ಬೆಂಗಳೂರು ಮೆಟ್ರೊ ಸೇವೆ ಶೀಘ್ರ ಪುನರಾರಂಭ

ಬೆಂಗಳೂರು ಮೆಟ್ರೊ ಸೇವೆ ಶೀಘ್ರ ಪುನರಾರಂಭ

ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಹಾಗೂ ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಮೆಟ್ರೊ ಸೇವೆ ನಿಂತು 5 ತಿಂಗಳುಗಳಿಗೂ ಹೆಚ್ಚು ಕಾಲವಾಗಿದೆ. ಇದೀಗ ಮೆಟ್ರೊ ಪ್ರಯಾಣಿಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹಿಸುದ್ದಿ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಬೆಂಗಳೂರು ಮೆಟ್ರೊ ಸೇವೆಯನ್ನು ಪುನರ್ ಆರಂಭಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಆನಂದ್ ರಾವ್ ವೃತ್ತದಲ್ಲಿ ವೃತ್ತದಲ್ಲಿರುವ ಮೇಲ್ಸೆತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೆತುವೆ ಎಂದು ನಾಮಕರಣ ಮಾಡಿದ ಬಳಿಕ ಮಾತನಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮೆಟ್ರೊ ಸೇವೆ ಪುನರ್ ಆರಂಭಿಸಲಾಗುವುದು ಎಂದಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಅವರು, ನಿನ್ನೆ ಸ್ವಾಮೀಜಿಗಳನ್ನು ಭೇಟಿ ಮಾಡಿನ ಚರ್ಚೆ ಮಾಡಿದ್ದೇನೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ. ಇಂದು ಸಚಿವರು ಸಭೆ ಮಾಡಿ ಗೊಂದಲ ಪರಿಹಾರ ಮಾಡುತ್ತಾರೆ ಎಂದಿದ್ದಾರೆ.