ತಾಪಮಾನ ಏರಿಕೆ : ಪಕ್ಷಿಗಳ ಬೆಳವಣಿಗೆಯೂ ಕುಂಠಿತ

ಜಾಗತಿಕ ತಾಪಮಾನದಿಂದ ಪಕ್ಷಿ ಸಂಕುಲಕ್ಕೆ ತೊಡಕಾಗುತ್ತಿದೆ ಎಂದು ಉತ್ತರ ಅಮೆರಿಕಾದ ಪಕ್ಷಿ ಸಂಗ್ರಹಾಲಯದ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗೂ ಅನೇಕ ಪ್ರಭೇದದ ಪಕ್ಷಿಗಳ ದೈಹಿಕ ಬೆಳವಣಿಗೆ ಕುಠಿಂತವಾಗುತ್ತಿದೆ, ಇದಕ್ಕೆ ಹೆಚ್ಚುತ್ತಿರುವ ತಾಪಮಾನವೇ ಕಾರಣ ಎಂದು ಸ್ಪಷ್ಟ ಪಡಿಸಿದ್ದಾರೆ.

ತಾಪಮಾನ ಏರಿಕೆ : ಪಕ್ಷಿಗಳ ಬೆಳವಣಿಗೆಯೂ ಕುಂಠಿತ

ಜಾಗತಿಕ ತಾಪಮಾನದಿಂದ ಪಕ್ಷಿಗಳ ಬೆಳವಣಿಗೆಯಲ್ಲೂ ಭಾರೀ ದುಷ್ಪರಿಣಾಮ ಬೀರಿದೆ ಎಂದು ಸಂಗ್ರಹಾಲಯದ ತಜ್ಞರು ಸಾಬೀತು ಪಡಿಸಿದ್ದಾರೆ.

ಉತ್ತರ ಅಮೆರಿಕಾದ ಪಕ್ಷಿ ಸಂಗ್ರಹಾಲಯದಲ್ಲಿ ಅಲ್ಲಿ ನಾನಾ ಕಾರಣದಿಂದ ಸತ್ತ 52 ಕ್ಕೂ ಹೆಚ್ಚು ಪ್ರಬೇಧದ 70 ಸಾವಿರಕ್ಕೂ ಹೆಚ್ಚಿನ ಪಕ್ಷಿಗಳನ್ನು ಸಂಗ್ರಹಿಸಲಾಗಿದೆ. ಈ ಪ್ರದೇಶದ ವಿಶೇಷವೆಂದರೆ ರಾತ್ರಿ ವೇಳೆ ಬೆಳಕು ಬಳಸುವ ಪ್ರಮಾಣವನ್ನು ಅತ್ಯಂತ ಕಡಿಮೆಯಾಗಿಸುವ ಮೂಲಕ ಪಕ್ಷಿಗಳ ಸಂತತಿಗೆ ಕೆಡುಕಾಗದಂತೆ ಮಾಡಲಾಗಿದೆ.

ಈ ಸಂಗ್ರಹಾಲಯದವರು 40 ವರ್ಷಗಳಿಂದ ಪಕ್ಷಿಗಳ ಅಧ್ಯಯನ ಮಾಡಿದ್ದಾರೆ. ಜಾಗತಿಕ ತಾಪಮಾನದಿಂದಾಗಿ ಅನೇಕ ಪಕ್ಷಿಗಳು ಶೇ 2,6 ರಷ್ಟು ತೂಕ ಕಳೆದುಕೊಂಡಿವೆ, ಕಾಲುಗಳ ಉದ್ದ ಶೇ 2.4 ರಷ್ಟು ಚಿಕ್ಕದಾಗಿದೆ, ರೆಕ್ಕೆಗಳು ಶೇ. 1.3 ರಷ್ಟು ಅಲ್ಪಪ್ರಮಾಣದಲ್ಲಿ ದೊಡ್ಡದಾಗಿವೆ ಎಂಬ ಕುತೂಹಲಕಾರಿ ಅಂಶಗಳನ್ನು ಬಹಿರಂಗ ಪಡಿಸಿದ್ದಾರೆ.

ಶೇ. 29 ರಷ್ಟು ಪಕ್ಷಿಗಳೇ ಇಲ್ಲದಂತಾಗಿದ್ದು, ತಣ್ಣನೆಯ ಹವಾಮಾನದಲ್ಲಿ ದೇಹದ ತೂಕದಲ್ಲಿ ಹೆಚ್ಚಳವಾಗಿರುವುದನ್ನೂ ಗುರುತಿಸಲಾಗಿದೆ,.ತಾಪಮಾನ ಏರಿಕೆಗೆ ಲಗಾಮು ಹಾಕದಿದ್ದರೆ, ಪಕ್ಷಿ ಸಂಕುಲವೂ ಅವನತಿ ಹಾದಿ ಹಿಡಿಯುತ್ತವೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಸ್ಥಳೀಯವಾಗಿ ನೋಡುವುದಾದರೂ, ಮನೆ ಸ್ನೇಹಿಯಾಗಿದ್ದ ಗುಬ್ಬಚ್ಚಿಗಳ ಸಂತತಿಯೂ ಇಲ್ಲ, ಮೊದಲಿದಷ್ಟು ಪ್ರಮಾಣದಲ್ಲಿ ಕಾಗೆಗಳೂ ಇಲ್ಲ. ಆಧುನಿಕ ತಂತ್ರಾಂಶಗಳ ಬಳಕೆಯಿಂದಾಗಿ ಪಕ್ಷಿ ಸಂಕುಲವೇ ನಶಿಸಿ ಹೋಗುತ್ತಿರುವುದು ಕಣ್ಣ ಮುಂದೆಯೇ ಇರುವಾಗ, ಉತ್ತರ ಅಮೆರಿಕಾದ ಪಕ್ಷಿ ತಜ್ಞರು ತಾಪಮಾನದ ಪರಿಣಾಮವಾಗಿ ಪಕ್ಷಿ ಸಂಕುಲದ ಗಾತ್ರ, ಉದ್ದಗಳೇ ಕುಂದುತ್ತಿರುವುದನ್ನು ಬಯಲು ಮಾಡಿದ್ದಾರೆ.