ದೆಹಲಿಯಲ್ಲಿ ಬಿರುಸುಗೊಂಡ ರಾಜಕೀಯ; ಆಮ್‌ ಆದ್ಮಿ ಕಟ್ಟಿಹಾಕಲು ಪ್ರತಿಪಕ್ಷಗಳ ಕಸರತ್ತು

ದೆಹಲಿಯಲ್ಲಿ ಬಿರುಸುಗೊಂಡ ರಾಜಕೀಯ; ಆಮ್‌ ಆದ್ಮಿ ಕಟ್ಟಿಹಾಕಲು ಪ್ರತಿಪಕ್ಷಗಳ ಕಸರತ್ತು

ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿವೆ. ಜನಪ್ರಿಯ ಕಾರ್ಯಕ್ರಮ, ಯೋಜನೆಗಳನ್ನು ರಚನಾತ್ಮಕವಾಗಿ ಅನುಷ್ಠಾನಗೊಳಿಸಿರುವ ಮುಖ್ಯಮಂತ್ರಿ ಅರವಿಂದ್ಕೇಜ್ರಿವಾಲ್ನೇತೃತ್ವದ ಆಮ್ಆದ್ಮಿ ಪಕ್ಷದ ಓಟಕ್ಕೆ ಕಡಿವಾಣ ಹಾಕಲು ಬಿಜೆಪಿ ಹಾಗೂ ಕಾಂಗ್ರೆಸ್ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿವೆ.
ಆಮ್ಆದ್ಮಿ ಪಕ್ಷವು ಕೂಡ ಬಿಜೆಪಿ ಹಾಗೂ ಕಾಂಗ್ರೆಸ್ಪಕ್ಷ ಅಧಿಕಾರ ಗದ್ದುಗೆ ಬಳಿ ಸುಳಿಯದಂತೆ ಎಲ್ಲಾ ಬಗೆಯ ಕಸರತ್ತುಗಳನ್ನು ಮುಂದುವರೆಸಿವೆ. ದೆಹಲಿಯಲ್ಲಿ ಒಂದು ಬಾರಿ ಬಿಜೆಪಿ, ಮೂರು ಬಾರಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗಾಗಲೇ ಎರಡು ಬಾರಿ ಗೆಲುವು ಸಾಧಿಸಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ  ಮೂರನೇ ಬಾರಿ ಸರಕಾರ ರಚಿಸಲು ಸಜ್ಜಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭೆ ಇತಿಹಾಸದತ್ತ ಕಿರು ನೋಟವನ್ನು ಇಲ್ಲಿ ಕೊಡಲಾಗಿದೆ.
ದೆಹಲಿ ವಿಧಾನಸಭೆಯ ಇತಿಹಾಸ
1952ರಲ್ಲಿ ದೆಹಲಿಯ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ದೆಹಲಿಯ ಮೊದಲ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಮಂತ್ರಿ ಮಂಡಳ ಆರಂಭದಲ್ಲಿ ದೆಹಲಿಯ ಮುಖ್ಯ ಆಯುಕ್ತರಿಗೆ ಸಲಹೆಯನ್ನಷ್ಟೇ ನೀಡುತ್ತಿತ್ತು.  1956 ರಾಜ್ಯಗಳ ಪುನರ್ವಿಂಗಡಣೆ ಕಾಯ್ದೆಯ ತಿದ್ದುಪಡಿ ಅನ್ವಯ ದೆಹಲಿ ವಿಧಾನಸಭೆ ವಿಸರ್ಜನೆಗೊಂಡಿತು. ಇದಾದ ನಂತರ ದೆಹಲಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಯಿತು. ಕ್ರಮೇಣ ದೆಹಲಿಯ ಶಾಸಕಾಂಗ ಹಾಗೂ ಸಚಿವರ ಪರಿಷತ್ಕೂಡ ರದ್ದಾಯಿತು.
