36ನೇ ಫೆಲಿಕ್ಸ್ ಸ್ಟಾಮ್ ಅಂತರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತಕ್ಕೆ ಚಿನ್ನದ ಪದಕ

36ನೇ ಫೆಲಿಕ್ಸ್ ಸ್ಟಾಮ್ ಅಂತರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತಕ್ಕೆ ಚಿನ್ನದ ಪದಕ

ಪೋಲೆಂಡ್: 36ನೇ ಫೆಲಿಕ್ಸ್ ಸ್ಟಾಮ್ ಅಂತರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಗೌರವ್ ಸೋಳಂಕಿ ಮತ್ತು ಮನೀಷ್ ಕೌಶಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ  ಬಾಕ್ಸಿಂಗ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. 

ಪೋಲೆಂಡ್ ನ ವಾರ್ಸಾದಲ್ಲಿ ನಡೆದ ಸ್ಟಾಮ್ ಅಂತರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಗೌರವ್ ಸೋಳಂಕಿ 55 ಕೆ.ಜಿ ವಿಭಾಗದಲ್ಲಿ ಮತ್ತು ಮನೀಷ್ ಕೌಶಿಕ್ 60 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 

ಮೊರಾಕೊದ ಮೊಹಮ್ಮದ್ ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಕೌಶಿಕ್ ಚಿನ್ನ ಗೆದ್ದರೇ, ಗೌರವ್ ಸೋಳಂಕಿ ತನ್ನ ಎದುರಾಳಿಯಾಗಿದ್ದ ಇಂಗ್ಲೇಂಡ್ ಆಟಗಾರ ವಿಲಿಯಂ ಕಾಲೇ ಅವರಿಗೆ ಯಾವುದೇ ಅಂಕ ಪಡೆಯಲು ಅವಕಾಶ ನೀಡದೆ 5-0 ಅಂತರದಿಂದ ಸೋಲಿಸಿ ಸ್ವರ್ಣ ಪಡೆದಿದ್ದಾರೆ.

ಈ ಟೂರ್ನಿಯಲ್ಲಿ ವಿವಿಧ ವಿಭಾಗಗಳ ಪೈನಲ್ ಪಂದ್ಯದಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಪಡೆದುಕೊಂಡಿದ್ದಾರೆ.

ಭಾರತದ ಹಸಮುದ್ದೀನ್ 56ಕೆ.ಜಿ ವಿಭಾಗದಲ್ಲಿ ಎದುರಾಳಿಯಾಗಿದ್ದ ರಷ್ಯಾದ ಮೊಕಾಮ್ಮದ್ ಶೆಕೊವ್ ವಿರುದ್ಧ 1-4 ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರೆ. ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದು ಅರ್ಜುನ ಪ್ರಶಸ್ತಿಗೆ ಭಾಜೀನರಾಗಿದ್ದ ಮನ್ದೀಪ್ ಜಂಗ್ರಾ 69ಕೆ.ಜಿ ವಿಭಾಗದ ಪಂದ್ಯದಲ್ಲಿ ರಷ್ಯಾದ ವಾಡಿಮ್ ಮುಸೇವ್ ವಿರುದ್ಧ ಸೋತಿದ್ದಾರೆ. 91 ಕೆ.ಜಿ. ವಿಭಾಗದಲ್ಲಿ ನ್ಯೂಜಿಲ್ಯಾಂಡ್ನ ಡೇವಿಡ್ ವಿರುದ್ಧ ಸಂಜೀತ್ ಸೋಲನುಭವಿಸಿದ್ದಾರೆ.