ಮದುವೆಯಾಗ್ತಾರಂತೆ ಚಂದನ್ ಶೆಟ್ಟಿ, ನಿವೇದಿತಾಗೌಡ

ಮದುವೆಯಾಗ್ತಾರಂತೆ ಚಂದನ್ ಶೆಟ್ಟಿ, ನಿವೇದಿತಾಗೌಡ

ಬಿಗ್ ಬಾಸ್ ನಿಂದ ಖ್ಯಾತಿ ಪಡೆದು, ಅದನ್ನ ಉಳಿಸಿಕೊಳ್ಳಲು ಸತತ ಯತ್ನ ಮಾಡುತ್ತಿರುವ ರ್ಯಾಪ್  ಸಾಂಗ್ ಹಾಡುಗಾರ ಚಂದನ್ ಶೆಟ್ಟಿ ಮತ್ತು ಆಂಗ್ಲ ಮತ್ತು  ಕನ್ನಡ ಮಿಶ್ರಿತ ಭಾಷೆ ಮಾತಾನಾಡುವ ನಿವೇದಿತಾಗೌಡ ವಿವಾಹವಾಗುವುದು ಪಕ್ಕಾ ಆಗಿದೆ.

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಇವರಿಬ್ಬರ ನಡುವೆ ಏನೋ ಇದೆ ಎಂಬ ಪುಕಾರುಗಳಿದ್ದವು, ಮತ್ತು ಮನೆಯಿಂದ ಹೊರಬಂದ ನಂತರವೂ ದೊಡ್ಡದಾಗಿಯೇ ಗುಸು ಗುಸು ಎಬ್ಬಿಸುತ್ತಲೇ ಇದ್ದ ಈ ಜೋಡಿ. ಅಂಥದ್ದೇನೂ ಇಲ್ಲ ಎಂಬ ಮಾತುಗಳನ್ನು ಹೇಳುತ್ತಲಿದ್ದರು.. ಆದರೆ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲೆ ನಿವೇದಿತಾಗೆ ಉಂಗುರ ತೊಡಿಸಿ, ಪ್ರೀತಿ ಪ್ರಸ್ತಾಪ ಮಾಡಿದ್ದಲ್ಲದೆ, ಶೀಘ್ರವೇ ವಿವಾಹವಾಗುವುದಾಗಿಯೂ ತಿಳಿಸಿದರು.

ಆದರೆ ಈ ವಿಚಾರ ಈಗ ವಿವಾದಾತ್ಮಕವಾಗಿದ್ದು ದೇವಿ ಸನ್ನಿದಿಯಲ್ಲಿ ಈ ರೀತಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದು ಅಕ್ಷಮ್ಯ ಅಪರಾದ ಎಂದು ನೆಟ್ಟಿಗರು ತೀವ್ರ ಅಕ್ರೋಶ ವ್ಯಕ್ತ ಪಡಿಸಿದ್ದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಚಂದನ್ ಶೆಟ್ಟಿ ಈ ವಿಚಾರವಾಗಿ ಪ್ರತಿಕ್ರಿಯಿಸಿ ನಾನು ಮನರಂಜನೆಗಾಗಿ ಮಾತ್ರ ಆ ರೀತಿ ಮಾಡಿದ್ದು ನಿಶ್ಚತಾರ್ಥ ಮಾಡಿಕೊಂಡಿಲ್ಲ ಕೇವಲ ಪ್ರೀತಿ ನಿವೇದನೆ ಮಾತ್ರ ಎಂದು ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಿದ್ದಾರೆ.