1957
ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಕಾಯ್ದೆಯು, ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ರಚನೆಗೆ ಕಾರಣವಾಯಿತು. ಅಲ್ಲದೆ ದೆಹಲಿ ಆಡಳಿತ ಕಾಯ್ದೆ 1996 ಪ್ರಕಾರ ದೆಹಲಿ ವಿಧಾನಸಭೆಯನ್ನು ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ನೊಂದಿಗೆ ವಿಲೀನಗೊಳಿಸಲಾಯಿತು. 56 ಚುನಾಯಿತ ಹಾಗೂ 5 ನಾಮ ನಿರ್ದೇಶಿತ ಸದಸ್ಯರು ಇದರಲ್ಲಿದ್ದರು. ಮಂಡಳಿ ಕೇವಲ ಸಲಹಾ ಪಾತ್ರವನ್ನು ಮಾತ್ರ ನಿರ್ವಹಿಸಬೇಕಿತ್ತು. ಇದಕ್ಕೆ ಯವುದೇ ಶಾಸಕಾಂಗದ ಅಧಿಕಾರ ಇರಲಿಲ್ಲ. 1993ರಲ್ಲಿ 70 ಸದಸ್ಯರಿಂದ ವಿಧಾನಸಭೆ ಪುನರ್ರಚನೆಗೊಂಡಿತು.
ಮೊದಲು ಸರ್ಕಾರ ರಚಿಸಿದ್ದೇ ಬಿಜೆಪಿ
ದೆಹಲಿಯ ಪ್ರಸಿದ್ಧ ನಾಯಕ ಮದನ್ಲಾಲ್ ಖುರಾನಾ ಅವರು ಬಿಜೆಪಿಯನ್ನು ಮುನ್ನಡೆಸಿದ್ದರು. ಇವರ ನೇತೃತ್ವದಲ್ಲಿ 49 ಸೀಟುಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಅರ್ಧದಷ್ಟು (47.82%) ಮತಗಳನ್ನು ಗಳಿಸಿತ್ತು. ಹಾಗೆಯೇ ಕಾಂಗ್ರೆಸ್ 14 ಸೀಟುಗಳನ್ನು ಪಡೆಯುವ ಮೂಲಕ ಶೇ.34.48ರಷ್ಟು ಮತಗಳನ್ನು ಗಳಿಸಿತ್ತು. ಇನ್ನು ಜನತಾದಳ 4 ಸೀಟುಗಳು ಅಂದರೆ ಶೇ.12.65ರಷ್ಟು ಮತಗಳನ್ನು ಪಡೆದಿತ್ತು.
ಖುರಾನಾ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಕೆಲವೇ ದಿನಗಳಲ್ಲಿ  ಜೈನ್ ಹವಾಲಾ ಡೈರಿ ಪ್ರಕರಣದಲ್ಲಿ ಇವರ ಹೆಸರು ಎಲ್.ಕೆ.ಅಡ್ವಾನಿಯೊಂದಿಗೆ ತಳಕು ಹಾಕಿಕೊಂಡಿತು. ಇದರಿಂದಾಗಿಯೇ 1996ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದರು. ಅಂದಿನ ದೆಹಲಿಯ ಶಿಕ್ಷಣ ಸಚಿವ ಜಾಟ್ ನಾಯಕ ಸಾಹಬ್ ಸಿಂಗ್ ವರ್ಮಾ ಅವರಿಗೆ ಮುಖ್ಯಮಂತ್ರಿಯನ್ನಾಗಿಸಲಾಯಿತು. 1998 ಚುನಾವಣೆಗೂ ಮುಂಚೆಯೆ ಈರುಳ್ಳಿ ಬೆಲೆಯ ಏರಿಕೆ ಹಿನ್ನೆಲೆಯಲ್ಲಿ ವರ್ಮಾರನ್ನು ಕೆಳಗಿಳಿಸಿದ ಬಿಜೆಪಿ  ಸುಷ್ಮಾ ಸ್ವರಾಜ್ ಅವರನ್ನು  ಮುಖ್ಯಮಂತ್ರಿಯನ್ನಾಗಿ ನೇಮಿಸಿತು.
ಕಾಂಗ್ರೆಸ್ ಅಧಿಕಾರ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, 1998 ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯ ಯಾವುದೇ ಹೊಂದಾಣಿಕೆ ಇರಲಿಲ್ಲ. ಕಾಂಗ್ರೆಸ್ 70 ಅಭ್ಯರ್ಥಿಗಳನ್ನು ಕ್ಷೇತ್ರವಾರು ನಿಲ್ಲಿಸಿ 52 ಸೀಟುಗಳನ್ನು ಶೇ.47% ಮತಗಳನ್ನು ಪಡೆದು ಗೆಲುವು ಸಾಧಿಸಿತ್ತು. ಆದರೆ ಬಿಜೆಪಿ ತನ್ನ ಸ್ಥಾನಗಳನ್ನು 15ಕ್ಕೆ ಇಳಿಸಿಕೊಂಡಿದ್ದು ಮಾತ್ರವಲ್ಲ ಶೇ.34.02%ರಷ್ಟು ಮತಗಳಲ್ಲಿಯೂ ಇಳಿಕೆಯನ್ನು ಕಂಡಿತ್ತು. ರಾಜೀವ್ ಗಾಂಧಿ ಸಂಪುಟದಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಶಂಕರ್ ದೀಕ್ಷಿತ್ ಅವರ ಸೊಸೆ ಶೀಲಾ ದೀಕ್ಷಿತ್ ಅವರನ್ನು  ಮುಖ್ಯಮಂತ್ರಿಯನ್ನಾಗಿಸಿತು.
