ಕ್ರೇಜಿಸ್ಟಾರ್ ಮುಖ್ಯಭೂಮಿಕೆಯ `ದಶರಥ’ ಈ ವಾರ ತೆರೆಗೆ

ಕ್ರೇಜಿಸ್ಟಾರ್ ಮುಖ್ಯಭೂಮಿಕೆಯ `ದಶರಥ’ ಈ ವಾರ ತೆರೆಗೆ

ಕ್ರೇಜಿಸ್ಟಾರ್ ರವಿಚಂದ್ರನ್ ವಕೀಲರಾಗಿ ಅಭಿನಯಿಸಿರೋ ದಶರಥ ಸಿನಿಮಾ ಇದೇ ಶುಕ್ರವಾರ ತೆರೆಕಾಣಲಿದೆ.

ಸಿನಿಮಾದ ಕಥೆ, ಪಾತ್ರವರ್ಗದಿಂದ ದಶರಥ ನಿರೀಕ್ಷೆ ಹುಟ್ಟಿಸಿದೆ.  ಕಾನೂನು ಪಾಲಿಸೋ ದಶರಥನಿಗೆ ಕುಟುಂಬದ ಮೇಲೆ ತುಂಬಾನೇ ಪ್ರೀತಿ ಇರುತ್ತೆ  ಎಂ.ಎಸ್.ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ, ಅನ್ಯಾಯ ಅಕ್ರಮಗಳಾದಾಗ ಅವುಗಳ ವಿರುದ್ಧ ಸಿಡಿದೆದ್ದು ನಿಲ್ಲುವ ನಾಯಕ ದಶರಥನಾಗಿ ರವಿಚಂದ್ರನ್ ಅಭಿನಯಿಸಿದ್ದಾರೆ. ಈ ಸಿನಿಮಾದ ವಿಶೇಷತೆ ಏನಂದ್ರೆ, ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾದ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ. ಅಲ್ಲದೇ, ಸಿನಿಮಾ ಆರಂಭ ಹಾಗೂ ಅಂತ್ಯದ ಕ್ಲೈಮ್ಯಾಕ್ಸ್ ವಾಯ್ಸ್ ಕೂಡ ದರ್ಶನ್ ಅವರದ್ದೇ ಇರಲಿದೆಯಂತೆ.

ಎಂ.ಎಸ್.ಆರ್  ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್, ಸೋನಿಯಾ ಅಗರವಾಲ್, ಅಭಿರಾಮಿ, ರಂಗಾಯಣ ರಘು, ಶೋಭ್‍ರಾಜ್, ಅವಿನಾಶ್, ಮೇಘಶ್ರೀ ಇನ್ನಿತರರು ಅಭಿನಯಿಸಿದ್ದಾರೆ.

ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಸಿನಿಮಾದ ಹಾಡುಗಳು ಮೂಡಿಬಂದಿವೆ.  ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಯು.ಡಿ.ವೆಂಕಟೇಶ್ ಸಂಕಲನ, ಮದನ್  ಹರಿಣ , ಕಲೈ, ನೃತ್ಯ ನಿರ್ದೇಶನ ಹಾಗೂ ಗಣೇಶ್(ಹೈದರಾಬಾದ್) ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.