ಮಿದುಳು ನಿಷ್ಕ್ರಿಯತೆ ತಡೆಗೆ, ಕೃತಕ ನ್ಯೂರಾನ್

ಮಿದುಳು ನಿಷ್ಕ್ರಿಯತೆ ತಡೆಗೆ, ಕೃತಕ ನ್ಯೂರಾನ್

ಹೃದಯಕ್ಕೆ ರಕ್ತ ಸಂಚಲನ ಮಾಡುವಂತೆ ಸಂದೇಶ ಕೊಡುವುದು, ಲಕ್ವ, ಖಾಯಂ ಮರೆಗುಳಿತನವನ್ನು ಹೋಗಿಸುವಂಥದ್ದಕ್ಕೆ ಮಿದುಳಿಗೇ ಸಿಲಿಕಾನ್ ಚಿಪ್ ಅಳವಡಿಸುವಂಥ ಶೋಧನೆಗಳು ಯಶಸ್ವಿ ಹಂತ ತಲುಪಿದೆ.

ದೇಹದ ಯಾವುದೇ ಭಾಗದ ಜೀವತಂತು(ಸೆಲ್) ನಿಷ್ಕ್ರಿಯವಾಗಿದ್ದರೂ, ಆರೋಗ್ಯಕರ ಜೀವತಂತುವಿನಿಂದ ಸಂದೇಶ ಹೊರಡಿಸುವ ಮತ್ತು ಸಂದೇಶ ಪಡೆಯುವ ಬಯೊನಿಕ್ ನ್ಯೂರಾನ್ ಎಂಬ ಚಿಪ್ ಆವಿಷ್ಕಾರವಾಗಿದ್ದು, ಇದು ಇತರೆ ಸಹಜ ರೀತಿಯ ನ್ಯೂರಾನ್‍ ಗಳಂತೆಯೇ ಸಂಸ್ಕರಣ ಕೆಲಸಗಳನ್ನು ಮಾಡಿ, ಬೇರೆ ಬೇರೆ ನ್ಯೂರಾನ್, ಸ್ನಾಯು ಹಾಗೂ ದೇಹದ ಆವಯವದ ಜೊತೆ ಸಹಜ ರೀತಿಯಲ್ಲೇ ಕಾರ್ಯ ಮಾಡುತ್ತದೆ. ಹೀಗಾಗಿ ಹೃದಯಕ್ಕೆ ರಕ್ತ ಹೋಗುವಂತೆ ಸಂದೇಶ ನೀಡುವಂಥದ್ದು ನಿಷ್ಕ್ರಿಯವಾಗಿದ್ದರೂ, ಈ ಕೃತಕ ನ್ಯೂರಾನ್‍ ನಿಂದ ಅದನ್ನು ಕ್ರಿಯಾತ್ಮಕಗೊಳಿಸಬಹುದು. ಶಾಶ್ವತ ಮರೆಗುಳಿತನ, ಲಕ್ವ ಇತ್ಯಾದಿಯಂಥ ಸಮಸ್ಯೆಯನ್ನು ತಡೆಯಬಹುದು ಎಂದು ಸಂಶೋಧಕರ ತಂಡ ಪ್ರಕಟಿಸಿದೆ.

ಮಾನವ ದೇಹದಲ್ಲಿ ಒಟ್ಟು 866 ನ್ಯೂರಾನ್‍ ಗಳಿವೆ. ಮಿದುಳು, ಬೆನ್ನುಮೂಳೆ, ಸ್ನಾಯುಗಳು, ಸ್ಪರ್ಶೀಯ ಚರ್ಮ, ನೆನಪು ಮತ್ತು ಕಲಿಕೆಗೆ ಮುಖ್ಯವಾಗಿರುವ ಹಿಪೊಕಾಮಸ್, ಸುಪ್ತಮನಸ್ಸು, ಆಲೋಚನೆ ಇತ್ಯಾದಿ ಚಟುವಟಿಕೆಗಳಿಗೆ ನ್ಯೂರಾನ್ ಮುಖ್ಯ. ಇದೇನಾದರೂ ಕೈಕೊಟ್ಟರೆ ಪಾರ್ಶ್ವವಾಯು, ಹೃದಯಸ್ತಂಬನ, ಮರೆವು ಇತ್ಯಾದಿಯಂಥ ನಿಷ್ಕ್ರಿಯತೆ ಉಂಟಾಗುತ್ತದೆ.

ಹೀಗಾಗಿಯೇ ಕೃತಕ ನ್ಯೂರಾನ್‍ ನನ್ನು ಸೃಷ್ಟಿಸಲಾಗಿದ್ದು, ನೇರವಾಗಿ ಇದನ್ನು ಮಿದುಳಿಗೆ ಸೇರಿಸುವ ಬದಲು, ಕಡಿಮೆ ಮಿಲಿ ಮೀಟರ್ ನ ಮೈಕ್ರೋ ಚಿಪ್‍ ನ ಮೂಲಕ ಸೇರಿಸಬಹುದಾಗಿದೆ. ಇದು ನಿಷ್ಕ್ರಿಯ ಜೀವತಂತುಗಳ ಕಾರ್ಯಗಳನ್ನು ಸಹಜ ನ್ಯೂರಾನ್‍ ನ ಶೇ.94 ರಷ್ಟು ರೀತಿಯಲ್ಲೆ ಮಾಡುತ್ತದೆ. ದೇಹದ ಯಾವ ಆವಯವಕ್ಕೆ ಸಂದೇಶ ಕೊಡಬೇಕೊ, ಪಡೆಯಬೇಕೊ ಅದನ್ನೆಲ್ಲ ಮಾಡುತ್ತದೆ ಎಂಬುದು ವಿಜ್ಞಾನಿಗಳು ಕೊಟ್ಟಿರುವ ಮಾಹಿತಿ.

ಅಷ್ಟಕ್ಕೂ ಮಿದುಳು ಕೆಲಸ ಮಾಡಲು ಅನುಕೂಲ ಆಗುವ ಈ ನ್ಯೂರಾನ್‍ ಗಳ ಬದಲಿಗೆ, ಪೂರ್ತಿ ಮಿದುಳನ್ನೇ ಕೃತಕವಾಗಿ ಸೃಷ್ಟಿಸಬಹುದೇ ಎಂಬುದಕ್ಕೂ ಮ್ಯಾಂಚೆಸ್ಟರ್ ನ ವಿವಿಯಲ್ಲಿ ಇಲಿಯ ಮಿದುಳನ್ನು ರೂಪಿಸುವಂಥದ್ದೂ ಸಾಗಿದೆ. ಆದರೆ ಅದಕ್ಕಿಂತ ಸಿಲಿಕಾನ್ ರೂಪದ ನ್ಯೂರಾನ್ ಚಿಪ್ ತಯಾರಿಸಿ, ಅಳವಡಿಸುವುದು ಬೇಗ ಆಗುತ್ತದೆ ಮತ್ತು ಕಡಿಮೆ ವೆಚ್ಚವಾಗುತ್ತದೆ ಎಂಬ ವಿವರಗಳನ್ನೂ ವಿಜ್ಞಾನಿಗಳು ಕೊಟ್ಟಿದ್ದಾರೆ.