ದೀಪಾವಳಿ ಉಡುಗೊರೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.5ರಷ್ಟು ಹೆಚ್ಚಳ

ದೀಪಾವಳಿ ಉಡುಗೊರೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.5ರಷ್ಟು ಹೆಚ್ಚಳ

ದೆಹಲಿ: ದೀಪಾವಳಿ ಉಡುಗೊರೆಯಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇಕಡಾ 5ರಷ್ಟು ಹೆಚ್ಚಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಎಂದು ಹೇಳಿದ್ದಾರೆ. ಸುಮಾರು 50 ಲಕ್ಷ ಸರ್ಕಾರಿ ನೌಕರರು ಹೆಚ್ಚಳದ ಪ್ರಯೋಜನ ಪಡೆಯಲಿದ್ದಾರೆ.

ಇಂದು ಬೆಳಿಗ್ಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಅನುಮೋದನೆ ನೀಡಲಾಯಿತು. ತುಟ್ಟಿಭತ್ಯೆಯನ್ನು ಶೇಕಡಾ 12 ರಿಂದ 17 ಕ್ಕೆ ಏರಿಸಲಾಗುವುದು. ಈ ಕ್ರಮದಿಂದ ಸರ್ಕಾರಕ್ಕೆ ರೂ. 16,000 ಕೋಟಿ ರೂ.ಹೊರೆಯಾಗಲಿದೆ. ಸುಮಾರು 62 ಲಕ್ಷ ಪಿಂಚಣಿದಾರರು ಸಹ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದು.