ಕಳಪೆ ಮಟ್ಟದ ಹವಾಮಾನಕ್ಕೆ ದೆಹಲಿ ತತ್ತರ

ಕಳಪೆ ಮಟ್ಟದ ಹವಾಮಾನಕ್ಕೆ ದೆಹಲಿ ತತ್ತರ

ನವದೆಹಲಿ: ದೆಹಲಿಯ ವಾತಾವಾರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ದೆಹಲಿ ಮಾಲಿನ್ಯದಿಂದ ತತ್ತರಿಸಿ ಹೋಗಿದೆ. ಮಂಗಳವಾರ ಬೆಳಗ್ಗೆಯೂ  ಮೋಡ ಕವಿದ ವಾತಾವರಣವಿತ್ತು. 10.5 ಡಿಗ್ರಿ ಸೆಲ್ಸಿಯಸ್‍ನಿಂದಾಗಿ ಇಡೀ ದೆಹಲಿ ನಡುಗುತ್ತಿದೆ.

ಬೆಳಗ್ಗೆ 8.30ರ ಹೊತ್ತಿಗೆ ಆದ್ರತೆಯ ಮಟ್ಟವು ಶೇ.95ರಷ್ಟಿತ್ತು. ದಿನವಿಡೀ ಇಂದು ಮೋಡ ಕವಿದ ವಾತಾವರಣವಿರಲಿದೆ ಹಾಗೂ ಗರಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ವಾಯು ಗುಣಮಟ್ಟದ ಸೂಚ್ಯಂಕ(ಎಕ್ಯೂಐ) ಬೆಳಗ್ಗೆ 9.37ಕ್ಕೆ 310 ರಷ್ಟು ದಾಖಲಾಗಿದ್ದು, ಇದು ಇದು ಅತ್ಯಂತ ಕಳಪೆ ಮಟ್ಟದ ಹವಾಮಾನ ಎಂದು ತಿಳಿಸಲಾಗಿದೆ. 0-50 ನಡುವಿನ ಎಕ್ಯೂಐ ಅನ್ನು ಒಳ್ಳೆಯದು, 51-100 ಎಕ್ಯೂಐ ತೃಪ್ತಿದಾಯಕ, 1001-200 ಎಕ್ಯೂಐ ಮಧ್ಯಮ, 201-300 ಎಕ್ಯೂಐ ಕಳಪೆ, 301-400 ಅತೀ ಕಳಪೆ ಹಾಗೂ 4001 ರಿಂದ 500 ಎಕ್ಯೂಐ ಅನ್ನು ತೀವ್ರ ಕುಸಿತ ಎಂದು ಪರಿಗಣಿಸಲಾಗುತ್ತದೆ