ದೀಕ್ಷಿತ್ ಅವರು ಉತ್ತಮವಾಗಿ ಪಕ್ಷವನ್ನು ಮುನ್ನಡೆಸಿದರು.  ಅವರ ಮೊದಲ ಅಧಿಕಾರದ ಅವಧಿಯಲ್ಲಿ ಮೇಲು ಸೇತುವೆಗಳು, ಹೊಸ ಬಸ್ ಶೆಲ್ಟರ್ನಿರ್ಮಿಸುವುದರ ಮೂಲಕ ಮೂಲ ಸೌಕರ್ಯದ ಅಭಿವೃದ್ಧಿಯತ್ತ ಗಮನ ಹರಿಸಿದರು. ಹಾಗೆಯೇ ದೆಹಲಿಯ ಸಾರ್ವಜನಿಕ ರಸ್ತೆಯನ್ನು ಸಂಪೂರ್ಣವಾಗಿ ಸಿಎನ್ಜಿ ಸಾರಿಗೆ ರಸ್ತೆಯಾಗಿ ಪರಿವರ್ತಿಸಿದರು. ವಿದ್ಯುತ್ ಸೇವೆಯ ಖಾಸಗೀಕರಣ, ದೆಹಲಿಯಲ್ಲಿ ಮೆಟ್ರೋ ಕಾರ್ಯರೂಪಕ್ಕೆ ತಂದ ಕಾರಣ ಮುಂದಿನ ಚುನಾವಣೆಯಲ್ಲಿಯೂ ಜನರ ವಿಶ್ವಾಸವನ್ನು ಗಳಿಸಿದರು.
2003
ರಲ್ಲೂ ಕಾಂಗ್ರೆಸ್ ಮೇಲುಗೈ
2003 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬಂದಿತು. ಆದರೆ 47 ಸ್ಥಾನಕ್ಕೆ ಅಂದರೆ ಶೇ.48.13%ರಷ್ಟು ಮತಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ದೀಕ್ಷಿತ್ ಅವರನ್ನು ಹಿಂದಕ್ಕೆ ಅಟ್ಟಲು ಬಿಜೆಪಿಯಲ್ಲಿ ಅಂತಹ ನಾಯಕರಿರಲಿಲ್ಲ. ಹಾಗಾಗಿ ಬೆಜೆಪಿ ತನ್ನ 20 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಸೋತಿದ್ದರಿಂದ ದೆಹಲಿಯಲ್ಲಿ ಪಕ್ಷವು ಇನ್ನಷ್ಟು ನಿರಾಶೆಗೆ ಒಳಗಾಯಿತು. ಅವಿರೋಧವಾಗಿ ದೀಕ್ಷಿತ್ ಇನ್ನೊಂದು ಚುನಾವಣೆಯತ್ತ ಹೆಜ್ಜೆ ಹಾಕಿದರು.
2008
ರಲ್ಲಿ ಬಿಜೆಪಿ ಭವಿಷ್ಯಕ್ಕೆ ಹಾನಿ
2008ರಲ್ಲಿ ಪ್ರತಿಪಕ್ಷದ ನಾಯಕ ಹರ್ಷವರ್ಧನ್ ನೇತೃತ್ವದ ಬಿಜೆಪಿ ಸರ್ಕಾರವು ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಬಹುದೆಂದು ಭಾವಿಸಿದ್ದರು. ಹಾಗೆಯೇ ಕೇಸರಿ ಪಕ್ಷವು ಚುನಾವಣೆಗೂ ಮುನ್ನ ವಿಜಯ್ ಕುಮಾರ್ ಮಲ್ಹೋತ್ರಾ ಅವರನ್ನು ಸಿಎಂ ಕುರ್ಚಿ ಮೇಲೆ ಕೂರಿಸಲು ಮುಂದಾಯಿತು. ಆದರೆ ಇದು ಬಿಜೆಪಿಯಲ್ಲಿನ ಅನೇಕ ನಾಯಕರು ಚುನಾವಣೆಯಲ್ಲಿ ಆಸಕ್ತಿ ಕಳೆದುಕೊಳ್ಳಲು ಕಾರಣವಾಯಿತು. ಬೆಳವಣಿಗೆ ಕಾಂಗ್ರೆಸ್ಮತ್ತೊಂದು ಗೆಲುವು ತಂದುಕೊಟ್ಟಿತು.
