಿಲ್ಲ. ಸರ್ಕಾರಿ ನೌಕರರ ಈ ಪರಿಪಾಠ ಇವತ್ತಿನದಲ್ಲ. ಕಳೆದ ಐದಾರು ತಿಂಗಳಿನಿಂದಲೂ ಕಚೇರಿಗೆ ತಡವಾಗಿ ಹಾಜರಾಗುತ್ತಲೇ ಇದ್ದಾರೆ. ಇದಕ್ಕೊಂದು ತಾಜಾ ನಿದರ್ಶನ ವಿಧಾನಸೌಧ ಕಟ್ಟಡ 2 ಮತ್ತು 3ನೇ ಮಹಡಿಯಲ್ಲಿರುವ ಆರ್ಥಿಕ ಇಲಾಖೆ.

ಆರ್ಥಿಕ ಇಲಾಖೆಯ ಸಹಾಯಕ ವೃಂದದ 62ಕ್ಕೂ ಹೆಚ್ಚು ನೌಕರರು 2019ರ ಜನವರಿಯಿಂದ 2019ರ ಮೇ ತಿಂಗಳವರೆಗೆ ಕಚೇರಿಗೆ ತಡವಾಗಿ ಹಾಜರಾಗಿದ್ದಾರೆ. ಅಲ್ಲದೆ, ಬಯೋಮೆಟ್ರಿಕ್ ನಲ್ಲಿ 'ಮಿಸ್ಡ್ ಫ್ಲಾಶ್' ಎಂದು ನಮೂದಾಗಿರುವುದು ತಿಳಿದು ಬಂದಿದೆ. ಈ ಎಲ್ಲಾ ನೌಕರರು ಕಚೇರಿಗೆ ತಡವಾಗಿ ಬರುವುದನ್ನೇ ರೂಢಿ ಮಾಡಿಕೊಂಡಿದ್ದಾರಲ್ಲದೆ, ತಡವಾಗಿ ಬರುವುದನ್ನೇ ಚಾಳಿಯಾಗಿಸಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಬೆಳಿಗ್ಗೆ ತಡವಾಗಿ ಕಚೇರಿಗೆ ಬರುವ ಹಾಗೂ ಸಂಜೆ ಅವಧಿಗೂ ಮೊದಲೇ ಕಚೇರಿಯಿಂದ ಹೊರಡುತ್ತಿರುವ ಸಂಬಂಧ ಸರ್ಕಾರ ಸುತ್ತೋಲೆ ಹೊರಡಿಸಿದ ನಂತರ ಈ ಮಾಹಿತಿ ಹೊರಬಿದ್ದಿದೆ.  

ಕಚೇರಿಗೆ ತಡವಾಗಿ ಹಾಜರಾಗಿರುವ 62ಕ್ಕೂ ಹೆಚ್ಚು ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957 ನಿಯಮ 106-3 ಪ್ರಕಾರ ರಜೆ ಅಥವಾ ಅರ್ಧ ದಿನದ ವೇತನ ಕಡಿತಗೊಳಿಸಲು ಆರ್ಥಿಕ ಇಲಾಖೆ ಮುಂದಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ವಿ ಕಲಾವತಿ ಅವರು 2019ರ ಸೆ.3ರಂದು 62 ನೌಕರರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ. ನೋಟೀಸ್ ಪ್ರತಿ 'ಡೆಕ್ಕನ್'ನ್ಯೂಸ್ ಗೆ ಲಭ್ಯವಾಗಿದೆ.

'ಕಚೇರಿಗೆ ತಡವಾಗಿ ಹಾಜರಾಗಿರುವ ಬಗ್ಗೆ ಒಂದು ವಾರದಲ್ಲಿ ಲಿಖಿತ ಸಮಜಾಯಿಷಿ ನೀಡಬೇಕು ಮತ್ತು ನಿಗದಿತ ಅವಧಿಯೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದಲ್ಲಿ ತಮ್ಮ ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು,' ಎಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ.

ನೋಟೀಸ್ ಪಡೆದಿರುವ ನೌಕರರು 107, 108,105,102, 97, 87, 84, 79,76 ದಿನಗಳವರೆಗೆ ಕಚೇರಿಗೆ ತಡವಾಗಿ ಹಾಜರಾಗಿರುವುದು ನೋಟೀಸ್ ನಿಂದ ಗೊತ್ತಾಗಿದೆ. ಅಲ್ಲದೆ, ಬಯೋ ಮೆಟ್ರಿಕ್ ನಲ್ಲಿಯೂ ಮಿಸ್ಡ್ ಫ್ಲಾಶ್ ಎಂದು ನಮೂದಾಗಿದೆ.

