ಧೋನಿ ಇಂಗ್ಲೆಂಡ್ ನಲ್ಲಿರುವುದು ಮಹಾಭಾರತಕ್ಕಾಗಿ ಅಲ್ಲ: ಪಾಕ್ ಸಚಿವ ವ್ಯಂಗ್ಯ

ಧೋನಿ ಇಂಗ್ಲೆಂಡ್ ನಲ್ಲಿರುವುದು ಮಹಾಭಾರತಕ್ಕಾಗಿ ಅಲ್ಲ: ಪಾಕ್ ಸಚಿವ ವ್ಯಂಗ್ಯ

ದೆಹಲಿ: ವಿಶ್ವಕಪ್‌ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್‍ ಧೋನಿ ಧರಿಸಿದ್ದ ಕೈಗವಸುಗಳು ಇದೀಗಾ ಹೊಸ ವಿವಾದವನ್ನು ಸೃಷ್ಟಿಸಿದೆ. ಧೋನಿ ಕೈಗವಸುಗಳ ಬಗ್ಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಫವಾದ್ ಹುಸೇನ್ ಚೌಧರಿ ವ್ಯಂಗ್ಯ ಮಾಡಿದ್ದಾರೆ.

ಈ ಕುರಿತು ಟ್ವೀಟ್‍ ಮಾಡಿರುವ ಫವಾದ್ ಹುಸೇನ್ ಚೌಧರಿ, 'ಧೋನಿ ಇಂಗ್ಲೆಂಡ್‌ನಲ್ಲಿರುವುದು ಕ್ರಿಕೆಟ್ ಆಡುವುದಕ್ಕಾಗಿ ಮಹಾಭಾರತಕ್ಕಾಗಿ ಅಲ್ಲ. ಭಾರತೀಯ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ. ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿದೆ. ಅಂತವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು ಎಂದು  ಟ್ವೀಟ್‍ ಮಾಡಿದ್ದಾರೆ.

Dhoni is in England to play cricket not to for MahaBharta , what an idiotic debate in Indian Media,a section of Indian media is so obsessed with War they should be sent to Syria, Afghanistan Or Rawanda as mercenaries.... #Idiots https://t.co/WIcPdK5V8g

— Ch Fawad Hussain (@fawadchaudhry) June 6, 2019

ವಿಶ್ವಕಪ್‌ನ ಮೊದಲ ಪಂದ್ಯದ ವೇಳೆ ಧರಿಸಿದ್ದ ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ  'ಕಠಾರಿ ಮುದ್ರೆ-ಬಲಿದಾನದ ಪಟ್ಟಿ’ ಚಿಹ್ನೆಯಿರುವುದು ಕಂಡು ಬಂದಿತ್ತು. ಮೂಲಕ ಧೋನಿ ಸೇನೆ ಬಗ್ಗೆ ತಮಗಿರುವ ಗೌರವವನ್ನು ಪ್ರದರ್ಶಿಸಿದ್ದರು. ಆದರೆ ಚಿಹ್ನೆ ಪಾಕ್ ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಿರುವಾಗಲೇ ಐಸಿಸಿ ಸೇನಾ ಚಿಹ್ನೆಯನ್ನು ತೆಗೆಯುವಂತೆ ಧೋನಿಗೆ ತಿಳಿಸುವಂತೆ ಬಿಸಿಸಿಐಗೆ ಸೂಚಿಸಿದೆ.