ಆದರೂ ಕಾಂಗ್ರೆಸ್ 43 ಸ್ಥಾನಗಳನ್ನು ಗೆದ್ದು, ಶೇ.40.31%ರಷ್ಟು ಮತಗಳನ್ನು ಪಡೆದು ಕಳೆದ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಕಡಿಮೆ ಮತಗಳಿಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಹಾಗೆಯೇ ಬಿಜೆಪಿ ತನ್ನ ಸ್ಥಾನಗಳನ್ನು 23ಕ್ಕೆ ಏರಿಸಿಕೊಂಡು, ಶೇ.36.34%ರಷ್ಟು ಮತಗಳನ್ನು ಪಡೆಯಿತು. ಬಿಎಸ್ಪಿ ಪಕ್ಷವು 2 ಸ್ಥಾನಗಳನ್ನು ಗಳಿಸಿ, ಶೇ.14.05%ರಷ್ಟು ಗಮನಾರ್ಹ ಮತಗಳನ್ನು ಪಡೆದುಕೊಂಡಿತು.
ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆ
ಕಾಮನ್ವೆಲ್ತ್ಕ್ರೀಡಾಕೂಟದಲ್ಲಿನ ಭ್ರಷ್ಟಾಚಾರ ಹಾಗೂ ದುರಹಂಕಾರವೇ ಕಾಂಗ್ರೆಸ್ ಪಕ್ಷದ ಅವನತಿಗೆ ಕಾರಣವಾಗತೊಡಗಿತು. ಕಾಂಗ್ರೆಸ್ ಪಕ್ಷವು ಮೂರನೇ ಬಾರಿ ಚುನಾವಣೆಗೆ ಪ್ರವೇಶಿಸುತ್ತಿದ್ದಂತೆ ಪಕ್ಷದಲ್ಲಿ ದುರಹಂಕಾರ ಮನೆ ಮಾಡತೊಡಗಿತು. 2010 ಕಾಮನ್ವೆಲ್ತ್ ಕ್ರೀಡಾಕೂಟದ ಮೂಲಸೌಕರ್ಯ ಅಭಿವೃದ್ದಿಗಾಗಿ ಸಾಕಷ್ಟು ಖರ್ಚುಗಳನ್ನು ಮಾಡಬೇಕಾಗಿತ್ತು, ಹಾಗಾಗಿ ವಿವಿಧ ವಸ್ತುಗಳನ್ನು ಖರೀದಿಸಿ ಅವುಗಳ ಸುಳ್ಳು ಲೆಕ್ಕಾಚಾರವನ್ನು ತೋರಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿತು.
ದೀಕ್ಷಿತ್ ಸರ್ಕಾರಕ್ಕೆ ಹೆಚ್ಚಿದ ಜನಪ್ರಿಯತೆ
ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಭಾರತೀಯ ಅಭಿಯಾನವು ಜನರ ಗಮನ ಸೆಳೆಯಿತು. ಅಭಿಯಾನವನ್ನು ನಾಗರಿಕರು ಮುನ್ನಡೆಸಿದರೂ, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಸಂಘ(ಆರ್ಎಸ್ಎಸ್) ಬೆಂಬಲದಿಂದ ಮಾಡಲಾಗುತ್ತಿದೆ ಎಂದು ಹಲವರು ಅನುಮಾನಿಸಿದ್ದರು. ಆಂದೋಲನವು ಅಂದಿನ ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟಾಚಾರ ಸರಕಾರ ಎಂದು ಚಿತ್ರಿಸಿತು. ಅಷ್ಟೇ ಅಲ್ಲದೆ, ಆಮ್ ಆದ್ಮಿ ಪಕ್ಷದ ಹುಟ್ಟಿಗೂ ಕಾರಣವಾಗಿ ಅರವಿಂದ್ ಕೇಜ್ರಿವಾಲ್ ರಾಜಕೀಯಕ್ಕೆ ಬರಲು ದಾರಿ ಮಾಡಿಕೊಟ್ಟಂತಾಯಿತು.
ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ
2013 ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸಹ ರಾಜಕೀಯವನ್ನು ಪ್ರವೇಶಿಸಿ, ಬಹುಪಾಲು ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದುಕೊಂಡು ಕಾಂಗ್ರೆಸ್ ಅನ್ನು ಹಿಂದಿಕ್ಕಿತು. ಬಿಜೆಪಿ ಪಕ್ಷವು 31 ಸ್ಥಾನಗಳನ್ನು ಗಳಿಸಿ ಶೇ.33.07%ರಷ್ಟು ಮತಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಹಾಗೂ ಎಎಪಿ ಪಕ್ಷವು 28 ಸ್ಥಾನಗಳನ್ನು ಪಡೆದು ಶೇ.29.49%ರಷ್ಟು ಮತಗಳನ್ನು ಪಡೆದುಕೊಂಡಿತು. ಇನ್ನು ಕಾಂಗ್ರೆಸ್ ಕೇವಲ ಎಂಟು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು, ಶೇ.24.55%ರಷ್ಟು ಮತಗಳನ್ನು ಪಡೆದುಕೊಳ್ಳಲು ಸಫಲವಾಯಿತು. ಹಾಗೂ ಪರಿಶಿಷ್ಟ ಜಾತಿ, ಸಿಖ್ ಮತ್ತು ಮುಸ್ಲಿಮರ ಮಧ್ಯ ಮತಗಳು ಹಂಚಿಹೋಯಿತು. ಚುನಾಯಿತಗೊಂಡ ಶಾಸಕರಲ್ಲಿ ನಾಲ್ವರು ಮುಸ್ಲಿಮರು. ಇವರು ತಮ್ಮ ಕ್ಷೇತ್ರದಲ್ಲಿ ಅಷ್ಟೇ ಪ್ರಾಬಲ್ಯವನ್ನು ಸಾಧಿಸಿದ್ದವರು. ಉಳಿದ ನಾಲ್ವರು ಶಾಸಕರಲ್ಲಿ ಇಬ್ಬರು ಸಿಖ್ ಧರ್ಮಿಯರಾದರೇ, ಇನ್ನಿಬ್ಬರು ಪರಿಶಿಷ್ಟ ವರ್ಗದವರಾಗಿದ್ದರು.
ಎಲ್ಲಾ ರಾಜಕೀಯ ಏರಿಳಿತವನ್ನು ಕಂಡ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್ ಮುನ್ನಡೆಸುತ್ತಿದ್ದ ಎಎಪಿಗೆ ಬಾಹ್ಯ ಬೆಂಬಲವನ್ನು ನೀಡಲು ನಿರ್ಧರಿಸಿತು. ಹಾಗೆಯೇ ಮೊದಲಬಾರಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು.
ಅಧಿಕಾರ ತ್ಯಜಿಸಿದ ಕೇಜ್ರಿವಾಲ್
ಕೇಂದ್ರವು ಲೋಕಪಾಲ್ಮಸೂದೆಯನ್ನು ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದ ಕೇಜ್ರಿವಾಲ್ ಹಠಾತ್ತನೆ ಅಧಿಕಾರವನ್ನು ತ್ಯಜಿಸಿದರು. ಅಷ್ಟೇ ಅಲ್ಲದೆ 2014 ಲೋಕಸಭಾ  ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದ ಕೇಜ್ರಿವಾಲ್ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ವಾರಣಾಸಿಯಲ್ಲಿ ಎದುರಿಸಲು ನಿರ್ಧರಿಸಿದ್ದರು.
ಎಎಪಿ ಸಾರ್ವತ್ರಿಕ ಚುನಾವನೆಯಲ್ಲಿ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಪಂಜಾಬ್ನಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದರೂ, ದೆಹಲಿಯಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ಖಾತೆ ತೆರೆಯಲು ವಿಫಲವಾಯಿತು. ಮೋದಿಯ ಅಲೆ ದೇಶವ್ಯಾಪಿ ಹಬ್ಬಿಕೊಂಡಿದ್ದರಿಂದ ದೆಹಲಿ ಏಳೂ ಸ್ಥಾನಗಳನ್ನು ಗೆದ್ದು ಶೇ.46.40%ರಷ್ಟು ಮತಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಎಎಪಿ ಶೇ.32.90%ರಷ್ಟು ಹಾಗೂ ಕಾಂಗ್ರೆಸ್ ಶೇ%. 15.10% ರಷ್ಟು ಮತಗಳಿಗೆ ಸೀಮಿತವಾಯಿತು.
