ಕೊರೋನಾ ಸೋಂಕಿನ ವಿರುದ್ದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರ ಪರ 'ಕ್ರಿಕೆಟ್ ದೇವರು' ಬ್ಯಾಟಿಂಗ್..! 

ಕೊರೋನಾ ಸೋಂಕಿನ ವಿರುದ್ದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರ ಪರ 'ಕ್ರಿಕೆಟ್ ದೇವರು' ಬ್ಯಾಟಿಂಗ್..! 

ಜಾಗತಿಕ ಪಿಡುಗಾಗಿರುವ ಕೊರೋನಾ ಸೋಂಕಿನ‌ವಿರುದ್ದ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವವರಿಗೆ ಬೆಂಬಲ‌ ನೀಡುವ ಸಲುವಾಗಿ ದೇಶದ ಜನರು ಒಂದಾಗಿ ಕೈ ಜೋಡಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ನಾವೆಲ್ಲರೂ ಮನೆಯಲ್ಲಿದ್ದರೂ ಕೂಡ ಅನೇಕರು ನಮಗೋಸ್ಕರ ನಿಸ್ವಾರ್ಥವಾಗಿ ಕರ್ತವ್ಯ ನಿವರ್ಹಿಸುತ್ತಿದ್ದಾರೆ. ನಮಗಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಸಚಿನ್ ಮಾತ್ರವಲ್ಲದೆ ಕುಸ್ತಿ ಲೋಕದ ಧ್ರುವ ತಾರೆ ಭಜರಂಗಿ‌ ಪುನಿಯಾ, ಭಾರತ ತಂಡದ ಮಾಜಿ ಸ್ಪಿನ್ ಮಾಂತ್ರಿಕ ವೀರ ಕನ್ನಡಿಗ ಅನಿಲ್‌ ಕುಂಬ್ಲೆ, ಸ್ಟಾರ್ ವೇಟ್ ಲೀಫ್ಟರ್, ಮೀರಾಬಾಯಿ ಚಾನು ಸೇರಿದಂತೆ ಅನೇಕ ದಿಗ್ಗಜ ಆಟಗಾರರು ಕೂಡ ಮಾರಣಾಂತಿಕ ಕೊರೋನಾ ಸೋಂಕಿನ ವಿರುದ್ದ ಶತಾಯ ಗತಾಯ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಜಾಗತಿಕ ಪಿಡುಗಾಗಿರುವ ಕೊರೋನಾ ಸೋಂಕಿನ ಕರಿನೆರಳು ಕ್ರೀಡಾ ಲೋಕದ ಮೇಲೂ ಬಿದ್ದಿದ್ದೆ ಮುಂಜಾಗ್ರತ ಕ್ರಮವಾಗಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ಪ್ರತಿಷ್ಟಿತ ಟೂರ್ನಮೆಂಟ್ ಗಳನ್ನು ಈಗಾಗಲೇ ಮುಂದೂಡಲಾಗಿದೆ.