ಮಿಸ್ಡ್ ಫ್ಲಾಶ್ ಆದ ನೌಕರರ ಪಟ್ಟಿ

ನೇತ್ರಾವತಿ(43 ದಿನ)  ಎಂ ಜಿ ನಾಗರಾಜ(26) ಎಂ ನಾಗರಾಜ(12), ಶಿಲ್ಪಶ್ರೀ(12) , ನಂದಿನಿ ಎಲ್ (06) ಉಜ್ವಲಾ ಹಿರೇಮಠ್(05) ಕೆ ಮೋಹನ್,(04)ಪ್ರತಿಭಾ ಕೆ ಎನ್(04) ಪರಶಿವಮೂರ್ತಿ(04) ಸಿ ವೈ ಶಾಂತಕುಮಾರಿ(02)  ವಿಜಯಲಕ್ಷ್ಮಿ ಟಿ ಎನ್(19), ಸತೀಶ್ ಕುಮಾರ್ ಎಂ( 13), ಪ್ರಶಾಂತ್ ಎಚ್ ಆರ್(10), ಮಂಜುಳ ಸಿ(05)  ರಾಮಕೃಷ್ಣ ಎಚ್ ವಿ (03) ಆರ್ ಮಹದೇವಯ್ಯ(20),  ಎಸ್ ಬಸವರಾಜು(10) ದತ್ತರಾಜ್ ಮಠದ್(07)  ಮಲಕಪ್ಪ ಪೂಜಾರಿ(04) ಪೂರ್ಣಿಮಾ(52) ಸಿಂಧು ಎಸ್(13) ಇಂದುಮತಿ ಎಲ್( 09), ತೇಜೇಶ್ವರ್ ಅನ್ವೇಕರ್(07) ತೇಜಾವತಿ ಎಂ(03) ಆದಿತ್ಯ ಬಿ ಸಿ(02)  ಕವಿತ ಎನ್(02),  ಮಂಜುನಾಥ್ ಬಿ(24),  ಶರಣಪ್ಪ(08), ವಿಜಯ್ ಊಗಾರ್(08),  ಬಸವರಾಜ್ ಎಚ್ ಜಿ(07),  ಕೋಮಲ ವಿ(07) ಬೈರಾಜು ಕೆ ಎಸ್(03)

ತಡವಾಗಿ ಹಾಜರಾದ ನೌಕರರ ಪಟ್ಟಿ

ಕೆ ಮೋಹನ್(107 ದಿನ), ನೇತ್ರಾವತಿ ಕೆ ಬಿ(76) ಸಿ ವೈ ಶಾಂತಕುಮಾರಿ(108), ಶಿಲ್ಪಶ್ರೀ ಟಿ ಎಸ್(105), ಎಂ ಜಿ ನಾಗರಾಜ್(102) ಪರಶಿವಮೂರ್ತಿ(06), ಪ್ರತಿಭಾ ಕೆ ಎನ್(90), ನಂದಿನಿ ಎಲ್(87), ಉಜ್ವಲಾ ಹಿರೇಮಠ್(90), ಮಂಜುಳ ಸಿ (87), ವಿಜಯಲಕ್ಷ್ಮಿ ಟಿ ಎನ್(86), ಸತೀಶ್ ಕುಮಾರ್ ಎಂ ( 54), ರಾಮಕೃಷ್ಣ ಎಚ್ ವಿ (98), ಪ್ರಶಾಂತ್ ಎಚ್ ಆರ್(79) ಆರ್ ಮಹದೇವಯ್ಯ(78), ಎಸ್ ಬಸವರಾಜು(109), ದತ್ತರಾಜ್ ಮಠದ್(87), ಶೋಭ ಹುನಗುಂದ(73), ಮಲಕಪ್ಪ ಪೂಜಾರಿ(48), ಎಲ್ ಇಂದುಮತಿ(76), ತೇಜಾವತಿ ಎಂ(84), ಆದಿತ್ಯ ಬಿ ಸಿ(10), ಪೂರ್ಣಿಮಾ(87), ತೇಜೇಶ್ವರ್ ಅನ್ವೇಕರ್(97), ಸಿಂಧು ಎಸ್(105), ಕವಿತ ಎನ್(96), ಕೋಮಲ ವಿ(80), ಬಸವರಾಜ್ ಎಚ್ ಜಿ(24), ಭೈರಾಜು ಕೆ ಎಸ್(63), ಮಂಜುನಾಥ್ ಬಿ(76).