2015
ಚುನಾವಣೆಯಲ್ಲಿ ದಾಖಲೆ ಜಯ ಬರೆದ ಎಎಪಿ
2015 ವಿಧಾನಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿಗೆ ಟಕ್ಕರ್ ನೀಡುವ ಏಕೈಕ ಶಕ್ತಿಶಾಲಿ ಪಕ್ಷ ಎಂದರೆ ಅದು ಎಎಪಿ ಎಂದು ಸ್ಪಷ್ಟ ಚಿತ್ರಣ ಮೂಡಿಬಂದಿತು. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಕಿರಣ್ ಬೇಡಿ ಅವರನ್ನು ಚುನಾವಣೆ ಕಣದಲ್ಲಿ ನಿಲ್ಲಿಸಿತು. ಅದರಂತೆ ಕೇಜ್ರಿವಾಲ್ ಪಕ್ಷವು 67 ಸ್ಥಾನಗಳನ್ನು ಪಡೆದು ಶೇ.54.34%ರಷ್ಟು ಮತಗಳನ್ನು ಪಡೆದುಕೊಂಡಿತು. ಬಿಜೆಪಿ ಮೂರು ಸ್ಥಾನಗಳಲ್ಲಿ ಗೆದ್ದು, ಶೇ.32.19%ರಷ್ಟು ಮತಗಳನ್ನು ಪಡೆದುಕೊಂಡಿತು. ಇನ್ನೂ ಕಾಂಗ್ರೆಸ್ ಮೊದಲಬಾರಿಗೆ ಒಂದು ಕ್ಷೇತ್ರದಲ್ಲಿ ಗೆಲುವನ್ನು ಕಾಣದೆ ನಿರಾಸೆಯನ್ನು ಹೊತ್ತು ಕೇಲವ ಶೇ.9.65% ಮತಗಳಿಗೆ ಕುಗ್ಗಿತು.
ಕೇಜ್ರಿವಾಲ್ ತಮ್ಮ ಅಧಿಕಾರ ಅವಧಿಯಲ್ಲಿ ನ್ಯಾಯಯುತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ದೆಹಲಿಯ ಅಧಿಕಾರದ ಕುರಿತು ನಿರಂತರವಾಗಿ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿದರು. ದೆಹಲಿಯಲ್ಲಿ ಅಧಿಕಾರ ನಡೆಸಲು ಕೇಂದ್ರವು ಅವಕಾಶ ನೀಡುತ್ತಿಲ್ಲ. ಅಲ್ಲದೆ ಲೆಫ್ಟಿನೆಂಟ್ ಗವರ್ನ್ರ್ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮೋದಿ ವಿರುದ್ಧ ಹರಿಹಾಯ್ದರು.
ಹಲವಾರು ಅಡೆತಡೆಗಳ ನಡುವೆಯೂ ಕೇಜ್ರಿವಾಲ್ ಅವರ ಎಎಪಿ ಸರ್ಕಾರವು ಶಿಕ್ಷಣ, ಆರೋಗ್ಯ ಮತ್ತು ನೀರು ಹಾಗೂ ವಿದ್ಯುತ್ ಸರಬರಾಜು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿ ಜನರಿಗೆ ಹತ್ತಿರವಾಗಿದೆ. ಅಷ್ಟೇ ಅಲ್ಲದೆ ಶಾಲೆಗಳಲ್ಲಿ 20,000ಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಿಸಿದೆ. 400 ಮೊಹಲ್ಲಾ ಚಿಕಿತ್ಸಾಲಯಗಳನ್ನು ಕಾರ್ಯಗತಗೊಳಿಸಿದೆ. ಮಿತವ್ಯಯವಾಗಿ ಬಳಸಲು ಉಚಿತ ವಿದ್ಯುತ್ ನೀಡಿದೆ. ಹೀಗೆ ತಾನು ಆಶ್ವಾಸನೆ ನೀಡಿದ್ದ 70ಕ್ಕೂ ಹೆಚ್ಚು ಭರವಸೆಗಳನ್ನು ಆಮ್ಆದ್ಮಿ ಸರ್ಕಾರ ಈಡೇರಿಸಿದೆ ಎಂದು ಎಎಪಿ ಪಕ್ಷ ತಿಳಿಸಿದೆ.