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಮತ್ತು ವಿವಿಧ ಶ್ರೇಣಿಯ ಅಧಿಕಾರಿ, ಸಿಬ್ಬಂದಿಗೆ ನೋಟಿಸ್ ನೀಡಿದ್ದರೂ ತಡವಾಗಿ ಬರುವ ಪರಿಪಾಠ ಮಾತ್ರ ಇನ್ನೂ ನಿಂತಿಲ್ಲ.

ಸರ್ಕಾರಿ ಕಚೇರಿಗಳಿಗೆ ಹಾಜರಾಗುವ ಸಂಬಂಧ ರಾಜ್ಯ ಸರ್ಕಾರ 7 ವರ್ಷಗಳ ಹಿಂದೆಯೇ ಸರ್ಕಾರಿ ಆದೇಶದ ಮೂಲಕ ಏಕರೂಪ ಸಮಯವನ್ನು ನಿಗದಿಪಡಿಸಿತ್ತು. ಆದರೆ ಯಾವೊಬ್ಬ ಸರ್ಕಾರಿ ನೌಕರನೂ ನಿಗದಿಪಡಿಸಿರುವ ಸಮಯಕ್ಕೆ ಹಾಜರಾಗುತ್ತಿಲ್ಲ. ನೌಕರರು ಬೆಳಗ್ಗೆ 10ಕ್ಕೆ ಕಚೇರಿಗೆ ಹಾಜರಾಗಿ ಸಂಜೆ 5.30ರ ನಂತರ ಕಚೇರಿ ಬಿಡಬೇಕು. ಅಲ್ಲದೆ ಕಚೇರಿ ವೇಳೆಯಲ್ಲಿ ಅವರ ಸ್ಥಾನಗಳಲ್ಲಿ ಇರಬೇಕು ಎಂಬ ಸೂಚನೆಯನ್ನು ನೌಕರರು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

ಆಗಸ್ಟ್ 1ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತ ಮತ್ತು ಸುಧಾರಣಾ ಇಲಾಖೆಗೆ ಕಚೇರಿ ಅವಧಿಯಲ್ಲಿ ಭೇಟಿ ನೀಡಿದಾಗ ಹಲವು ಸಿಬ್ಬಂದಿ ಹಾಜರಿಲ್ಲದಿದ್ದರಿಂದ ಮುಂದೆ ಇಂತಹ ತಪ್ಪುಗಳಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದನ್ನು ಸ್ಮರಿಸಬಹುದು.

ಯಡಿಯೂರಪ್ಪ ಅವರು ದಿಢೀರ್ ಎಂದು ವಿಧಾನಸೌಧದಲ್ಲಿನ ಕಚೇರಿಗೆ ಭೇಟಿ ನೀಡಿದ ನಂತರ ಎಚ್ಚೆತ್ತುಕೊಂಡಿದ್ದ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಸಚಿವಾಲಯದ ಎಲ್ಲಾ ಇಲಾಖಾ ಅಧಿಕಾರಿಗಳು, ಶಾಖಾಧಿಕಾರಿಗಳಿಗೆ ಸಮಯ ಪ್ರಜ್ಞೆ, ಕಾರ್ಯನಿಷ್ಠೆಗೆ ಬದ್ಧವಾಗಿರಬೇಕೆಂದು ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಿತ್ತು.  

ಸಚಿವಾಲಯದ ನೌಕರರು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು ಮತ್ತು ಸಂಜೆ 5.30ರ ನಂತರ ಕಚೇರಿಯಿಂದ ಹೊರಡಬೇಕು ಹಾಗೂ ಕಚೇರಿ ವೇಳೆಯಲ್ಲಿ ಅವರವರ ಸ್ಥಾನದಲ್ಲಿ ತಪ್ಪದೇ ಇರಬೇಕೆಂದು ಸೂಚಿಸಲಾಗಿತ್ತು.  ಕಚೇರಿಯ ನಿಗದಿತ ಸಮಯವನ್ನು ಪಾಲಿಸದ ನೌಕರರ ವಿರುದ್ಧ ದಿನಗಳ ಆಧಾರದ ಮೇಲೆ ಅವರ ಲೆಕ್ಕದಲ್ಲಿರುವ ರಜೆಗಳನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು.